ಪುಟ:ಬತ್ತೀಸಪುತ್ತಳಿ ಕಥೆ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ وه ಟ ಕರ್ಣಾಟಕ ಕಾವ್ಯಕಲಾನಿಧಿ. ಕವಿಗೆ ಉತ್ತರಂಗುಡದೆ ಅಭ್ಯಂಗನದ ಮನೆಗೆ ಹೋಗಿ, ಎಳೆದುಕೊಳ್ಳು ತಿರಲು ; ಇತ್ತ -ರಾಯನು ನನಗೇನೂ ಉತ್ತರಕೊಡದೆ ಸುಮ್ಮಗೆ ಎದ್ದು ಹೊದನೆಂದು ಮಹಾಸಂತಾಪದಿಂದ ಹೋಗುವ ಕವಿಯನ್ನು ಪ್ರಧಾನ ಕಂಡು ರಾಯನೊಡನೆ ಹೇಳಿದುದ ಕೇಳಿದನು. ಆಬಳಿಕ-ಎಲೈ ಕವಿಯೇ ! ರಾಯ ನಿನಗೆ ಕೊಟ್ಟ ತ್ಯಾಗ ನನಗೆ ಕೊಡುತ್ತಿಯಾ ? ಎಂದು ಕೇಳಲಾಗಿ,-ಅವಶ್ಯ ಕೊಡುವೆ. ನನ್ನ ಗ್ರಾಹೋಪಾಯಕ್ಕೆ ನೀವೇನು ಕೊಡುತ್ತಿರೋ ನೋಡಿ ಎನ್ನಲಾಗಿ ; ಪ್ರಧಾನನು ಆ ಕವಿಗೆ ನಾಲ್ಕು ಲಕ್ಷ ವರಹನಂ ಕೊಟ್ಟು, ರಾಯನ ತ್ಯಾಗ ನನಗೆ ಸಂದಿತು ಎಂದು ಪ್ರಧಾನ ಹೇಳಿದುದಕ್ಕೆ, ಕವಿ ಯು-ಹಾಗೆಯೇ ಸರಿ ಎಂದು ಹೇಳಿ, ಆಪ್ರಧಾನಕೊಟ್ಟ ನಾಲ್ಕು ಲಕ್ಷ ದ್ರವ ವಂ ತೆಗೆದುಕೊಂಡು ಹೋಗುತಿದ್ದನು. ಅಪ್ಪ ರಾಯನು ಮಿಂದು, ದೇವತಾರ್ಚನೆ ಭೋಜನ ತೀರಿಸಿಕೊಂಡು, ಒಲಗಸಾಲೆಗೆ ಬಂದು, ಸಿಂಹಾ ಸನದಲ್ಲಿ ಕುಳಿತುಕೊಂಡು, ಊಳಿಗದವರ ಕರೆದು, ಭಿಕ್ಷುಕವಿಯಂ ಕರೆದು ತರಹೇಳಿ ಎಣ್ಣೆಮಂಡೆಯಲಿದ್ದಾಗ ಬಂದು ಕಾಣಿಸಿಕೊಂಡು ಶ್ಲೋಕನ ಹೇಳಿದುದುಂದ ಅವನಲ್ಲಿ ಮಾತನಾಡುವುದಕ್ಕೆ ಇಲ್ಲದೆ ಚತುಮೆಯನ್ನು ಮನಸ್ಸಿನಲ್ಲಿ ಧಾರೆಯೆರೆದು ಕೊಟ್ಟೆ ಎಂದ ಮಾತಿಗೆ ಪ್ರಧಾನನಿಂತೆಂದನು:- ನೀವು ಆಕವಿಗೆ ಕೊಟ್ಟ ರಾಜ್ಯ ತ್ಯಾಗವನ್ನು ನನಗೆ ನಾಲ್ಕು ಲಕ್ಷ ವರಹ ಕೈ ವಾದನೆಂದ ಮಾತಿಗೆ, ರಾಯ ಆಕವಿಯಂ ಕರೆಸಿ ಕೇಳಲಾಗಿ ;-- ಎಲೆ ರಾಯನೇ ! ಚಿನ್ನದ ಮಳೆ ಹೊಯ್ಯುವಾಗ ಅಭಾಗ್ಯದ ಕೊಡೆಯನ್ನು ಹಿಡಿದೆ ಎನ್ನಲಾಗಿ; ಕವಿಗೆ ಪುನಃ ಸವಾಲಕ್ಷವರಹವಂ ಕೊಡಿಸಿ, ಕಳುಹಿದನೆಂದು ಹೇಳಲಾಗಿ-ನವಮೋಹಿನಿ ಎಂಬ ಪುತ್ತಳಿ-ಐಸಲೇ ನಿಮ್ಮ ಒಡೆಯನ ವಿತ ರಣವು ? ಎಂದು ನಗುತ್ತ ಹಾಸ್ಯಂಗೆಯ್ದು ಹೇಳಿದ ಉಪಕಥೆ - ಕೇಳ್ಳೆಯ ಚಿತ ಕರ್ಮನೇ ? ನಮ್ಮ ವಿಕ್ರಮಾದಿತ್ಯರಾಯನು ಈ ರಾಜ್ಯವನ್ನು ಸುಖದಿಂದ ಪಾಲಿಸುವಲ್ಲಿ ಒಂದು ದಿನ ಮಪುರದ ವರ್ತಕ ಬಂದು, ರಾಯನೊಡನೆ-ನಮ್ಮ ದ್ವಿಪಾಂತರಕ್ಕೆ ಹೋಗಿ ವ್ಯಾಪಾರ ತೆಗೆದು ಕೊಂಡು ಬರುವಲ್ಲಿ ಸಮುದ್ರ ಮಧ್ಯದಲ್ಲಿ ಹಡಗೊಡೆದು ತಂದ ವ್ಯಾಪಾರ ವೆಲ್ಲಾ ಹೋಗಿ ಬwದೆ ಬಂದೆ, ಎನ್ನಲಾಗಿ ; ರಾಯನು-ಹಡಗೊಡೆದ ಬಗೆ ಹೇಗೆ ? ಎಂದು ಕೇಳಲು ; ಅವನು ಪಾತಾಳಲೋಕದಿಂದ ಸಮುದ್ರ ಮಧ್ಯ m