ಪುಟ:ಬತ್ತೀಸಪುತ್ತಳಿ ಕಥೆ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m 2v ಕರ್ಣಾಟಕ ಕಾವ್ಯಕಲಾನಿಧಿ, ಕರೆದುಕೊಂಡು, ಗಿಣಿರಾಜನ ಬಳಿಗೆ ಬಂದು, ನಿನ್ನ ಸುತರಿಂದ ನನ್ನ ಸತಿ ಯರು ಸಿಕ್ಕಿದರು ಎಂದು ತೋಯಿಸಿ, ಅಲ್ಲಿಂದ ಬರುತ್ತಿರುವಲ್ಲಿ ಪೂರ್ವ ದ ಮಾಯಾಂಗನೆ ಆಕಾಶಕ್ಕೆ ಹದಿನಾಲು ಬಣ್ಣದ ಚಿನ್ನದ ಸರಪಣಿ ಉಯ್ಯಾಲೆ ಹಾಕಿಕೊಂಡು ಉಯ್ಯಾಲೆಮೇಲೆ ಮೋಂಡುಗಾಲ ಮುಚ್ಚಿ ಒಳ್ಳೆಯ ಕಾಲ ನೀಡಿ ಉಯ್ಯಾಲೆಯಾಡುವುದು ಕಂಡು, ವಿಕ್ರಮನು ಅವಳು ಕಾಣದಂತೆ ಹಿಂದುಗಡೆಯಲ್ಲಿ ಹೋಗಿ ಆಕಾಲ ಕತ್ತರಿಸಲು, ಅವಳು ಬೋ ಎಂದಾ ರ್ಭಟಿಸುತ್ತ ಖೇಚರಕ್ಕೆ ಹಾಜಹೋದಳು. ಆಬಳಿಕ ಆಕಾಲಿನಲ್ಲಿ ರ್ದ ಅಂದುಗೆಯಂ ಕಳೆದುಕೊಂಡು ತನ್ನ ನಿಯರು ಸಹಿತ ವಾಯುವೇಗ ದಲ್ಲಿ ಅರಸಿನ ಪಟ್ಟಣದ ಬಳಿಗೆ ಬಂದು ಹೇಳಿ ಕಳುಹಿಸಲು; ಅರಸು ಅಗ್ನಿ ಪ್ರವೇಶವಂ ಬಿಟ್ಟು ಮಂತ್ರಿ ಸಾಮಾಜಿಕರು ಸಹಿತವಾಗಿ ಎದುರುಗೊಂಡು ಬಂದು, ಕರೆದುಕೊಂಡು ಹೋಗಲಾಗಿ ; ಆಪಟ್ಟದರಸಿಗೆ ವಿಕ್ರಮ ಅಂದುಗೆ ಯಂ ಕೊಟ್ಟು ದwಂದ ಅರಸು ಸಕಲರೂ ಸಹಿತ ಸಂತೋಷಪಟ್ಟು, ಆಗ ಅರಸು ತನ್ನ ಅರಸಿತಿಗೆ ಆಅಂದುಗೆಯಂ ಕೊಟ್ಟು, ವಿಕ್ರಮನಿಗೆ ಬಹುಮಾನ ಮಂ ಮಾಡಿ, ತನ್ನ ಬಳಿಯಲ್ಲಿ ಪ್ರಧಾನವಾಗಿರಬೇಕೆಂದು ಒಡಂಬಡಿಸಲಾಗಿ; ವಿಕ್ರಮನು ತನ್ನ ಊರಿಗೆ ಹೋಗಿ ಬರುವೆನೆಂದು ಹೇಳಿ, ಅಲ್ಲಿಂದ ಸಿ ಯರು ಸಹಿತ ಹೊಂಟು ಇಲ್ಲಿಗೆ ಬಂದು ಸುಖವಾಗಿ ಇದ್ದನು, ಕಣಾ ? ಇ೦ತು ಕರ್ಣಾಟಕ ಭಾಷಾ ವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ರತಿಕ್ರಿಯೆಯೆಂಬ ಪುತ್ತಳಿ ಹೇಳಿದ ಆನೆಯ ಕಥೆ. ಸ ಏಳನೆಯ ಕಥೆ. ಏಳನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚನೆ ಭೋಜನ ತಾಂಬೂಲವಂ ತೀರಿಸಿಕೊಂಡು ತನ್ನ ಪ್ರಧಾನಿಯಾದ ಚಿತ್ರ) ಶರ್ಮನ ಕೈಲಾಗಿನಿಂದ ನಿಂಹಾಸನದ ಬಳಿಗೆ ಬಂದು ಬಲದ ಕಾಲಂ ನೀಡು ವ ಸಮಯದಲ್ಲಿ-ಹೋ ! ಹೊಲ ! ನಿಲ್ಲು ನಿಲ್ಲು, ನಮ್ಮ ಒಡೆಯನಾದ ವಿಕ ಮಾದಿತ್ಯರಾಯನ ವೀರವಿತರಗಳುಳ್ಳಡೆ ಏಟು, ಇಲ್ಲವಾದರೆ ಕೆಲ ಸಾರು, ಮೂಾಜ ಕುಳಿತೆ ಖಾದರೆ ನಿನ್ನ ತಲೆ ಸಹಸ್ರ ಹೋಳಾಗುವುದು,