ಪುಟ:ನಿರ್ಯಾಣಮಹೋತ್ಸವ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣದುಹೋತ್ಸವ, ೧೦೫



ಇ ಟಿ ೧. ಶಾಸ್ತ್ರಿಗಳು ವಪನ ಮಾಡಿಸಿಕೊಂಡು, ಗುರುಪುತ್ರ ಧರ್ಮವೆಂದು ಶ್ರೀ ಚಿದಂಬರ ಮೂರ್ತಿಗಳೊಡನೆ ಶ್ರೀ ಗುರುವಿನ ಉತ್ತರ ಕ್ರಿಯೆಗಳನ್ನು ಮಾಡಹತ್ತಿದರು, ಎರಡು ದಿನದ ಕ್ರಿಯೆಗಳಾದವು; ಮೂರನೆಯ ದಿನ ಆಸ್ತಿ ಸಂಚಯನವಾಯಿತು; ಶ್ರೀ ಗುರುಗಳ ಮುಖದಲ್ಲಿಟ್ಟಿದ್ದ ಅವರ ಪವಿತ್ರದ ಉಂಗುರವು ಕರಗದೆ, ಇದ್ದಕ್ಕಿದ್ದ ಹಾಗೆಯೇ ಇತ್ತು, ಅದರಂತೆ ರುದ್ರಾಕ್ಷವೂಲೆಯೊಳಗಿನ ತ೦೦ಬ್ರದತ೦ತಿಯ ಚೂರುಗಳು ಕರಗದೆ ಹಾಗೇ ಇದ್ದವು. ಶಿಷ್ಯರು ಅಸ್ಸಿಸಂಚಯನವನ್ನು ಬಹುಜಾಗ್ರ ತೆಯಾಗಿ ಮೂಡುವದನ್ನು ನೋಡಿ, ಲೇಖಕನು ಶಿಷ್ಯನುಂಡಲಿಯನ್ನು ಕುರಿತು ಪವಿತ್ರ ಭಸ್ಮದಲ್ಲಿ ಶ್ರೀಗುರುವಿನ ಆಮೌಲ್ಯಗುಣಗಳೇನಾದರೂ ಸಿಗುತ್ತವೆ ಯೋ ಹ್ಯಾಗೆ ನೋಡಿ ಸಂಗ್ರಹಿಸಿರಿ” ಎಂದು ಸೂಚಿಸಿದನು! ಅಸ್ಸಿ ಸಂಚಯವಾಗಿ ಭಸ್ಮವನ್ನು ತುಂಗಭದ್ರೆಗೆ ಕಳಿಸಿದರು, ಅಸ್ಥಿಗಳನ್ನು ಕೃಷ್ಣಾಬಾಯಿಯಲ್ಲಿ ಹಾಕಿ ಬೇಕಂದು ಕೂಡಿಟ್ಟಿ ರುವರು, ಕಾಲಚಕ್ರದ ಗತಿಗನುಸರಿಸಿ ಮೂರನೇ ದಿವಸ ವಾಯಿತು, ನಾಲ್ಕನೇದಿವಸವಾಯಿತು, ಹೀಗೆ ಒಂದೊಂದೇದಿವಸಗಳು ಕ್ರಮಿಸು ಶ, ಆಯಾಬನದ ಕರ್ಮಗಳು ಯಥಾಸಾಂಗವಾಗಿ ಸಾಗುತ್ತ, ೧೦ನೆಯ ದಿವಸವು ಪ್ರಾಪ್ತ ವಾಲಿ, ತು, ಎರಡನೆಯ ದಿವಸದಿಂದ ವೇ, ಶಾ, ಸರಾ .ರಾ .ಶ್ರೀಕಂಠ ಶಾಸ್ತ್ರಿಗಳು ಸಂಜೆಯಮುಂದೆ ಸುಶ್ರಾವ್ಯವಾಗಿ ಗರುಡಪುರಾಣವನ್ನು ಹೇಳುತ್ತಿದ್ದ ರು, ಹತ್ತನೆಯ ದಿವಸ ದಶಗಾತ್ರವಿಧಿಯಿಂದ ಶ್ರೀ ಗುರುವಿಗೆ ಸಕ್ಷದೇಹ ಪ್ರಾಪ್ತಿಯಾಯಿತು, ಆಗ ವಾಸನಾ ಪರೀಕ್ಷೆಗಾಗಿ ಮಾಡಬೇಕಾಗುವ ಕಾಕಪಿಂಡವು ಮಹತ್ವದ ವಿಷಯವಲ್ಲವೇ ? ಕಾಕ ಪಿಂಡವು ಹಾಗಾಗುತ್ತದೆ ಮಾಡಬೇಕೆಂದು ಎಲ್ಲರು ಉತ್ಸುಕರಾಗಿದ್ದರು , ಅವ್ವನವರು ದೇಹವಿಟ್ಟಾಗ ಅವರ ಆಶೋತ್ತ ರಸ್ಯ ಭಾರಕ್ಕಾಗಿ ಅವರ ಕಾಕ ಪಿಂಡವು ಆಗುವದಿಲ್ಲೆಂದು ಎಲ್ಲರು ತಿಳಕೊಂಡಿದ್ದ ರಂತೆ; ಆದರೆ ಮೂರ್ತಿಗಳ ಕೈಯಲ್ಲಿ ಯ ಪಿಂಡವನ್ನು ಕೆಳಗಿಡುವದರೊಳಗೇ ಕಾಕ ಸ್ಪರ್ಶವಾಯಿತಂತೆ! ಅಮ್ಮನವರ ಯೋಗ್ಯತೆಯೇ ಅ೦ಥ ನಿಸ್ಪೃಹವಾದದ್ದು! ಅವರು ಪತಿಯಲ್ಲಿ ಐಕ್ಯರಾದದ್ದರಿಂದ ವಾಸನರಹಿತರಾದದ್ದು ಆಶ್ಚರ್ಯವಲ್ಲ! ಈಗ ಶ್ರೀ ಗುರುಗಳ ಪರೀಕ್ಷೆಯ ಕಾಲವು ಒದಗಿತು , ಅವರಿಗೆ ಧರ್ಮೋದಕವನ್ನು ಏನಿಲ್ಲೆಂದರೂ ನಾರಾರು ಜನರು ಬಿಟ್ಟಿ, ರಬಹುದು, ಔರ್ಧ್ವದೇಹಿಕ ಕರ್ಮಗಳನ್ನು ಅಗಡಿಯ ವೇ.ರಾ ರಾ , ಸುಬ್ಬಾಭಟ್ಟಿ ರಾಜಪುರೋಹಿತ ಹಾಗು ವೇ . ರಾ. ರಾ. ಲಕ್ಷಣಭಟ್ಟ ತಾಳಿಕೋಟಿಯಿವರಿಬ್ಬರು ಯಥಾರ್ಥವಾಗಿ ಮೂಡಿಸಿದರು. ಶ್ರೀಚಿ ದಂಬರ ಮೂರ್ತಿಗಳು ಕಾಕಪಿಂಡವನ್ನು ತಕ್ಕೊಂಡು ಸ್ವಲ್ಪ ದೂರಒಯ್ದಿಟ್ಟ ರು. ೧ಳ