ಪುಟ:ಪ್ರಜ್ಞಾ ಸ್ವಯಂವರಂ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೬ ಸನ್ಮಾನಗ್ರಂಥಾವಳಿ (ಚಳು ಸುಶೀಲೆ-ಆರ್ಯಪುತ್ರನೆ! ತಾವು ಸಮ್ಮತಿಸಿದರೆ ಸುಕುಮಾರಿಯೊ ಡನೆ ನಾನೇ ಹೋಗಿ ಸಮಾಧಾನ ಪಡಿಸಿ ಬರುವೆನು, ಪ್ರತಿಪಕ್ಷದವರ ಬಾಧೆ ಯನ್ನು ತಪ್ಪಿಸುವುದಕ್ಕಾಗಿ ನಮ್ಮ ಶಾಂತಾದಿ ಮಂತ್ರಿಗಳನ್ನು ಉಪವನದ್ವಾರ ಪ್ರದೇಶದಲ್ಲಿ ಕಾದಿರುವಂತೆ ಕಟ್ಟು ಮಾಡಬಹುದು. ವಿವೇಕ-ದೇವಿ ! ನಿನ್ನ ಸಲಹೆ, ಸರಿಯಾಗಿದೆ. ಶಾಂತಾದಿಗಳು ನಿಂತರೆಂದರೆ ಕ್ರೋಧಾದಿಗಳು ನಿರ್ನಾಮರಾಗುವುದರಲ್ಲಿ ಸಂದೇಹವಿಲ್ಲ, ನೀನು ಸಾವಧಾನದಿಂದ ಪ್ರಜ್ಞೆಯನ್ನು ಉಪವನಕ್ಕೆ ಕರೆದುಕೊಂಡು ಹೋಗಿ ಉಪ ಚರಿಸು. ನಾನು ಶಾಂತಾದಿಗಳನ್ನು ಕಳುಹುವೆನು, ಸುಶೀಲೆ.-ಆರ್ಯಪುತ್ರನೆ!ಹಾಗೆ ಮಾಡಬಹುದು. (ಹೋಗುವಳು) ವಿವೇಕ-- ಯಾರಲ್ಲಿ ? ಸೇವಕ-ಏನಪ್ಪಣೆ ? ವಿವೇಕ ಶಾಂತನನು ಕರೆದುಕೊಂಡುಬಾ. ಸೇವಕ-ಅಪ್ಪಣೆ, (ಹೋಗುವನು.) ಕಾಂತ-ಮಹಾರಾಜನಿಗೆ ವಿಜಯವಾಗಲಿ ! ವಿಶೇಷವೇನು ? ವಿವೇಕ-ಮಂತ್ರಿವರ್ಯನ ! ದೇವಿಯು ಸುಕುಮಾರಿಯೊಡನೆ ಕಾಂ ತೋದ್ಯಾನಕ್ಕೆ ಹೋಗಿ ಬರುವೆನೆಂದು ಅನುಮತಿ ಪಡೆದು ಹೋಗಿರುವಳು, ಪ್ರತಿ ಪಕ್ಷದವರ ಬಾಧೆಗೊಳಗಾಗದಂತೆ ವಸ್ತು ವಿಚಾರ, ಸಂತೋಷರೊಡಗೂಡಿ ನೀನು ಉದ್ಯಾನದಲ್ಲಿ ಕಾವಲಾಗಿರಬೇಕು. ನಾನು ಕಾರ್ಯಾ೦ತರವನ್ನು ಗಮನಿಸುವೆನು ಕಾಂತ-ಅಪ್ಪಣೆ, (ರಾಜನು ಹೊರಡುವನು.) ಕಾಂತ(ಕಿವಿಕೊಟ್ಟು ಕೇಳಿ ಗಾಬರಿಯಿಂದ) ಓಹೋ ! ಸಖಿಯರ ಕಲಕಲ ಧ್ವನಿ ಕೇಳುವುದು, ಮಹಾರಾಣಿಯವರು ಸುಕುಮಾರಿಯೊಡನೆ ವನಕ್ಕೆ ಹೊರಟಿರಬಹುದು, ನಾನಿನ್ನೂ ಇಲ್ಲಿ ವಿಳಂಬಿಸುವುದು ಸರಿಯಲ್ಲ, ನಾನೂ