ಪುಟ:ಕಥಾ ಸಂಗ್ರಹ - ಭಾಗ ೨.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

200 ಕಥಾಸಂಗ್ರಹ-೪ ನೆಯ ಭಾಗ ಮಿರಿ ನರ್ತಿಸಿದ ಸುರಗಣಿಕೆಯರ ಕಿತ್ತು ಹೋದ ಕಂಠಮಾಲಿಕೆಗಳಲ್ಲಿದ್ದ ಮುತ್ತಿನ ಮಣಿಗಳ ಸಂಕುಲವು ಎಂಬಂತೆ ಆ ನಿಶಾಸಮಯವು ಚಂದ್ರ ನಕ್ಷತ್ರಗಳೊಡನೆ ಕೂಡಿ ಕಂಗೊಳಿಸುತ್ತಿದ್ದಿತು. ಇದು ಚಂದ್ರಮಂಡಲವೋ ಕಾಲನು ತಂದಿಕ್ಕಿದ ಪೂರ್ವದಿಗ ರಣ್ಯದ ಮಹಾಗ್ನಿ ಪಿಂಡವೋ ಎಂಬಂತೆ ಲೋಕಾಹ್ಲಾದಕರವಾದ ಚಂದ್ರೋದಯವು ಪರಿಶೋಭಿಸುತ್ತಿದ್ದಿತು. ಈ ಪೂರ್ವದಿಶೆಯೆಂಬ ಸ್ತ್ರೀಯು ಮೊದಲು ತನ್ನ ಬಳಿಗೆ ಸೂರ್ಯನೆಂಬ ಪುರುಷನು ಬರಲು, ಅವನಿಗೆ ಸ್ಥಳವನ್ನು ಕೊಟ್ಟು ಉಪಚರಿಸಿ ಅವನ ನುಮತಿಯಂತೆ ಅಭೇದವಾಗಿದ್ದು ಅವನನ್ನು ಕಳುಹಿಸಿಕೊಟ್ಟಳು.” ಈಗ ಈ ಚಂದ್ರನು ಬರಲು ಅವನಿಗೂ ಯಥಾವತ್ತಾಗಿ ಸತ್ಕರಿಸುತ್ತಿರುವಳು. ಲೋಕದಲ್ಲಿ ಗಣಿಕೆಯ ರನ್ನು ನಂಬಿರುವುದೆಂತು ? ಅವರು ವಸುಬಲವಿದ್ದರೆ ಪುರುಷ ತಾರತಮ್ಯಾನುಸಾರ ವಾಗಿ ನಡೆದುಕೊಳ್ಳುವರು. ಶ್ರೀರಾಮನ ಕೀರ್ತಿಕಾಂತೆಯು ತ್ರಿಲೋಕಪ್ರಖ್ಯಾತವಾದ ತನ್ನ ಕಾಂತಿಮಂಡಲವನ್ನು ತಿರಸ್ಕರಿಸುತ್ತಿರುವ ತಮಸ್ಕತಿಯನ್ನು ನೋಡಿ ನಕ್ಕು ದ ರಿಂದ ಆ ನಗೆಯ ಕಾಂತಿಯು ತಮಸ್ಸನ್ನು ಅಪ್ಪಳಿಸಿ ವಿರಾಜಿಸುತ್ತಿರುವುದೇ ಎಂಬಂತೆ ಸರ್ವದಿಕ ದೇಶಗಳಲ್ಲೂ ಬೆಳದಿಂಗಳು ಪ್ರಕಾಶಿಸುತ್ತಿದ್ದಿತು. ಶ್ರೀರಾಮ ದರ್ಶ ನದಿಂದ ಸಂತುಷ್ಟಾಂತರಂಗರಾದ ಅಯೋಧ್ಯಾ ನಿವಾಸಿಗಳಂತೆ ಜೊನ್ನವಕ್ಕಿಗಳು ಬಲಿತ ಬೆಳದಿಂಗಳನ್ನು ಕುಡಿದು ಕುಡಿದು ತೃಪ್ತಿ ಹೊಂದಿ ನಲಿದಾಡಿದುವು. ನೀಲೋತ್ಪಲಗಳು ನಿಜಕಾಂತನ ಕರಸ್ಪರ್ಶದಿಂದ ಎಚ್ಚೆತ್ತುವೋ ಎಂಬ ಹಾಗೆ ಚಂದ್ರೋದಯದಿಂದ ವಿಕಸಿ ತಗಳಾಗಿ ಮನೋಹರತೆಯಿ೦ದ ಒಪ್ಪುತ್ತಿದ್ದುವು, ಮತ್ತು ಗುರುಪತ್ನಿಯೊಡನೆ ಕೂಡಿ ಕಳಂಕಿಯಾಗಿ ದೋಷಾಕರನಾದ ಈ ಚಂದ್ರನನ್ನು ಕಣ್ಣುಗಳಿಂದ ನೋಡಲೇ ಬಾರದೆಂದು ಮೊಗಗಳನ್ನು ಮುಚ್ಚಿಕೊಂಡುವೋ ಎಂಬ ಹಾಗೆ ಶೀತಕರಕರ ಜಡೀಭೂತಗಳಾದ ಪಬ್ಬಿನಿಗಳು ಮುಚ್ಚಿ ಕೊಂಡುವು. ಲೋಕದಲ್ಲಿ ಮಹನೀಯರು ತಮಗೆ ಎಂಥ ಕಷ್ಟ ಕಾ ಲವು ಸಂಪ್ರಾಪ್ತವಾದಾಗ ಆಶ್ರಿತರನ್ನು ಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿಯನ್ನು ತೋರಿಸುತ್ತಿವೆಯೋ ಎಂಬಂತೆ ಸದ್ದಿನಿಗಳು ಹಗಲೆಲ್ಲಾ ತಮ್ಮಲ್ಲಿದ್ದು ಜೀವಿಸಿಕೊಳ್ಳು ತಿದ್ದ ಭ್ರಮರಗಳನ್ನು ತಮ್ಮ ಸಂಕೋಚಾವಸ್ಥೆಯಲ್ಲೂ ಕೂಡ ತಮ್ಮಲ್ಲೇ ಸೇರಿ ಸಿಕೊಂಡು ಕಾಪಾಡುತ್ತಿರುವವು. ಕನ್ನೆ ದಿಲೆಗಳು ಮುಗಿಯುತ್ತಿರುವ ಸದ್ವಿನಿಗ ಳನ್ನು ನೋಡಿ--ಈ ಕಮಲಗಳು ದಿನಪತಿಯನ್ನು ನಿಜಪತಿಯನ್ನಾಗಿ ಮಾಡಿ Cಂಡು ತೆರೆಮರೆಯಿಲ್ಲದೆ ಹಗಲೆಲ್ಲಾ ಆತನೊಡನಿದ್ದುದೂ ಸಾಲದೆ ಹಗಲಿರುಳುಗಳಲ್ಲಿ ಮದ್ಯ ಪಾಯಿಗಳೊಡನೆ ಸೇರಿಕೊಂಡಿರುವ ಭಯಾವಹವಾದ ತಮ್ಮ ದೋಷವನ್ನು ಮರೆತು ಇತರರ ದೋಷವನ್ನು ಮಾತ್ರ ನೆನಸಿಕೊಂಡು ಕಣ್ಣು ಕ್ಲಿ ಕೊಳ್ಳುತ್ತಿರುವ ಅವುಗಳ ಅವಿಚಾರಸ್ಥಿತಿಗೋಸ್ಕರವಾಗಿ ನಗುತ್ತಿರುವವೋ ಎಂಬಂತೆ ವಿಕಸನವನ್ನು ಹೊಂದಿ ಪರಿಶೋಭಿಸುತ್ತಿದ್ದುವು. ನಿಜಪತಿಗಳನ್ನು ಕಾಣದೆ ಮಹಾ ವಿರಹವ್ಯಥೆಯಿಂದ ಕೂಗಿ ಕೂಗಿ ಕೊರಗುತ್ತಿರುವ ಚಕ್ರವಾಕಿಗಳು ನಿರಂತರವೂ ನಿಜಕಾಂತರ ಅಗಲುವಿಕೆಯಿಂದ ವ್ಯಥಿತರಾಗಿ ಅವರನ್ನು ಕರೆದು ಹಂಬಲಿಸಿ ದುಃಖಿಸುತ್ತ ಮರುಗುತ್ತಿರುವ ಶ್ರೀರಾಮ ವಿರೋಧಿಗಳ ಕಾಂತೆಯರನ್ನು ಅನುಕರಿಸುತ್ತಿದ್ದುವು, ಜಗತ್ತೆಲ್ಲವೂ ಕ್ಷೀರಸಮುದ್ರ