ಪುಟ:ಬೃಹತ್ಕಥಾ ಮಂಜರಿ.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೬ ಬೃ ಹತ್ಯೆ ಥಾ ನ ೦ C ರಿ. ಪಾರಾಯಣರಾಗಿ ಪ್ರಾರಂಜಕರಾಗಿ ಬಾಳುತ್ತಿದ್ದರು ಎಂದು ಹೇಳುವಷ್ಟರಲ್ಲಿ ಬೆಳೆಗಾ ಯಿತು, ಕಥೆ ಹೇಳುತ್ತಿದ್ದ ಪ್ರತಿಬಿಂಬವು ಇನ್ನು ವಿಶ್ರಾಂತಿಸುಖವನ್ನು ಪಡೆಯುತ್ತೇ ನೆಂದು ಸುಮ್ಮನಾದುದು. ಭೂಗವತಿಯು ಪ್ರತಿಕ್ಷಣದಲ್ಲಿಯೇ ಎದ್ದು ಬಂದು ಕೈ ಹಿಡಿಯಬೇಕೆಂದು ಬೇಡಿಕೊಳ್ಳಲು ಅವಳಲ್ಲಿ ಸೇರಿ ಈ ದಿನದಲ್ಲಿ ಆಕೆಯನ್ನು ರತಿಸುಖದಲ್ಲಿ ಸಂತೋಷಗೊಳಿಸಿದನು. ಅನಂತರ ಒಂದೊಂದು ದಿನಮೋಟೊಳುಸೇರಿ ಸಕಲ ಸೌಖ್ಯಂಗಳಂ ಹೊಂದುತ್ತಾ, ಅವರೊಳೊ ರೈರಿಗೂ ಮಮತೆಯಗಲದಂತೆಎಲ್ಲರಂ ಸಂತೋಷಿಸುತ್ತಿ ರುವಂತೆ ಕ್ರಮಂ ಮಿರಲು ಸರಿಯಲ್ಲವೆಂದುಯೋಚಿಸಿದವನಾಗಿ, ಪ್ರಯಾಣೋನ್ಮುಖ ನಾಗಲು ಆ ನಾಲ್ವರೂ ಜೊತೆಯೊಳು ಹೊರಟು ಬರಲು ಪ್ರಯಾಣಂಗಳಂ ಮಾಡಿಕೊ “ಲದಂ ಕಂಡವನಾಗಿ ಎಲೈ ತರುಣಿಮಣಿಗಳಿರಾ ? ನೀವೆಲ್ಲರೂ ನನ್ನೊಂದಿಗೆ ಬಂದ ವರಾದರೆಈ ರಾಜ್ಯವ ಆನಾಯಕಮಾಗಿ ಹಾಳಾಗುವದು ನೀವಂತ ಮಾಡದೇ ಸರ್ದಿ ಯಂ ಕಲ್ಪಿಸಿಕೊಂಡು ಕೇಬರುನನ್ನ ವೊಡನಹೊರಡುವರಾಗಿರೆ, ಮತ್ತೆ ಕೆಲಬರು ರಾ ಜ್ಯ ಪರಿಪಾಲನಾಕಾರದೊಳಿರಬೇಕು ಅವರು ಬಂದ ಬಳಿಕ ನನ್ನೆಡೆಯೊಳಿರ್ದವರು ರಾ ಜ್ಯಪರಿಪಾಲನಾರ್ಥವಾಗಿ ಹೋಗಬೇಕು, ಓರೋಗ್ರರಿರ್ದು ರಾಜ್ಯ ಮಂ ಫಾಲಿಸುವೆ ನಂದೊಡೆ ನಡೆಯಲಾರದೆಂದು ಸಮ್ಮತಿಯುಂ ಕೇಳಿ ಆನಂ ಸಮ್ಮತಗೊಳಿಸಿಪಾ ವತೀ, ಲೀಲಾವತಿಯರಂ ಸಂಗಡ ಬರುವಂತೆ ಗೊತ್ತು ಮಾಡಿ ಕಲಾವತೀ ಭೋಗವತಿ ಯರ ಮಣಿದ್ವೀಪದ ರಾಜ್ಯಭಾರಕಾರಕ್ಕಾಗಿರುವಂತೆ ಪರುಠವಿಸಿ, ತನ್ನಿ ರುಕಾಂ ತೆಯರು ಜೊತೆಗೊಂಡು, ಮಂತ್ರಿಯಾದಭಟ್ಟಿಯೊಂದಿಗೆ ಪಲ್ಲಕಿಯನ್ನೇರಲು ಬೆತಾ ಭಂ ಆರಿಗೂಗೋಚರವಾಗದೇ ಆ ವಿಮಾನನಂ ತಲೆಯೊಳು ಹೊತ್ತುಕೊಂಡು ಆಕಾಶ ಮಾರ್ಗವಾಗಿ ಬರುತ್ತಿರೆ ಕುಬೇರಪ್ರಷ್ಟ ಕದಂತೆ ರಾರಾಜಿಸುತ್ತಿರ್ದಾಪಲ್ಲಕ್ಕಿಯುವಾ ಭವದೇಶದ ಸುಂದರೀ ಮುಖೇಂದೀವರದಂತೆ ಶೋಭಿಸುತ್ತಿರುವ ಉಜ್ಜಯಿನೀ ಇರ ಮಂಜೇರಿ ಸುಖವಾಗಿರ್ದರು. ಈಪರಿಯೊಳು ಕಥೆಗಳನ್ನು ಹೇಳಿದ ತನ್ನ ಮಂತ್ರಿಯ ಕುರಿತು ಎಲೈ ಮಂತ್ರಿ ಖಾಮಣಿಯೇ ? ನೀಂಪೇಳಿದ ಆಶ್ಚರ್ಯಕರವಾದೀ ಎಕ್ರಮಾರ್ಕರಾಯನ ಚರಿತ್ರೆ ಯಂ.ಕೇಳಿಆಹ್ಲಾದ ಹೃಯನಾದೆನು ಇಂತಿಹ ಅತಿಶಯವಾಗಿಯೂ ಸುಂದರವಾಗಿ ಯೂ ಇರುವ ಕಥೆಗಳಂ ನಾನೇವರಿಗಂ ಕೇಳಲೇಯಿಲ್ಲವು ನಿನ್ನಿಂದ ಕೇಳಿದವನಾದೆನು ಎಂದು ಆ ಮಂತ್ರಿಯಂ ಬಹುಮಾನಿಸಿ ಅಂದಿನೋಲಗಮಂ ಬೀಳ್ಕೊಟ್ಟನಂಬಲ್ಲಿಗೆ ಕ ರ್ನಾಟಕ ಭಾವಾವಹನರಚಿತ ಸೌಂದಯ್ಯಾದ್ಭುತಝರೀಚಿತ್ರಬೃಹತ್ಕಥಾಮಂಜರಿಯೊಳು ಎರಡನೆ ಭಾಗವ ಸಂಪೂರ್ಣವಾದುದು.