ಪುಟ:Mysore-University-Encyclopaedia-Vol-1-Part-1.pdf/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಲ್ಲ ಬಗೆಯ ಅನಾಹುತಗಳನ್ನು ಎದುರಿಸಿ ನಿಲ್ಲಬಲ್ಲುವಾಗಿವೆ. ಇದಲ್ಲದೆ ದಹಿಸದ, ಉಷ್ಣತೆಯನ್ನು ಹೊರ ಬಿಡದ ಸಾಮಗ್ರಿಗಳನ್ನು ಇಂಥ ಕಟ್ಟಡಗಳ ರಚನೆಗೆ ಉಪಯೋಗಿಸುತ್ತಾರೆ. ವಿಶೇಷ ರೀತಿಯ ಘನ ಜೇಡಿಮಣ್ಣಿನ ಇಟ್ಟಿಗೆಗಳು, ಕಾಂಕ್ರಿಟ್- ಇವೇ ಸೂಕ್ತವಸ್ತುಗಳು. ಉಕ್ಕು ದಹಿಸದ ವಸ್ತುವಾದರೂ ಬೆಂಕಿಯ ನೇರಸಂಪರ್ಕದಲ್ಲಿ ವಿಕಾಸಗೊಂಡು ಕಟ್ಟಡಕ್ಕೆ ಧಕ್ಕೆ ತರುವುದಲ್ಲದೆ ತನ್ನ ರಚನೆಯ ಸಾಮಥ್ರ್ಯವನ್ನು (ಸ್ಟ್ರಕ್ಚ್ಯುರಲ್ ಸ್ಟ್ರೆನ್ತ್) ಕಳೆದುಕೊಳ್ಳುತ್ತದೆ. ಆದ್ದರಿಂದ ಉಕ್ಕಿನಿಂದಾದ ವಸ್ತುಗಳ ಹೊರಮೈಯನ್ನೂ ನಿರೋಧಕವಸ್ತುಗಳಿಂದ ಮುಚ್ಚಿ ಕಟ್ಟಡದ ರಚನೆಗೆ ಬಳಸಿದ್ದಾದರೆ ಈ ತೊಂದರೆ ನೀಗುತ್ತದೆ. ಆರುವಾಸಿಯಾಗಿರುವ (ಹದಮಾಡಿದ) ಚೌಬೀನೆ ಮರ ಹೆಚ್ಚು ಕಾಲ ಅಗ್ನಿಯನ್ನು ನಿರೋಧಿಸುತ್ತದಾದ ಕಾರಣ ಉಕ್ಕಿಗಿಂತ ಉತ್ತಮ. ಕಟ್ಟಡಗಳ ರಚನಾ ಸಾಮಗ್ರಿಗಳನ್ನು ಅವುಗಳ ಅಗ್ನಿನಿರೋಧಕ ಸಾಮಥ್ರ್ಯಕ್ಕನುಗುಣ ವಾಗಿ ವರ್ಗೀಕರಣ ಮಾಡಲಾಗಿದೆ. ಈ ಕಾರ್ಯದಲ್ಲಿ ಮೌಲ್ಯವನ್ನು ನಿರ್ಧರಿಸುವ ವ್ಯಾಪಕವಾದ ಪರೀಕ್ಷೆಗಳ ಪಾತ್ರ ಮಹತ್ವದ್ದು. ಈ ಕೆಲಸವನ್ನು ಸಾಮಾನ್ಯವಾಗಿ ತಾಂತ್ರಿಕ ಹಾಗೂ ಅಗ್ನಿವಿಭಾಗದ ಸಿಬ್ಬಂದಿ ವರ್ಗದವರು ನಡೆಸುತ್ತಾರೆ. ಇದರಿಂದಾಗಿ ತಮ್ಮ ತಮ್ಮ ಅಗತ್ಯಗಳಿಗೆ ಇರಬೇಕಾದಂಥ ಅಗ್ನಿನಿರೋಧಪ್ರಮಾಣವನ್ನು (1/2-6 ಗಂಟೆಯ ವರೆಗೆ) ಇಂಜಿನಿಯರು, ನಿರ್ಮಾತೃಗಳು ಮೊದಲಾದವರು ನಿರ್ಧರಿಸಿಕೊಳ್ಳುತ್ತಾರೆ. ಭಿತ್ತಿಫಲಕ (ವಾಲ್ ಬೋರ್ಡ್) ಅಥವಾ ಕಟ್ಟಡಫಲಕಗಳನ್ನು ಒಳಗೆಲಸಗಳಿಗಾಗಿ ಬಳಸಿ ಅವುಗಳ ಮೇಲ್ಮೈ ಮೇಲಿನ ಜ್ವಾಲೆಯನ್ನು ಹರಡುವ ಗುಣಗಳಿಗನುಸಾರವಾಗಿ ಅವುಗಳ ಯೋಗ್ಯತೆಯನ್ನು ನಿರ್ಧರಿಸುತ್ತಾರೆ. ಅಗ್ನಿನಿರೋಧಕ ಒಳಗೋಡೆಗಳನ್ನುಳ್ಳ ದೊಡ್ಡ ದೊಡ್ಡ ಕಟ್ಟಡಗಳಿಗೆ ಇಡುವ ಬಾಗಿಲು ಮತ್ತು ಕಿಟಕಿಗಳನ್ನು ಯಾವುದೇ ಬಗೆಯ ಅಗ್ನಿಯನ್ನು ಒಳಬಿಡದಂತೆ ಅಳವಡಿಸಿರಬೇಕು. ಅವು ಇನ್ನೂ ಪರಿಣಾಮಕಾರಿ ಯಾಗಿರಬೇಕಾದರೆ, ಅಗ್ನಿಯಿಂದ ಉಂಟಾಗುವ ಉಷ್ಣತೆಯನ್ನನುಸರಿಸಿ ತಾವಾಗಿಯೇ ಮುಚ್ಚಿಕೊಳ್ಳುವಂತಿರಬೇಕು. ಇಂಥವನ್ನು ಬ್ಯಾಂಕು, ಆಹಾರಸಂಗ್ರಹಣಾಕೇಂದ್ರ ಮೊದಲಾದುವುಗಳಲ್ಲಿ ಇತ್ತೀಚೆಗೆ ಬಳಸುತ್ತಿದ್ದಾರೆ. (ಎಸ್.ಆರ್.ಪಿ.) ಅಗ್ನ್ಯಬಾಧಿತ ವಸ್ತ್ರ : ಮುಖ್ಯವಾಗಿ ಯುದ್ಧ ಕಾಲದಲ್ಲಿಯೂ ನಿತ್ಯದಲ್ಲಿ ಅಗ್ನಿಶಾಮಕ ದಳದವರಿಗೂ ಆವಶ್ಯಕ. ಇದರ ತಯಾರಿಕೆಯಲ್ಲಿ ಉಪಯೋಗಿಸುವ ಕೆಲವು ಮುಖ್ಯವಸ್ತುಗಳೆಂದರೆ ಫಾಸ್‍ಫೇಟ್, ಸಲ್ಫೇಟ್ ಮತ್ತು ಬೋರೇಟ್ ಲವಣಗಳು; ತವರ, ಆ್ಯಂಟಿಮೊನಿ, ಸತುವಿನ ಲವಣಗಳು ಮತ್ತು ಕೆಲವು ಕೃತಕ ರಾಳಗಳು (ರೆಸಿನ್ಸ್) - ಇವೇ ಮೊದಲಾದುವು. ಈ ವಸ್ತುಗಳಲ್ಲಿ ಕೆಲವನ್ನು ಮಿಶ್ರಣ ರೂಪದಲ್ಲಿಯಾಗಲೀ ಬೇರೆ ಬೇರೆಯಾಗಿಯಾಗಲೀ ಸೂಕ್ತಪ್ರಮಾಣದಲ್ಲಿ ವಸ್ತ್ರಗಳ ಮೇಲೆ ಲೇಪಿಸಬೇಕು. ಲವಣಗಳನ್ನು ಕರಗಿಸಿದ ದ್ರಾವಣದಲ್ಲಿ ಬಟ್ಟೆಗಳನ್ನು ಅದ್ದುವುದರಿಂದಲೂ ಸಿಂಪಡಿಸುವುದ ರಿಂದಲೂ ಬಳಿಯುವುದರಿಂದಲೂ ಅವುಗಳನ್ನು ಅಗ್ನ್ಯಬಾಧಿತ ವಸ್ತ್ರಗಳನ್ನಾಗಿ (ಫೈರ್‍ಪ್ರೂಫ಼್ ಕ್ಲಾತ್) ಮಾಡಬಹುದು. ಹೀಗೆ ತಯಾರಾದ ಈ ವಸ್ತ್ರಗಳು ಅವುಗಳಲ್ಲಿನ ರಾಸಾಯನಿಕ ವಸ್ತುಗಳ ಗುಣಗಳಿಗೆ ತಕ್ಕಂತೆ ಕೆಲವು ಒಗೆತಕ್ಕೆ ಜಗ್ಗುವುದಿಲ್ಲ; ಕೆಲವು ಜಗ್ಗುತ್ತವೆ. (ಬಿ.ಎಲ್.) ಅಗ್ರಗಾಮಿ : ಯುದ್ಧಕ್ಕೆ ಸಂಬಂಧಿಸಿದ ಈ ಮಾತು 19ನೆಯ ಶತಮಾನದ ಎರಡನೆಯ ಭಾಗದಲ್ಲಿ ಸಮಾಜಸ್ಥಿತಿಗೂ ಸಂಸ್ಕøತಿಗೂ ಲಲಿತಕಲೆಗಳಿಗೂ ಅನ್ವಯವಾಗ ಲಾರಂಭಿಸಿತು. ಸಾಂಪ್ರದಾಯಿಕ ಆಚರಣೆಗಳನ್ನು ಕಂಡು ಅಸಹ್ಯಪಟ್ಟು, ಅವುಗಳನ್ನು ಬಿಟ್ಟುಕೊಟ್ಟು ನೂತನ ಪ್ರಯೋಗಗಳನ್ನು ಜಾರಿಗೆ ತರುವುದು ಅಗ್ರಗಾಮಿಗಳ (ಮುನ್ನೇತ್ರರು) (ಅವಾಂತ್ ಗಾರ್ಡ್) ಮುಖ್ಯ ಉದ್ಯೋಗ. ಯಾವ ದೇಶದಲ್ಲೇ ಆಗಲಿ ಜನತೆ ಸಾಮಾನ್ಯವಾಗಿ ಸಂಪ್ರದಾಯಬದ್ಧವಾದದ್ದು; ಅಂಥ ಜನತೆಯನ್ನು ಬಡಿದು ಬೆರಗಾಗಿಸುವುದು ಮುನ್ನೇತ್ರರ ಹವ್ಯಾಸ. ಈ ದಂಗೆಕೋರರು ಮೊದಲು ಚಿತ್ರಕಲೆಯಲ್ಲಿ ಉದ್ಭವಿಸಿದರು. ಕೂರ್ಬೆ, ಮೋನ, ಮಾನ, ಡೆಗಾಸ್, ರೆನ್ವಾರ್, ಮುಂತಾದವರಿಂದ ಫ್ರಾನ್ಸ್ ದೇಶ ಚಕಿತವಾಯಿತು. ಕ್ರಮೇಣ ಅದೇ ಬಗೆಯ ಅತಿನವೀನರು ಇತರ ಕಲೆಗಳಲ್ಲೂ ಸಾಹಿತ್ಯದಲ್ಲೂ ಹುಟ್ಟಿ ಬಂದರು. ವಿಮರ್ಶಕಗೋಷ್ಠಿ ಅವರನ್ನು ಹುಚ್ಚರೆಂದು ಹಳಿದರೂ ಅವರ ಆವೇಶ ಕುಂದಲಿಲ್ಲ. ಅವರ ಕೃಷಿ ನಿಲ್ಲಲಿಲ್ಲ. ಯಾವ ಲಲಿತಕಲೆಯ ಚರಿತ್ರೆಯನ್ನು ನಾವು