ಪುಟ:ಪ್ರಜ್ಞಾ ಸ್ವಯಂವರಂ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಳಿ ಸನ್ಮಾನಗ್ರಂಥಾವಳಿ. [ದ್ವಿತೀ • • • • • • • • ಕೆ ಡಂಭ-ಪ್ರಿಯೆ ! ನಿನ್ನ ಮುಖಚಂದ್ರನನ್ನು ನೋಡಿದಾಗಲೇ ಲೋಭೆ ನಲ್ಲಿದ್ದ ದ್ವೇಷವನ್ನು ಬಿಟ್ಟೆನು, ಇಂದುಮೊದಲು ನಾವಿಬ್ಬರೂ ಒಂದೇ ದೇಹ ದಂತಿರಲುಳ್ಳವರು, ತೃಪೆ-ನಂಬಿದೆನು. ಪ್ರಿಯನೆ! ಶಯನಗೃಹಕ್ಕೆ ಹೊರಡಬಹುದು. (ಇಬ್ಬರೂ ಹೊರಡುವರು.) ಲೋಭ- (ಮರೆಯಾಗಿದ್ದವನು ಮುಂದೆ ಬಂದು ಸಂತೋಷದಿಂದ) ಆಹಾ ! ತೃಸ್ಥೆಯಿಂದ ನನಗೆ ಎಷ್ಟು ಲಾಭವೂ ಸಂಪನ್ನತೆಯ ಲಭಿಸುವುವು? ಇವಳ ಸಹವಾಸದಿಂದ ಡಂಭನು ನನ್ನಲ್ಲಿ ಸ್ನೇಹವುಳ್ಳವನಾಗುವುದು ಎಷ್ಟು ಉತ್ಸಾಹಪ್ರದಸಂಗತಿ ! (ತೆಗೆಯಕಡೆ) ಡಂಭಪ್ರಿಯೆ ! ನಿನ್ನಿಂದ ನನಗಿಂದು ಸ್ವರ್ಗ ಸುಖವೇ ಲಾಭವಾ ಯಿತು, ಲೋಭ- (ತನ್ನಲ್ಲಿ) ಆಹಾ ! ಡಂಭನು ವಿಹಾರದಿಂದ ಸಂತುಷ್ಟ ನಾಗಿ ಬರುವನು ಈಗ ನಾನಿಲ್ಲಿರಬಾರದು. (ಮರೆಯಾಗುವನು.) (ತೃಸ್ಥೆಯ ಕೈಹಿಡಿದು ಡಂಭನು ಬರುವನು.) ತೃಪೆ-ಪ್ರಿಯನ ಆಗಮನವು ಮತ್ತಾವಾಗಲೋ ? ರಂಭ- ಪ್ರಿಯೆ ! (ನ್ನ ವಿರಾಮಕಾಲವನ್ನೆಲ್ಲಾ ನಿನ್ನ ಸವಿಾಪ ದಲ್ಲಿಯೇ ಕಳೆಯುವೆನು, ತೃಪೆ- (ಶಂಕೆಯಿಂದ) ಹಾ, ಮೋಸಹೋದೆನು ! ಹೀಗೆಂದು ತಿಳಿದಿದ್ದರೆ, ಅಯ್ಯೋ ! ನಿಜವಾಗಿಯೂ ನನ್ನ ಮಾನಾಭಿಮಾನಗಳನ್ನು ಸೂರೆ ಗೊಡುತ್ತಿರಲಿಲ್ಲ. ಡಂಭ -ಮನೋರಮೆ | ಹೀಗೇಕೆ ಭೀತಳಾದೆ ?