ಪುಟ:ನಿರ್ಯಾಣಮಹೋತ್ಸವ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸದ. ಜಾನ್ - ನ್ಯಾ -... -"-ದ. ವಸ್ಥೆಯಾದದ್ದನ್ನು ಕಣ್ಣು ಮುಟ್ಟಿ ನೋಡಿ ಸಂತೋಷಪಡಬೇಕೆಂದು ಸ್ವಾಮಿಯುದೇ ಹಧಾರಣಮಾಡಿರುವಂತೆ ತೋರುತ್ತದೆ, ಆನುಗ್ರಹಕ್ಕೆ ಪಾತ್ರರಲ್ಲದವರಿಂದ ಬ್ರಾಹ್ಮಣ ಸೇವೆಯJಆಗದು, ಕಲಿಯುಗದಲ್ಲಿ ಬ್ರಾಹ್ಮಣಸೇವೆಯು ದುರ್ಲಭವು, ನೀವು ಈಗ ಸಹಾಯವೂಡಿ ಸ್ವಾಮಿಯನ್ನು ಸಂತೋಷ ಪಡಿಸಿದರೂ ಚಿಂತೆಯಿಲ್ಲ; ಸ್ವಾಮಿಯು ದೇಹಬಿಟ್ಟ ಮೇಲೆ ಆತನ ಉತ್ತರ ಕಾರ್ಯಕ್ಕೆ ಸಹಾಯವಡಿ ಅನ ಗ್ರಹಕ್ಕೆ ಪಾತ್ರ ರಾದರೂ ಚಿಂತೆಯಿಲ್ಲ, ದೇವರು ಬುದ್ದಿ ಕೊಟ್ಟ ಹಾಗೆ ದೂಡಿರಿ; ಆಯಿತೋ ಇಲ್ಲವೋ? ಎಂದು ಮನಃಪೂರ್ವಕವಾಗಿ ತನ್ನ ದಾಸಭಾವಕ್ಕನುಸರಿಸಿ ಹೇಳುವದನ್ನು ನೋಡಿದರೆ 'ಎಲೈ ಬಂಧನಕ್ಕೊಳಗಾಗಿರುವ ಬಂಧುಗಳೆ, ಯಾಚನಾಧರ್ಮದಿಂದ ನಿಮ್ಮ ಪಾಸ ಶೋಷಣಮಾಡಿ ಅನುಗ್ರಹಿಸಲು ಅವತರಿಸಿದನನಗೆ ಏನಾದರೂ ಕಟ್ಟು ಕೃತಾರ್ಥ ರಾಗಿರಿ.” ಎಂದು ಮಮತೆಯಿಂದ ಬೋಧಿಸುತ್ತಿರುವಂತೆ ತೋರುತ್ತಿತ್ತು. ಒಟ್ಟಿಗೆ ಸದ್ದು ರುವ ಶ್ರೀ ಸಮರ್ಥ ರಾಮದಾಸರ (Marfans” ಎಂಬ ಉಕ್ತಿಯಂತೆ, ಪರೋಪಕಾರದಲ್ಲಿ ದೇಹವನ್ನು ಚಂದನದ ಕೊರಡಿನಂತ ಸವಿಸಿ ಅದು ಕೈಗೆ ಬಾರದ ಹಾಗಾದಬಳಿಕ ಚಲ್ಲಿ ಕೊಡಬೇಕೆಂದು, ದೇಹವು ರೋಗಬಾಧೆಯಿ೦ದ ತಾನಾಗಿ ಉದುರಿ ಬೀಳುವವರೆಗೆ ಭರದಿಂದ ಯಾಚನೆಮಾಡಿ ಜನರನ್ನು ಪುನೀತರಾಗಮಾಡಿದರು , ಅಹಹ ಸದ್ದು ರುವಿನ ಈ ಪರವಕಾರುಣಿ ಕತೆಯನ್ನು ವರ್ಣಿಸುವ ಯೋಗ್ಯತೆಯು ನಮಗಿಲ್ಲ! ಅಸಹ್ಯವಾದ ರೋಗದ ದುಹಾಬಾಧೆಯನ್ನು ಅನುಭವಿಸುತ್ತ, ಮಾಂಸರಕ್ತ ಶುಷ್ಕವಾದ ಅಸ್ಥಿಪಂಜರವು ಗಾದಿಗೆ ಒತ್ತಿ ವ್ಯಥೆಪಡಿಸುತ್ತಿರಲು , ಜನರ ಯೋಗಕ್ಷೇಮವನ್ನು ವಿಚಾರಿಸುವಾಗ, ನಾಲ್ಕು ಬೋಧವಚನಗಳನ್ನು ನುಡಿಯುವಾಗ ಆಯಾಸವಾಗುತ್ತಿರಲು, ಧರ್ಮವ ಲೇಶವಾದರೂ ಕಣ್ಣಿಗೆ ಬೀಳದೆ, ಸ್ಮಾ ರ್ಥದಲ್ಲಿ ಯೇ ಆಗುವ ಜನರ ಪ್ರವೃತ್ತಿ ಯನ್ನು ನೋಡಿ ಅ೦ತರಾತ್ಮನು ತಳಮಳಿಸುತ್ತಿರಲು , ( ಈಗಲೇ ದೇಹಬಿಡಬಾರ ದೆಂ”೦ದು, ಜನರು ಮೋಹದಿಂದ ಪ್ರಾರ್ಥಿಸುವಾಗ ತನ್ನ ದಾಸವೃತ್ತಿಗೆ ಭಂಗಬಾರ ದಂತ ಆಚ್ಛೆಯ ಉಲ್ಲಂಘನವನ್ನು ಮಾಡದೆ ಹ್ಯಾಗೆ ಪಾರಾದೇನೆಂಬ ಚಿಂತೆಯ ನೋಯಿಸುತ್ತಿರಲು , ಎಲ್ಲೆ ಸದ್ದು ಗುವೇ? ನೀನು ಅಸಹ್ಯ ಪಡಲಿಲ್ಲ: ಜನರನ್ನು ನಿರಾಕರಿಸಲಿಲ್ಲ; ಕವಕ್ಕನೆ ಅವರ ಮೈ ಮೇಲೆ ಹೋಗಲಿಲ್ಲ; ಆಗ ನೀನು ಅತ್ಯಂತ ಸವಣಧಾನದಿಂದಲೂ, ದಕ್ಷತೆಯಿ೦ದಲೂ ಜನರ ಪಾಪಶಷಣಮಾಡಿದೆ, ಇಂಥ ಭೂತದಯಾಪರನಾದ ನಿನಗೆ ಪಾಮರನಾದ ನನ್ನ ಅನಂತ ಪ್ರಣಾಮಗಳಿರಲಿ