ಲಕ್ಷ್ಯಕ್ಕೆ ತಂದುಕೊಂಡರೂ ಒಂದು ಅಂಶ ಸ್ಪಷ್ಟವಾಗಿ ಕಾಣಬರುತ್ತದೆ. ಅದಕ್ಕೆ ಹೊಸ ಪ್ರಯೋಗಗಳ ಮೂಲಕವೇ ಪ್ರಗತಿ, ಅಭಿವೃದ್ಧಿ. ಪ್ರತಿಯೊಂದು ತಲೆಮಾರಿನಲ್ಲೂ ಸಾಧಾರಣವಾಗಿ ಹಿಂದಣ ಒಂದೆರಡು ತಲೆಮಾರುಗಳ ಕಲಾಭಿರುಚಿಯೇ ತನ್ನ ಅಧಿಕಾರವನ್ನು ಮುಂದುವರಿಸಲು ಪ್ರಯತ್ನಪಡುತ್ತದೆ. ಆದ್ದರಿಂದ ಯಾವ ಹೊಸ ಪ್ರಯೋಗವೂ ರಸಿಕ ಜನಕ್ಕೆ ತಕ್ಷಣ ರಸವತ್ತಾಗಿ ತೋರಿಬರುವುದಿಲ್ಲ. ಅದರಲ್ಲೂ ಸ್ವಾರಸ್ಯವಿದೆಯೆಂಬುದನ್ನು ದೊಡ್ಡ ಕೂಗುಗಳ ಮೂಲಕ ಡಂಗುರ ಹೊಯ್ಯುವುದು ಅತ್ಯಗತ್ಯವೆಂದು ಅಗ್ರಗಾಮಿ ಕಲಾವಿದರಿಗೆ ಎನಿಸಿರಬೇಕು. ಅವರು ಹಾಗೆ ಎಬ್ಬಿಸುವ ಗಲಭೆಯ ಫಲವಾಗಿ ಅವರ ನವೀನತೆಗಳಲ್ಲಿ ಕೆಲವಾದರೂ ಸ್ವೀಕೃತವಾಗಬಹುದು. ಕಲೆಯ ಚರಿತ್ರೆಯಲ್ಲಿ ಮುನ್ನೇತ್ರರಿಗೆ ಸ್ಥಾನವಿದೆ. ಈ ದೃಷ್ಟಿಯಿಂದ ಕನ್ನಡದಲ್ಲಿ ಹಾಗೂ ಭಾರತದ ಇತರ ಭಾಷೆಗಳಲ್ಲಿ ನವ್ಯ ಕವಿಗಳು ಹಾಗೂ ಪ್ರಗತಿಶೀಲ ಪಂಥಗಳವರು ನಡೆಸುತ್ತಿರುವ ಚಳವಳಿಗಳನ್ನು ಗಮನಿಸಬೇಕಾದುದು ಅಗತ್ಯ. ಆದರೆ ಪ್ರತಿಯೊಂದು ಲಲಿತಕಲೆಯಲ್ಲೂ ಹಲಕೆಲವು ಗುಣಲಕ್ಷಣಗಳು ಯಾವಾಗಲೂ ಇದ್ದುಕೊಂಡು ಆ ಕಲೆಯ ಪರಂಪರೆಯನ್ನು ಕಾಪಾಡಿಕೊಳ್ಳುತ್ತವೆ. ತಮ್ಮ ಹೊಸತನವನ್ನು ಅನುಷ್ಠಾನಕ್ಕೆ ತರುವಾಗಿ ಅಗ್ರಗಾಮಿಗಳು ಈ ರೂಢಮೂಲ ಸಂಗತಿಯನ್ನು ಮರೆಯಬಾರದು, ನಿರ್ಲಕ್ಷಿಸಬಾರದು. ತಾವು ಈಗ ಮಾಡುತ್ತಿರುವುದೇ ಸರಿ, ಹಿಂದೆ ಆಗಬಂದಿರುವುದೆಲ್ಲ ತಪ್ಪು ಎಂಬ ಅತಿರೇಕ ಕೆಲವು ಮುನ್ನೇತ್ರರ ಪ್ರಬಲದೋಷ. ತಾವು