ಪುಟ:ಬತ್ತೀಸಪುತ್ತಳಿ ಕಥೆ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| ಬತ್ತೀಸಪುತ್ತಳಿ ಕಥೆ. ೧an ಆ ಸೋಪಾನದ ರತಿರೂಪಿಣಿಯೆಂಬ ಪುತ್ತಳಿ-ಹೋ ಹೋ ! ನಿಲ್ಲು ನಿಲ್ಲು ಎಂದು ಧಿಕ್ಕರಿಸಲಾಗಿ; ಭೋಜರಾಯನು ಖಿನ್ನನಾಗಿ ಬೇತಿ ನೀಹಾ ಸನದಲ್ಲಿ ಕುಳಿತು, ಚಿತ್ರಶರ್ಮನಿಂದ ಹೇಳಿಸಿದ ಕಥೆ:- ಎಲೆ ಪುತ್ತಳಿಯೇ ? ಕೇಳು. ಧಾರಾಪುರದಲ್ಲಿ ನಮ್ಮ ಭೋಜರಾ ಯನು ಸುಖರಾಜ್ಯಗೆಯ್ಯುವಲ್ಲಿ ಒಂದು ದಿನ ರತಿದೇವಿಯಂತಿರುವ ತನ್ನ ಮಗಳು ಲಲಿತಾಂಗಿ ಬರುವುದ ಕಂಡು,ಇವಳಿಗೆ ತಕ್ಕ ವರನಾಗಬೇಕೆಂದು ಯೋಚಿಸುತ್ತಿರುವಲ್ಲಿ 'ಸಿಂಹಳ ದ್ವೀಪದ ಭುವನೈಕ ವೀರನೆಂಬ ಅರಸಿನ ಮಗ ದಿಲೀಪನೆಂಬವನು ಮಹಾ ಬುದ್ದಿಶಾಲಿ ರೂಪಸ್ಸನೆಂಬುವುದ ಕೇಳಿ, ರಾಯನಿಂತೆಂದನು:-ಹೆಣ್ಣ ಕೊಡುವಲ್ಲಿ ಕುಲ ತೀಲ ವಿದ್ಯೆ ಬಳಗ ಯಯೌವನ ಶರೀರದಾರ್ಡ್ಯ, ಧನವಿರುವುದ ನೋಡಿ, ಈ ಏಳು ಗುಣಗಳಿದ್ದವನಿಗೆ ಹೆಣ್ಣ ಕೊಡಬೇಕು; ಮಿಕ್ಕ ಗುಣಗಳೆಲ್ಲಾ ದೈವಾಧೀನವೆಂಬ ನೀತಿಯಿರುವುದು ಎಂದು ಹೇಳಿ, ಲಗ್ನ ನಿಶ್ಚಯಮಾಡಿ ಚಪ್ಪರ ಮೇಲುಕಟ್ಟು ಕಟ್ಟಿಸಿ, ನಂಟರಿ ಸ್ವರ ಕರೆಯ ಕಳುಹಿಸಿ, ಸಕಲ ಸಂಭ್ರಮದಿಂದ ರಾಯ ಭೂರಿಯ ಬ್ರಾಹ್ಮ ಇರಿಗೆ ಕೊಡುತ್ತಿರುವಲ್ಲಿ ಅವರೊಳಗೊಬ್ಬ ಬ್ರಾಹ್ಮಣೇತಮ ರಾಯನ, ಕೈಯಲಿ ದಾನವ ತೆಗೆಯದೆ ಇರಲವನ್‌ ರಾಯ ಕೇಳಿದನು:- ನಾವು ಕೊಟ್ಟಂಥ ದಾನ ಎಲ್ಲರೂ ತೆಗೆದುಕೊಂಡುದ ಕಂಡು, ನೀನು ತೆಗೆಯದಿ ರುವ ಕಾರಣವೇನೆಂದು ಶಂಕಿಸಿ ಕೇಳಲಾಗಿ; ಅವನಿಂತೆಂದನು:-ಕೇಳ್ಳೆಯ ರಾಯನೇ ! ನಿನಗೆ ಪುತ್ರ ಸಂತಾನವಿಲ್ಲದ ನಿಮಿತ್ತ ನಿನ್ನ ಕೈ ದಾನವ ತೆಗೆ ಯಲಾಗದೆಂದ ಮಾತ ರಾಯ ಕೇಳಿ, ಕೋಪವ ತಾಳಿ, ಅವನ ಊರ ಬಿಟ್ಟು ಹೋಯಿಡಿಸಿ ಬಿಡಲಾಗಿ ; ಅವನು ಊರ ಮುಂದಿರುವ ಚಂಡಿಕಾ ದೇವಿಯ ಗುಡಿಗೆ ಹೋಗಿ ಬಹು ಕ್ಷು ತಿನಿಂದ ಬಳಲಿ ಇಂತೆಂದನು:-- ಹಸಿವು ರೂಪ ಕೆಡಿಸುವುದು, ತಡವ ಮಾಡುವುದು, ಸಂಭೋಗದ ಇಚ್ಛೆ ತಪ್ಪಿಸುವುದು, ದೃಷ್ಟಿ ಕಾಣಿಸದಂತೆ ಮಾಡುವುದು, ತಪಸ್ಸು ಕೆಡಿಸುವುದು, ಸತಿಸುತರು ಮುಂತಾಗಿ ಎಲ್ಲರಲ್ಲಿಯ ಭೇದಗಳ ಹುಟ್ಟಿಸುವುದು, ಪಾ-1. ಸಿಂಗದೇಶದ, 2. ಬಲವಿದ್ಯಾಯಾಪಯ ಹೊನ್ನು ಉಂಟಾಗಿ ಶರೀರ ಭದ್ರವಾಗಿ ಇರುವುದು. ಈ ಏಳು ಗುಣಗಳು ನೋಡಿ ಇದ್ದವನಿಗೆ ಕೊಡ ಬೇಕೇ ಹೊರತು,