ಪುಟ:Abhaya.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೬

ಅಭಯ

"ಯಾಕೆ ತುಂಗಾ ಅಳ್ತೀಯ? ಅಳ್ಬೇಡ...."

ಇಷ್ಟು ಹೊಟ್ಟೆಉರಿಸಿದ್ದೂ ಸಾಲದೆ, ಇನ್ನೂ ಹಿಂಸೆ ಕೊಡಬೇಕೆ? ಎಂಬ ಮಾತು ಹೊರಬೀಳಲೆಂದು ಬಂದಿತ್ತು. ಆದರೆ, ಆಕೆಯ ನೊಂದ ಮನಸ್ಸಿನ ಮೇಲೆ ಮತ್ತೆ ಮತ್ತೆ ಬರೆ ಎಳೆಯುವುದು ತರವಲ್ಲವೆಂದು, ಅವರು ಸುಮ್ಮನಾದರು.

ತುಂಗಮ್ಮನ ಮನಸಿನ ಲ್ಲೂ ಅದೇ ಯೋಚನೆ ಮೂಡಿತ್ತು. ಅವಳೆಂದಳು:

"ನಿಮಗೆ ಸಾಕಷ್ಟು ಹಿಂಸೆ ಕೊಟ್ಟಿದೀನಿ ಅಣ್ಣ. ಈಗ ಅದು ಸಾಲದೂಂತ-"

"ಹೇಳು ತುಂಗ ನಿನ್ನ ಮನನ್ನಲ್ಲಿ ಏನಿದೆ ಹೇಳು."

"ನೀವಿನ್ನು ನನಗಾಗಿ ಯಾವ ಕಷ್ಟಾನೂ ಅನುಭವಿಸ್ಕೂಡು."

"ಆ೦ದರೆ..?"

"ನನ್ನ ಜವಾಬ್ದಾರಿ ನಾನು ನೋಡ್ಕೊತೀನಿ ಅಣ್ಣ."

"ತುಂಗ!"

"ನನಗೆ ಆಗ್ಬೇಕಾದ ಭಾಗ್ಯವೆಲ್ಲ ಆಗಿದೆ ಅಣ್ಣ. ಇನ್ನೇನೂ ಬೇಡ, ಏನೂ ಬೇಡ!"

ಮದುವೆ ಎಂಬ ಪದಮಾತ್ರ ಬಂದಿರಲಿಲ್ಲ. ಆದರೆ ಅದನ್ನು ಕುರಿತೇ ಆಕೆ ಹೇಳುತಿದ್ದಳು. ತ೦ದೆಯ ಮುಖ ಕಪ್ಪಿಟ್ಟಿತು. ಮದುವೆಯಾಗಬೇಕು ಎಂದಿದ್ದರೂ ಅದೇನೂ ಸುಲಭವಾಗಿರಲಿಲ್ಲ. ಆದರೂ ಅವರು ಯೋಚಿ ಸಿದ್ದಿತ್ತು.... ದೂರದ ಊರಲ್ಲಿ, ಬೆಳಗಾಂವಿಯಲ್ಲೋ ಎಲ್ಲಾದರೂ, ಹೊಸ ಆವರಣದಲ್ಲಿ ಮದುವೆಯ ಸಾಧ್ಯತೆ....?.... ಹಾಗೆ ಆಶಿಸುವುದೂ ಸುಲಭ ವಾಗಿರಲಿಲ್ಲ.... ಸಾಯುವುದಕ್ಕೆ ಮುಂಚೆ ಮಗನೊಬ್ಬ ಗಣ್ಯವ್ಯಕ್ತಿಯಾಗುವು ದನ್ನು ಕಾಣಬೇಕು; ಮಗಳನ್ನು ಉಳಿಸಿಕೊಂಡು ಒಳ್ಳೆಯ ಹಾದಿಗೆ ಹಚ್ಚ ಬೇಕು; ಅಷ್ಟಾದರೆ ನಿಶ್ಚಿಂತೆಯಾಗಿ ಕೊನೆಯ ಉಸಿರೆಳೆಯುವುದು ಸುಲಭ... ಆದರೆ ಆ ಮಗಳೀಗ ತನಗೇನೂ ಬೇಡವೆನ್ನುತಿದ್ದಾಳೆ.

"ಹಾಗನ್ಬಾರ್‍ದು ತುಂಗ. ವ್ಯಥೆ ಪಟ್ಕೊಂಡು ನಿರಾಶೆಪಟ್ಕೊಂಡು ಏನು ಪ್ರಯೋಜನ?"