ಮಾಡುತ್ತಿರುವುದು ವಿಕಾರವಾದದ್ದು, ಕಲಾಹೀನವಾದದ್ದು ಎಂಬುದನ್ನು ಅವರು ಎಷ್ಟೋ ಸಾರಿ ಅರಿಯರು. ಪ್ರತಿಭಾವಂತರಾದ ಘನಕವಿಗಳು ಅಲ್ಲಿ ಇಲ್ಲಿ ಕೂಗಾಡದೆ, ಗಲಭೆಯನ್ನೂ ಎಬ್ಬಿಸದೆ, ಸಾಹಿತ್ಯದಲ್ಲಿ ಕ್ರಾಂತಿಯನ್ನು ಉಂಟುಮಾಡಿದ್ದಾರೆ ಎಂಬ ವಿಷಯವನ್ನು ನಾವು ಮರೆಯುವಂತಿಲ್ಲ. (ಎಸ್.ವಿ.ಆರ್.) ಅಗ್ರಚಾರ : ಆತ್ಮರಕ್ಷಣೆಗಾಗಲಿ ಆಕ್ರಮಣಕ್ಕಾಗಲಿ ಸ್ವಂತ ಸೈನ್ಯಕ್ಕೆ ತಕ್ಕ ಕಾಲದಲ್ಲಿ ಉಪಯೋಗಕ್ಕೆ ಒದಗುವ ಹಾಗೆ ಶತ್ರುವಿನ ನೆಲೆ, ಸಂಖ್ಯಾಬಲ, ಚಲನವಲನ ಇತ್ಯಾದಿ ವಿಷಯಗಳನ್ನು ಕಂಡುಕೊಂಡು ಸಮಾಚಾರವನ್ನು ಸಂಗ್ರಹಿಸುವ ಸೈನಿಕನಿಗೆ ಸೈನಿಕಶಾಸ್ತ್ರದಲ್ಲಿ ಈ ಹೆಸರಿದೆ. ಆತ ಸೈನಿಕ ತಂಡದ ಅಥವಾ ಘಟಕ ಒಂದು ಅಂಗ. ಬೇಹುಗಾರಿಕೆಯಲ್ಲಿ ವಿಶೇಷವಾದ ಶಿಕ್ಷಣವನ್ನು ಪಡೆದ ಕಾರಣ ಆತನನ್ನು ಶತ್ರುವಿನ ಸಮಾಚಾರ ಸಂಗ್ರಹಿಸುವ ಕಾಲಕ್ಕೆ ಆಯ್ದುಕೊಳ್ಳುತ್ತಾರೆ. ಅಗ್ರಚಾರ (ಸ್ಕೌಟ್) ಬಾಲಚಾರನಿಗಿಂತ (ಬಾಯ್ ಸ್ಕೌಟ್) ಭಿನ್ನ. (ನೋಡಿ- ಬಾಲಚಾರ). (ಎ.ಎನ್.ಎಸ್.ಎಂ.) ಅಗ್ರಲೇಖನ : ವೃತ್ತಪತ್ರಿಕೆಯ ನಿಯತವಾದ ಪುಟಭಾಗದಲ್ಲಿ ಸಂಪಾದಕ ವರ್ಗದವರು ಅಂದಿನ ಅತಿಮುಖ್ಯ ಸಮಸ್ಯೆಗಳನ್ನು ಕುರಿತ ಪರಿಚಯಾತ್ಮಕವಾಗಿ ವಿಮರ್ಶಾತ್ಮಕವಾಗಿ ಬರೆಯುವ ಲೇಖನ (ಲೀಡರ್ ಅಥವಾ ಲೀಡಿಂಗ್ ಆರ್ಟಿಕಲ್). ರಾಜಕಾರಣವಾಗಿರಲಿ, ಆರ್ಥಿಕ ಪ್ರಶ್ನೆಯಾಗಿರಲಿ, ಸಾಮಾಜಿಕ ಸಮಸ್ಯೆಯಾಗಿರಲಿ, ಏನೇ ಆಗಿರಲಿ, ಅಗ್ರಲೇಖನ ಆ ಪತ್ರಿಕೆಯ ನೀತಿ, ದೃಷ್ಟಿ, ಆದರ್ಶ ಏನೆಂಬುದನ್ನು ಸೂಚಿಸುತ್ತದೆ. ವಿಷಯ ಯಾವುದೇ ಆಗಿರಲಿ, ಅಗ್ರಲೇಖನ ಓದಿದ ಕೂಡಲೇ ಪತ್ರಿಕೆಯ ಅಭಿಪ್ರಾಯ ಇಂಥದೇ ಎಂಬುದು ಸ್ಪಷ್ಟವಾಗುತ್ತದೆ. ರಾಜಕೀಯ ಪಕ್ಷಗಳಿಗಿರುವಂತೆ ಪತ್ರಿಕೆಗೂ ಒಂದು ನೀತಿ, ಒಂದು ಗುರಿ ಉಂಟು. ಆ ನೀತಿಯನ್ನು ನಿಷ್ಠೆಯಿಂದ ಪಾಲಿಸುವುದು ಪತ್ರಿಕೆಯ ಪ್ರಥಮ ಕರ್ತವ್ಯ. ನೀತಿ ನಿಯಂತ್ರಣ ಅಂದರೆ ತನ್ನ ನಿಶ್ಚಿತನೀತಿಯನ್ನು ಆಚರಣೆಗೆ ತರುವ ರೀತಿ ಪತ್ರಿಕೆಯ ಇಡೀ ಜೀವನವನ್ನೆಲ್ಲ ಆವರಿಸಿರುತ್ತದೆ. ಆದ್ದರಿಂದ ಅಗ್ರಲೇಖನ ಈ ನೀತಿ ನಿಯಂತ್ರಣ ಕರ್ತವ್ಯವನ್ನು ನಿಷ್ಠುರತೆಯಿಂದ ನಿರ್ವಹಿಸುತ್ತದೆ. ವಿಷಯ ಯಾವುದೇ ಆಗಿರಲಿ, ಸಮಸ್ಯೆ ಎಂಥದೇ ಆಗಿರಲಿ, ಪತ್ರಿಕೆ ತನ್ನ ನೀತಿಗೆ ಆದರ್ಶಕ್ಕೆ ಅನುಗುಣವಾಗಿ ಪ್ರಭುತ್ವ ತನ್ನ ನೀತಿಯನ್ನು ಮಾರ್ಪಡಿಸಿಕೊಳ್ಳುವಂತೆ ಮಾಡಲು ಅಗ್ರಲೇಖನವನ್ನು ಪರಿಣಾಮಕಾರಿ ಸಾಧನವನ್ನಾಗಿ ಮಾಡಿಕೊಳ್ಳುತ್ತದೆ. ಸಾರ್ವಜನಿಕಾಭಿ ಪ್ರಾಯವನ್ನೂ ತನ್ನ ಕಡೆಗೇ ಎಳೆದುಕೊಂಡು ತನ್ನ ಕೈ ಬಲಪಡಿಸಿಕೊಳ್ಳಲು ಯತ್ನಿಸುತ್ತದೆ. ಪ್ರಜಾತಂತ್ರ ಪ್ರಧಾನವಾದ ಈ ಯುಗದಲ್ಲಿ ಪತ್ರಿಕೆಯ ಸ್ಥಾನ ಬಹು ದೊಡ್ಡದು. ಚತುರಂಗಬಲದಲ್ಲಿ ಪತ್ರಿಕೆ ನಾಲ್ಕನೆಯ ಅಂಗವೆಂದು ರಾಜನೀತಿಜ್ಞರು ಹೇಳುತ್ತಾರೆ. ಪತ್ರಿಕೆಯ ನೀತಿಯನ್ನು ನಿಯಂತ್ರಣ ಮಾಡುವವ ಮುಖ್ಯ ಸಂಪಾದಕ. ವಿಶೇಷ ಪರಿಶ್ರಮವುಳ್ಳ ಸಹಸಂಪಾದಕರು ಆಯಾ ವಿಷಯಗಳನ್ನು ಕುರಿತು ಬರೆಯುತ್ತಾರಾದರೂ ಧೋರಣೆಯ ದೃಷ್ಟಿಯಿಂದ ಅವನ್ನು ಒಪ್ಪಬೇಕಾದವನು