ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದಿಕ್ಪಾತ, ಕಾಂತೀಯ

ವಿಕಿಸೋರ್ಸ್ದಿಂದ

ದಿಕ್ಪಾತ, ಕಾಂತೀಯ

ಭೂಮೇಲ್ಮೈಯ ಯಾವುದೇ ಒಂದು ಸ್ಥಳದಲ್ಲಿ ಭೂಕಾಂತಕ್ಷೇತ್ರವನ್ನು ನಮೂದಿಸಲು ಆಯ್ಕೆ ಮಾಡಿಕೊಂಡಿರುವ ಮೂರು ಕಾಂತೀಯ ಧಾತುಗಳ (ಮ್ಯಾಗ್ನೆಟಿಕ್ ಎಲಿಮೆಂಟ್ಸ್) ಪೈಕಿ ಒಂದು (ಮ್ಯಾಗ್ನೆಟಿಕ್ ಡೆಕ್ಲಿನೇಷನ್). ಕಾಂತೀಯ ವಿಚಲನೆ (ಮ್ಯಾಗ್ನೆಟಿಕ್ ವೇರಿಯೇಷನ್) ಪರ್ಯಾಯ ನಾಮ. ಇತರ ಎರಡು ಧಾತುಗಳೆಂದರೆ ಕಾಂತೀಯ ನತಿ (ಮ್ಯಾಗ್ನೆಟೀಕ್ ಡಿಪ್) ಮತ್ತು ಕ್ಷಿತಿಜೀಯ ತೀವ್ರತೆ (ಹಾರಿeóÁಂಟಲ್ ಇಂಟೆನ್ಸಿಟಿ). ದತ್ತ ಸ್ಥಳದಲ್ಲಿ ಭೌಗೋಳಿಕ ಯಾವ್ಯೋತ್ತರದೊಡನೆ (ಜಿಯೊಗ್ರಾಫಿಕಲ್ ಮೆರಿಡಿಯನ್) ಕಾಂತೀಯ ಯಾಮ್ಯೋತರ (ಮ್ಯಾಗ್ನೆಟಿಕ್ ಮೆರಿಡಿಯನ್) ರಚಿಸುವ ಕೋನ ಆ ಸ್ಥಳದ ದಿಕ್ಪಾತದ ಆಳವು. ಒಂದು ಸ್ಥಳದ ದಿಕ್ಪಾತ ( ಆದರೆ ಅದನ್ನು (0 ಪೂ. ಅಥವಾ (0 ಪ. ಎಂದು ನಮೂದಿಸುವುದು ಕ್ರಮ. ಇಲ್ಲಿ ಪೂರ್ವ ಮತ್ತು ಪಶ್ಚಿಮ ದಿಶೆಗಳು ಕಾಂತೀಯ ಯಾವ್ಯೋತ್ತರ ಭೌಗೋಳಿಕ ಯಾವ್ಯೋತ್ತರದ ಪೂರ್ವಕ್ಕೆ ಇಲ್ಲವೇ ಪಶ್ಚಿಮಕ್ಕೆ ಇದೆಯೇ ಎಂಬುದನ್ನು ಆಧರಿಸಿವೆ.