ಪುಟ:ನಿರ್ಯಾಣಮಹೋತ್ಸವ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ. ನಾವು ಹೇಳುವದಿಲ್ಲ; ಆದರೆ ಸ್ವತಃ ಜಗತ್ತಿಗೆ ಶಂಕರತ್ವ ವನ್ನು ಕೊಟ್ಟು, ತಾವು ಕಿಂಕರರಾಗಿ ಆಚರಿಸಿದ ಶ್ರೀ ಶೇಷಾಚಲಸದ್ದು ರುಗಳ ಶಿಷ್ಯರೆನಿಸಿಕೊಳ್ಳುವವರು ತಮ್ಮ ಗುರುಗಳು ಮಹಾಶ್ರೇಷ್ಠರೆಂದು ಅಭಿಮಾನಪಟ್ಟರೆ ನೀವು ಒಪ್ಪಬಹುದೇ? ಅಂಥ ದುರಭಿಮನದ ಶಿಷ್ಯರನ್ನು ಅಗಡಿಯ ಸಾಧುಗಳ ಶಿಷ್ಯರೆಂದಾದರೂ ನೀವು ಭಾವಿಸಬಹುದೊ? ಜಗತ್ತೇ ಈಶ್ವರಸ್ವ ರೂಪವೆಂದು ಶ್ರೀ ಸದ್ದು ರವು ಬೋಧಿಸುತ್ತ, ತಾನು ಸ್ವತಃ ಆಚರಿಸಿ ತೋರಿಸುವಾಗ, ಆತನ ಶಿಷ್ಯರು ತಮ್ಮ ಗುರುಗಳೇ ಎಲ್ಲರಿ ಗಿಂತಲೂ ಶ್ರೇಷ್ಠರೆಂದು ಹೇಳಿಕೊಂಡರೆ, ಯಾರು ಕೇಳಬೇಕು? ಆದರೂ ಅಗಡಿಯ ಸಾಧುಗಳು ಶ್ರೇಷ್ಠರೆಂತಲೇ ನಾವು ಹೇಳುವೆವು; ಆದರೆ ಯಶರಲ್ಲಿ? ದಾ ಸಭಾವದಲ್ಲಿ |! ಶ್ರೀನಾಧಗಳು ತಮ್ಮಲ್ಲಿ ಅಗಾಧವಾದ ಸಾವು ರ್ಥ್ಯವಿದ್ದರೂ, ಅದನ್ನು ಜಗತ್ತಿನಲ್ಲಿ ಮೆರಿಸಿ ಶ್ರೇಷ್ಠರೆನಿಸಿಕೊಳ್ಳಲಿಲ್ಲ; ಆದರೆ ಅಭಿ ಮನದಿಂದ ತಮ್ಮ ಸಾಮರ್ಥ್ಯವನ್ನು ಸ್ವಲ್ಪವಾದರೂ ತೋರಗೊಡದೆ, त्वद्भक्तभक्तपारचारकभक्तभक्तदासस्यदासातमांस्मर. लोकपाल” ಎಂಬಂತೆ ಕಿಂಕರರ ಕಿಲಕರರೆನಿಸಿ ಕೊಳ್ಳು ವದರಲ್ಲಿ ಶ್ರೇಷ್ಠ ರಾದ ರು, ಅದರಂತೆ ತಾವು ಮಹಾಜ್ಞಾನಿಗಳಿದ್ದರೂ, ಕರ್ಮಮೊರ್ಗದಲ್ಲಿ ಔದಾಸೀನ್ಯವನ್ನು ತಾಳಿ, ಜಗತ್ತನ್ನು ಭ್ರಾಂತಿಗೀಡುಮಡುವದರಲ್ಲಿ ಶ್ರೇಷ್ಠರೆನಿಸಿಕೊಳ್ಳಲಿಲ್ಲ; ಆದರೆ ತಾವು ಮಹಾಭಯಗ್ರಸ್ತ ಸಾಂಪ್ರದಾಯಾಭಿಮಾನಿಗಳಂತೆ ವರ್ಣಾಶ್ರಮೋಚಿತ ಕರ್ಮಗ ಳನ್ನು ಭಾವನಾಯುಕ್ತವಾಗಿ ಆಚರಿಸಿ, ಡಾಂಭಿಕರ ಕರ್ಮಾ ಚರಣೆಯನ್ನು ನಿರ್ಭಿಡೆ ಯಿಂದ ನಿಷೇಧಿಸಿ ಕರ್ಮೊಚರಣೆಯ ರಹಸ್ಯವನ್ನು ಸ್ಪಷ್ಟವಾಗಿ ತಿಳಿಸುವವರಲ್ಲಿ ಶ್ರೇಷ್ಠರೆನಿಸಿಕೊಂಡರು; ಹಾಗೆಯೇ ಸಾಧುಗಳು ಕಲ್ಲು ಕೊಟ್ಟು ಬಂಗಾರದೂಡು ವದರಲ್ಲಿ ಯ, ಸತ್ತವರನ್ನು ಬದುಕಿಸುವದರಲ್ಲಿ ಯ, ಮಹಾರೋಗಾದಿಗಳನ್ನು ಸ್ಪರ್ಶಮತ್ರದಿಂದ ನಿವಶರಣಮಾಡುವದರಲ್ಲಿ ಯ, ಬಂಜೆಗೆ ಮಕ್ಕಳನ್ನು ಕಂಡು ವದರಲ್ಲಿ ಯ, ದರಿದ್ರರನ್ನು ಶ್ರೀಮಂ ಶರಾಗಮಾಡುವದರಲ್ಲಿ ಯ ಅರ್ಥಾತ ಪ್ರಾರಬ್ದ ಭೋಗಕ್ಕೆ ಚ್ಯುತಿಯನ್ನುಂಟುಮಡುವದರಲ್ಲಿ ಶ್ರೇಷ್ಠರೆನಿಸಿಕೊಳ್ಳಲಿಲ್ಲ; ಆದರೆ ಪ್ರಸಂಗವಶಾತ್ ಪ್ರಕೃತಿಗುಣದಿಂದ ನಿರಾಲೋಚಿತವಾಗಿ ಇಂಥ ಹಲವು ಆಲೌಕಿಕ ಕೃತಿಗಳೊದಗಿದರೂ, ಅವುಗಳವಿಷಯವಾಗಿ ನಿರಭಿಮಾನಿಗಳೂ-ಸ್ಕೃತಿ ಹೀನರೂ ಆಗುವದರಲ್ಲಿ ಯ, ಇಂಥ ಮಾಯಾಸ್ಪದ ವ್ಯವಹಾರಗಳಿಂದ ಜನರ ವಾಸನೆಗಳನ್ನು ಹೆಚ್ಚಿಸಲಿಕ್ಕೆ ಹೇಸಿ, ಇಂಥ ವ್ಯವಹಾರಗಳಿಗೆ ಆಸ್ಪದವು ದೊರೆಯ ದಂತೆ ಎಚ್ಚರಪಡುವದರಲ್ಲಿ ಯಾ, ಮೊಯಾರಹಿತವಾದ ಪರಿಶುದ್ಧಾ ಚರಣೆ,