ಪುಟ:ಪ್ರಜ್ಞಾ ಸ್ವಯಂವರಂ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫V ಸನ್ಮಾನಗ್ರಂಥಾವಳಿ [ಚತು ••••• • • - ೧ \r 4 - ೧ ವಿವೇಕ:- (ಸಂತೋಷದಿಂದ) ರಾಗಾ- ಜುಂಜೂಟ (ಗಗನವಚರನೆ) ಶಾಂತಸದ್ಗುಣವಂತರೇನಿಮ್ಮ ಮಂತ್ರದಿಂದನಾಂ | ಅನಂತಸುಖವನಾಂತು ಜಗದಿ ಕ್ರೀಮಂತನೆನಿಸಿದೆಂ ||ಪ|| ಅವನಿ ಯೊಳಗೆ ನಿಮ್ಮ ಸಹಾಯವನಗಿರೆ | ವಿವೇಕನಾಮವಡೆದು ಸಾರ್ವ ಭೌಮನೆನಿಸುವ ||೧|| ವಸ್ತು:-ಮಹಾರಾಜಾ! ನಿನ್ನ ತಪೋಬಲಕ್ಕೆ ಮೆಚ್ಚಿದ ಭಗವಂ ತನೇ ನಿನ್ನಿ ವಿಜಯಾಭ್ಯುದಯಕ್ಕೆ ಕಾರಣಕರ್ತನೆನ್ನಬೇಕಲ್ಲದೆ ನಾವಲ್ಲ. - ವಿವೇಕ:-ನಿಜ, ಎಲ್ಲಕ್ಕೂ ಆತನೇ ಕಾರಣ-ಕಾರಕರ್ತವೆನಿಸುವ ವನು. ಆದರೂ ಆತನ ಪ್ರೇರಣೆಯಿಂದ ಮಾಡಿದವರು ನೀವಾಗಿರುವಿರಿ. ನಿಮ್ಮ ಸಹಾಯವು ನನಗೆ ಸ್ಮರಣೀಯವೇಸರಿ, ಪ್ರಸ್ತುತದಲ್ಲಿ, ಉಪವನದ ಲ್ಲಿರುವ ವಿಷ್ಣು ಭಕ್ತನನ್ನು ಸನ್ಮಾನದಿಂದ ಕರೆತರಬೇಕು, ನಾಳೆಯೇ ಪ್ರಜ್ಞಾಂ ಬೆಯ ಸ್ವಯಂವರವು ನಿಶ್ಚಿತವಾಗಿರುವುದು, ಪಟ್ಟಣವು ಅಲಂಕೃತವಾಗಲಿ, ಸಕಲ ಸಾಮಂತರಾಜರಿಗೂ ಆಹ್ವಾನಪತ್ರಿಕೆಗಳು ಕಳುಹಿಸಲ್ಪಡಲಿ. ಸ್ವಯಂ ವರ ಮಂಟಪವು ಸಿದ್ಧವಾಗಲಿ, ರಾ೦ತ:-ಅಪ್ಪಣೆಯಂತೆ ಎಲ್ಲವೂ ನಡೆಯುವುವು. ವಿವೇಕ: ಮಂತ್ರಿಗಳಿ! ಆಯಾಸಗೊಂಡಿರುವಿರಿ; ನೀವಿನ್ನು ಹೋಗಿ ವಿಶ್ರಾಂತಿಹೊಂದಿಬನ್ನಿರಿ, ನಾನು ಸುಕುಮಾರಿಯನ್ನು ನೋಡಿಬರಲು ಹೊರಡು ವೆನು. (ಎಲ್ಲರೂ ಹೊರಡುವರು) . ಚತುರ್ಥಾಂಕಕ್ಕೆ ಮಂಗಳಂ