ಪುಟ:ನಿರ್ಯಾಣಮಹೋತ್ಸವ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣದಹೋತ್ಸವ, ೧೨೧ ಅದರಂತೆ ಶ್ರೀನಾರಾಯಣಭಗವಾನರಿಗೆ ಶ್ರೀಗುರುಗಳ ಸ್ಥಾನವು ಸ ಯಂಸಿ ದ್ದವಾಗಿಯೇ ಪ್ರಾಪ್ತವಾಗತಕ್ಕದಾಗಿದ್ದರೆ, ಹಾಗೆ ಗುರುಗಳು ಬಾಯಿಬಿಟ್ಟು ಹೇಳ ಲವಶ್ಯವಿದ್ದಿಲ್ಲ , ಶ್ರೀ ಮೂರ್ತಿಗಳಲ್ಲಿ ಸ್ವಯಂಸಿದ್ಧ ಸಾಧುವೃತ್ತಿಯಿರ.ವದರಿಂದ, ಅದನ್ನು ಒಡನುಡಿಯುವ ಅವಶ್ಯವು ಶ್ರೀ ಗುರುಗಳಿಗೆ ತೂರಲಿಲ್ಲ, ಕಸ್ತೂರಿಸು ವಾಸನೆಯು ಎಂದಾದ ರಾ ಹಬ್ಬತಕ್ಕದ್ದೆ, ಇನ್ನು ನಾರಾಯಣಭಗವಾನರನ್ನು ಕುರಿತು ಶ್ರೀಗುರುಗಳು ಹೇಳಿದ್ದರಲ್ಲಿ ಅರ್ಥವಿರುವದು, ಚಂದ್ರಿಕೆಯಲ್ಲಿ ಯ ಲೇಖಗಳು ನೆಟ್ಟ ಗಿರುತ್ತವೆ” ಎಂದ ಮೂತ್ರದಿಂದ, ಚಂದ್ರಿಕೆಯು ಉಬ್ಬ ತಕ್ಕದ್ದಲ್ಲ! ಆಕೆಯ ಜನ್ಮವಿರುವತನಕ ಈ ನುಡಿಯು ಸತ್ಯವಾ ಗುವದಕ್ಕಾಗಿ ಆಕೆಯು ಹಗಲಿರುಳು ತಪಶ್ಚರ್ಯ ಮಾಡಬೇಕಾಗುವದು ಅದರಂತೆ ನಾರಾಯಣಭಗವಾನರನ್ನು ನನ್ನ ಸ್ಥಳ ದಲ್ಲಿ ತಿಳಿಯಿರಿ” ಎಂದು ಶ್ರೀಗುರುಗಳು ಹೇಳಿದ್ದರಿಂದ, ನಾರಾಯಣಭಗವಾನರ ಮೇಲೆ ಎಷ್ಟು ಭಾರಬಿತ್ತೆಂಬದನ್ನು ಅವರಾದರೂ ತಿಳಿಯಬಹುದು, ಶ್ರೀ ಗುರುಗಳನ್ನು ನೋಡಿದವರು ಬಹುಜನರು ಇರ.ವರು ಅವರ ಸ್ಥಳಕ್ಕೆ ಒಪ್ಪುವಂತೆ ಶ್ರೀ ನಾರಾ ಯಣಭಗವಾನರಿದ್ದರೆ, ಶ್ರೀ ಗುರುವಿಗೆ ದೊರೆತನವೂ , ಕೀರ್ತಿಯಾ ಅವರಿಗೂ ದೊರೆಯುವವು. ಶ್ರೀಗುರುಗಳು ಯಾವ ಕಾರ್ಯದಲ್ಲಿ ಯ ಸೇರದೆ ತಟಸ್ಥವೃತ್ತಿ

೦ದ ಎಲ್ಲವನ್ನು ನೋಡುತ್ತ, ಬಹಳವಾದರೆ ಅವರವರ ತಪ್ಪುಗಳನ್ನು ಅವರವರ ಮನಸ್ಸಿಗೆ ಹತ್ತದ ಹಾಗೆ ಹೇಳುತ್ತಿದ್ದರು. ದುಡ್ಡನ್ನು ಕೈಯಿಂದ ವಟ್ಟತ್ತಿದ್ದಿಲ್ಲ, ಯಾವ ಹಿರಿಯತನಕ ಹೋಗುತ್ತಿದ್ದಿಲ್ಲ. ಬಾಯಿಂದ ಕೆಟ್ಟ ಮಾತನ್ನು ಆಡುತ್ತಿ ದ್ವಿಲ್ಲ, ಜಗತ್ತನ್ನು ಈಶ ರಸ ರೂಪವಾಗಿ ನೋಡುತ್ತಿದ್ದರು. ಅವಿನಯವನ್ನು ತೋರಿಸುತ್ತಿದ್ದಿಲ್ಲ, ನುಡಿದಂತೆ ನಡೆಯುತ್ತಿದ್ದರು, ಹೀಗೆ ಶ್ರೀ ನಾರಾಯಣಭಗ ದಾನರು ನಡೆದು, ಬೇರೆ ಬೇರೆ ಜನರ ಕಡೆಯಿಂದ ಕೆಲಸಮಾಡಿಸಿಕಾಂಡು, ತಾವು ಸ್ವಾನಹಿಡಿದು ಕುಳಿತುಕೊಂಡರೆ, ಅವರನ್ನೂ ಶ್ರೀ ಸ್ವಾಮಿಯಂತೆಯೇ ಎಲ್ಲರೂ ನೋಡುವರು! ಅವರು, ಶ್ರೀ ಸ್ವಾಮಿಯು ಸ್ಥಳದಲ್ಲಿ ಇರಬೇಕು; ಶ್ರೀ ಚಿದಂ ಬರ ಮೂರ್ತಿಗಳು, ಶ್ರೀ ಚಿದಂಬರ ಮೂರ್ತಿಗಳ ಸ್ಥಳದಲ್ಲಿ ಇರುವರು, ಶ್ರೀಸ್ವಾಮಿ ಯು ತನ್ನ ಹಾಗೆ ಆಗಬೇಕೆಂದು ಇರುವತನಕ ಬಹಳ ಪ್ರಯತ್ನ ಮಡಿದನು; ಆದರೆ ಅಂಥ ಸುಯೋಗವು ಒಬ್ಬರಿಗೂ ಒದಗಲಿಲ್ಲ, ಈಗಾದರೂ ಅಂಥ ಯೋಗವು ಒದಗಿದರೆ, ಬಹಳ ಹಿತವಾಗುವದು.

ಅನಂದವನದ ಯಾಜಮಾನ್ಯವೆಂದರೆ, ದೊಡ್ಡ ಉತ್ಪನ್ನ ವುಳ್ಳದ್ದೊಂದು ಸಂಸ್ಥಾನದ ಪಟ್ಟವಲ್ಲ. ಈ ವತಿನ ನಿಜತ್ವ ಕ್ಕಾಗಿ ಅನಂದವನದ ಆಸ್ತಿಯನ್ನು ಸ್ವಲ್ಪ ೧೬