ಪುಟ:Rangammana Vathara.pdf/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಐಬಿಎಚ್ ಪ್ರಕಾಶನದ ಮಹತ್ವದ ಯೋಜನೆ

ನಿರಂಜನ : ಮೂವತ್ತು ಸಂಪುಟಗಳಲ್ಲಿ

ಕನ್ನಡದ ಪ್ರಥಮ ಶ್ರೇಣಿಯ ಸೃಜನಶೀಲ ಬರೆಹಗಾರ ನಿರಂಜನರ ಎಲ್ಲ ಕೃತಿಗಳನ್ನು ಮೂವತ್ತು ಸಂಪುಟಗಳಲ್ಲಿ ಕನ್ನಡಿಗರಿಗೆ ನೀಡಲು ನಾಡಿನ ಜನಪ್ರಿಯ ಪ್ರಕಟನ ಸಂಸ್ಥೆ ಐಬಿಎಚ್ ಪ್ರಕಾಶನ ಕಾರ್ಯಪ್ರವೃತ್ತವಾಗಿದೆ. ಇದು ಅರ್ಧ ಶತಮಾನ ಕಾಲಾವಧಿಯ ನಿರಂಜನ ಸಾಹಿತ್ಯ ಕೃಷಿ. ಗಾತ್ರ ಡೆಮಿ ಅಷ್ಟದಳಾಕೃತಿಯ 15,000 ಪುಟಗಳಿಗೂ ಹೆಚ್ಚು. ಕ್ರಮಕ್ರಮವಾಗಿ ಮೂರು ವರ್ಷಗಳಲ್ಲಿ ಓದುಗರಿಗೆ ಲಭ್ಯ.

ಈ ಸರಣಿಯ ಮೂರನೆಯ ಸಂಪುಟ ಸೇತುವೆ. ಇದರಲ್ಲಿ ಮೂರು ಕಾದಂಬರಿಗಳಿವೆ : 'ರಂಗಮ್ಮನ ವಠಾರ', 'ದೂರದ ನಕ್ಷತ್ರ' ಮತ್ತು 'ನವೋದಯ'.

ಈ ಕಾದಂಬರಿಗಳ ವಸ್ತುಗಳನ್ನು ಅಗೆದದ್ದು ಬದುಕಿನ ಗಣಿಯಿಂದ : ಮೊಗೆದದ್ದು ಆಳದಿಂದ. ಉದ್ದಕ್ಕೂ ಮಾನವೀಯ ಅಂತಃಕರಣದ ಜಿನುಗು.

ಕನ್ನಡ ಸಾಹಿತ್ಯ ಭಂಡಾರದಲ್ಲಿ ಇರಲೇಬೇಕಾದ ಸಂಪುಟ---ಸೇತುವೆ'


ಐಬಿಎಚ್ ಪ್ರಕಾಶನ

ಗಾಂಧಿನಗರ, ಬೆಂಗಳೂರು 560009