ಪ್ರಧಾನಸಂಪಾದಕನೇ. ಈ ರೀತಿ ಪತ್ರಿಕೆಯ ನಿರ್ವಾಹ ನಡೆದಾಗ ಆ ಪತ್ರಿಕೆಗೊಂದು ಮರ್ಯಾದೆಯ ಸ್ಥಾನ ಏರ್ಪಡುತ್ತದೆ. ಪ್ರಭುತ್ವವಾಗಲಿ, ಪ್ರಜಾವರ್ಗವಾಗಲಿ, ಜಟಿಲವಾದೊಂದು ಸಮಸ್ಯೆ ತಲೆದೋರಿದಾಗ ‘ಈ ಪತ್ರಿಕೆ ಏನು ಹೇಳುತ್ತದೆ‘ ಎಂದು ಕುತೂಹಲದಿಂದ ಕಾದು ನೋಡುತ್ತಿರುತ್ತದೆ. ಅಂದರೆ ಪತ್ರಿಕೆ ತನ್ನ ನಿರ್ಮಲ, ನಿರ್ಮಮನೀತಿಯಿಂದ, ತತ್ವ್ತನಿಷ್ಠೆಯಿಂದ, ಪ್ರಜಾಹಿತಸಾಧನಾಧ್ಯೇಯದಿಂದ ಸಮಾಜದಲ್ಲೊಂದು ಅಪೂರ್ವಸ್ಥಾನ, ಮರ್ಯಾದೆಯನ್ನು ಕಲ್ಪಿಸಿಕೊಂಡಿರುತ್ತದೆ. ಸತ್ಯವೇ ಅಗ್ರಲೇಖನದ ಸರ್ವಾಧಾರವೆಂಬುದರ ಮೂಲಕ ಪತ್ರಿಕೆ ಜನತೆಯ ನಂಬಿಕೆಯನ್ನು ಗಳಿಸಿ ಉಳಿಸಿಕೊಳ್ಳುವ ಸಾಮಥ್ರ್ಯ ತೋರಿಸುತ್ತದೆ. ಅಗ್ರಲೇಖನ ಬರೆಯುವ ಸಂಪಾದಕನ ಈ ಸತ್ಯಶ್ರದ್ಧೆ, ಧರ್ಮಬೋಧೆ, ಸೇವಾತತ್ಪರತೆ, ಅತಿ ಪ್ರಮುಖ ವಾದುವು. ಆದಕಾರಣ ಬರೆಯುವವನ ಜವಾಬ್ದಾರಿ ಬಹಳ ದೊಡ್ಡದು. ಅಗ್ರಲೇಖನಕಾರ ಒಳಗೂ ಹೊರಗೂ ನಿರ್ಮಲನಾಗಿದ್ದು ಪರಮ ನಿಷ್ಪಕ್ಷಪಾತಿಯಾಗಿ (ಆಸ್ತಿಕನಂತೆ) ವರ್ತಿಸಬೇಕು. ಅವನ ಮನಸ್ಸು ಸರಳ, ಮಾತು ಸ್ಪಷ್ಟ, ಶೈಲಿ ಗಂಭೀರ, ಧೋರಣೆ ಸತ್ಯ ಆದಾಗ ಅವನು ಬರೆದದ್ದು ಹೃದಯವನ್ನು ತಾಕುತ್ತದೆ. ಅಗ್ರಲೇಖನಕಾರ ತಾನು ಬರೆಯುತ್ತಿರುವ ವಿಷಯ ಕುರಿತು ಪೂರ್ಣ ತಿಳಿವಳಿಕೆ ಯುಳ್ಳವನಾಗಿರಬೇಕು. ಪೂರ್ವಾಪರಗಳನ್ನು ನಿಷ್ಪಕ್ಷಪಾತವಾಗಿ ತೂಗಿ ನೋಡಿ, ನಿರ್ಭಯ ವಾಗಿ, ತನ್ನ ಅಂತರಂಗಕ್ಕೆ ಒಪ್ಪಿಗೆಯಾದುದನ್ನು ಬರೆಯಬೇಕು. ಪೂರ್ವಸಿದ್ಧತೆ, ಹೃದಯ