ಪುಟ:ಬತ್ತೀಸಪುತ್ತಳಿ ಕಥೆ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬತ್ತೀಸಪುತ್ತಳಿ ಕಥೆ. ವುದಕಂದ, ಅವಳಿಗೆ ಮದುವೆಯಿಲ್ಲದೆ ರಾಜ್ಯವಾಳುವಳು ಎನ್ನಲು; ರಾಯ ಕೇಳಿ, ಅವನ ಕರೆದುಕೊಂಡು ಆಕಾಶಮಾರ್ಗದಲ್ಲಿ ಆ ಪಟ್ಟಣಕ್ಕೆ ಹೋಗಿ, ಬೀದಿಗಳಲ್ಲಿ ಚರಿಸುತ್ತ ಆ ಚಂದ್ರಲೇಖೆಯ ಉಪ್ಪರಿಗೆಯ ಬಳಿಗೆ ಹೋಗು ವುದ ಆರಾಕ್ಷಸ ಕಂಡು,ಯಾವನೋ ಹೊಸವ, ತಿನ್ನಬೇಕೆಂದು ತೊಡೆ ಭು ಜವಂ ತಟ್ಟಿ ಊಾಸೆಯಂ ತಿರುಹುತ ಬಂದು, ರಾಯನ ಹೊಡೆಯಲಾಗಿ ; ರಾಯ ಆ ಏಟ ತಪ್ಪಿಸಿಕೊಂಡು, ಆ ರಾಕ್ಷಸನ ಹೊಡೆದು ಮುಂದಲೆವಿಡಿದು ನೆಲಕ್ಕೆ ಬಡಿದು ಅಪ್ಪಳಿಸಲಾಗಿ ; ಆ ರಾಕ್ಷಸನು ಮೃತವಾದುದ ಎಲ್ಲರೂ ಕಂಡು ಆಶ್ಚಯ್ಯಪಟ್ಟು, ಅರಸನಾದ ಚಂದ್ರಲೇಖೆಗೆ ಬಂದು ಹೇಳಲಾಗಿ ; ಅವ ಳು ರಾಯನ ವರ್ತಕರ ಸಹ ಕರೆಯಬಿಟ್ಟು ನಿಂಹಪೀಠದಲ್ಲಿ ಕುಳ್ಳಿರಿಸಿ ಸತ್ಯ ರಿಸಿ, ರಾಯನ ನೋಡಿ ನೀನು ನರನೋ ಹರಿಯೋ? ಸುರಪತಿಯೋ? ಮನಸಿಜನೋ ? ಯಾರೆಂದು ಕೇಳಲಾಗಿ ;-ನಾನು ವಿಕ್ರಮಾದಿತ್ಯರಾಯ ಎಂದುದಂ ಕೇಳಿ, ರಾಯನ ಪಾದಕ್ಕೆ ಜಗಿ,-ಶತಿರವಿಗಳಂತೆ ಕಾಂತಿಯುಳ್ಳ ನಿನ್ನ ಸಂದರ್ಶನ ಮಾತ್ರದಿಂದ ಇಂದಿಗೆ ನಾನು ಧನ್ಯಳಾದೆನು, ಎಂದುದಕ್ಕೆ, ರಾಯನಿಂತೆಂದನು :-ಎಲೆ ಅರಸಿಯೇ ' ಈ ರಾಕ್ಷಸನು ಇಲ್ಲಿ ಇದ್ದ ಕಾರಣ ವೇನೆಂದು ಕೇಳಲಾಗಿ ; “ ಮುನ್ನೊಬ್ಬ ಯಾಚಕಬ್ರಾಹ್ಮಣ ಬಂದು ತನ್ನ ವಿದ್ಯಾಕುಶಲತೆಯ ಶೋ' ತನ್ನ ದಾರಿದ, ತೀರಬೇಕೆಂದು ಕೇಳಲಾಗಿ, ಅವನಿಗೆ ಕೋಟಿ ಧನನಂ ಕೊಟ್ಟು ಕಳಹಿಸುವಲ್ಲಿ ; ನಮ್ಮ ಪುರೋಹಿತ ಅವನ ತಿರಸ್ಕರಿಸಿ ನುಡಿಯಲಾಗಿ ; ಆತ ಕೋಪಿಸಿ-ನೀನು ರಾಕ್ಷಸನಾಗು. ಇಲ್ಲಿ ಇದ್ದುಕೊಂಡು ಹೊಸಜನ ಬಂದರೆ ತಿನ್ನು ಎಂದು ಶಾಪವಿತ್ತನು. ಅದ ಕಂಡು ಆಗ ಇವನಿಗೆ ಈ ಶಾಪ ವಿಮೋಚನೆ ಎಂದಿಗೆ ? ಎಂದು ನಾನು ಕೇಳಿ ಕೊಳ್ಳಲಾಗಿ ; ವಿಕ್ರಮಾದಿತ್ಯರಾಯನು ಇಲ್ಲಿಗೆ ಬಂದಾಗ ಆತನಿಂದ ತಿರುವು ದೆಂದು ಹೇಳಿ ಹೋದುದುಂದ, ಇಂದಿಗಾತನ ಶಾಪ ತೀರಿತು ' ಎನ್ನಲಾಗಿ : ಆ ರಾಕ್ಷಸರೂಸಳದು ಬ್ರಾಹ್ಮಣೋತ್ತಮರೂಪಾಗಿ ಆ ಪುರೋಹಿತ ಬಂದು ಎದುರಾಗಿ ನಿಂತುಕೊಂಡ ಬಳಿಕ, ರಾಯ ಧನದತ್ತನಿಗೆ ತನ್ನ ವೀರ ವಿತರಣೆ ಸಾಹಸ ಪರಾಕ್ರಮ ಮುಂತಾದುದೆಲ್ಲವ ಉಪದೇಶವಂ ಮಾಡಿ ಕೊಟ್ಟು, ಆ ಧನದತ್ತನಿಗೆ ಆ ಚಂದ್ರಲೇಖೆಯನ್ನು ವಿವಾಹ ಮಾಡಿಸಿ, ಆ ಪಟ್ಟಣದ ಪಟ್ಟಾಭಿಷೇಕವಂ ಮಾಡಿಸಿ-ಸುಖವಾಗಿದ್ದುಕೊಂಡಿರಿ, ಎಂದು ಹೇಳಿ, S M