ಪುಟ:ಬತ್ತೀಸಪುತ್ತಳಿ ಕಥೆ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬತ್ತೀಸ ಪುತ್ರ ಕಥೆ. ೭೫ ನೋಳು ಹಾಕುವಷ್ಟಅಲ್ಲಿ ಅವನು-ಎಲೈ ರಾಯ : ನಿಲ್ಲು ನಿಲ್ಲು, ನಾನು ಪರ್ವ,ಎನ್ನ ರಕ್ಷಿಸು ರಕ್ಷಿಸು'ಎಂದು ದೀನನಾಗಿ ಬೇಡಿಕೊಳ್ಳಲು; ಅದಕ್ಕೆ ನೀನು ಯಾರು ? ಎಂದು ಕೇಳಲು ; ಕೇಳೋ ಮಹಾರಾಯನೇ? ನಾನು ಮುನ್ನಿನ ಜನ್ಮದಲ್ಲಿ ಕಾಶ್ಯಪಗೋತ್ರದ ಕಾಮಪಾಲನ ಮಗ, ಅತಿವ್ಯವ ಸಂಪಾದಿಸಿ, ದಾನಧರಪರೋಪಕಾರವ ಮಾಡದೆ, ಆ ಹಣವನ್ನು ಈ ಬೆಟ್ಟದ ಗುಹೆಯಲ್ಲಿ ನಿಕ್ಷೇಪವಂ ಮಾಡಿ, ಮೃತನಾದೆನು. ಆಹಣದಾಸೆ ಯಿಂದ ಈಗ ಪಿಶಾಚಿಯಾಗಿ ಕಾದಿರುವೆನು. ನಾನು ಮನುಷ್ಯನಲ್ಲ. ಇಂದಿನ ದಿನ ಸುದಿನ. ಜನ್ಮಾಂತರದಲ್ಲಿ ಮಾಡಿದ ಪುಣ್ಯದಿಂದ ನಿನ್ನಂಥ ಪುಣ್ಯಪುರು ಪನ ದರ್ಶನವಾಯಿತು. ನನಗೆ ಏಶಾಚ ಬಿಡುವಹಾಗೆ ದಯಮಾಡಬೇಕು. ಎಂದು ರಾಯನ ಪಾದಕ್ಕೆಂಗಲಾಗಿ ; ರಾಮನಿಗೆ ಕರುಣವುಂಟಾಗಿ, ತಾನು ಮಾಡಿದ ದಾನಧರ್ಮಗಳಲ್ಲಿ ಒಂದು ದಿನದ ಧರದ ಫಲವ ಧಾರೆಯೆರೆದು ಕೊಡಲು ; ಆಗ ಅವನಿಗೆ ಪಿಶಾಚ ಹೋಗಿ ದಿವ್ಯಪುರುಷನಾದನು. ಆಗ ದೇವತೆಗಳು ದೇವದುಂದುಭಿಗಳ ಧ್ವನಿಗೆಯ್ಯು ಪೂಮಳ ಗದು, ದಿವ್ಯ ವಿಮಾನವಂ ಕಳುಹಿಸಲಾಗಿ ; ಆಪುರುಷ ರಾಯ ಮಾಡಿದ ಉಪಕಾರಕ್ಕೆ ಪೂರ್ವದಲಿ ತಾ ನಿಕ್ಷೇಪ ಮಾಡಿದ್ದ ಹತ್ತು ಕೋಟದ ವ್ಯವಂ ಕಿತ್ತು ಕೊಟ್ಟು, ಆವಿಮಾನದಲ್ಲಿ ಕುಳಿತು, ಸುರಲೋಕಕ್ಕೆ ಪೋಗಲಾಗಿ ; ರಾಯನು ಆ ಹಣವನ್ನು ಸಂಗಡ ಬಂದ ಗಿಜವಾಯನಿಗೆ ಕೊಟ್ಟು ಕಳುಹಿಸಿ, ತಾನು ಇಲ್ಲಿಗೆ ಬಂದು ಸುಖವಾಗಿದ್ದನು ಕಣಾ ? ಇ೦ತು ಕರ್ಣಾಟಭಾಷಾ ವಿರಚಿತಮಪ್ಪ ವಿಕ್ರಮಾದಿತ್ಯ ರಾಯನ ಚರಿತ್ರೆಯಲ್ಲಿ ಕಾಮಕೇಳಿಯೆಂಬ ಪುತ್ತಳಿಯು ಪೇಳಿದ ಹದಿನೇಳನೆಯ ಕಥೆ. ನೀಳ ೧೮ ನೆಯ ಕಧ. ಹದಿನೆಂಟನೆಯ ದಿವಸ ಭೋಜರಾಜನು ಸ್ನಾನ ದೇವತಾರ್ಚನೆ ತಾಂ ಬಲವಂ ತೀರಿಸಿಕೊಂಡು, ಸರ್ವಾಭರಣಾಲಂಕೃತನಾಗಿ, ಎಂದಿನಂತೆ