ಪುಟ:ಪಂಪಾ ಶತಕಂ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಿಂಗದೊಳಡಗಿದಂತೆಯೂ, ಚೆನ್ನಬಸವಪುರಾಣ ಪದ್ಮರಾಜಪುರಾಣಗಳಿಂದ ತಿಳಿಯಬರು ಇದೆ. ಭೈರವೇಶ್ವರಕಾವ್ರದ ಕಥಾಸೂತ್ರರತ್ನಾಕರದಲ್ಲಿ ಈತನ ವಿಷಯವಾಗಿ ಹೀಗೆ ಬರೆದಿದೆ:- ಪಂಪಾಕ್ಷೇತ್ರದಲ್ಲಿ ಒಪ್ಪುವ ಹಂಪೆಯಶಂಕರಾಚಾ‌ರ ಮಗ ಮಾದರಸನು, ಅವನ ಮಗ ಹಂಪೆಯ ಹರೀಶರನು, ಈತನ ಗುರು ಮಾಯಿದೇವಾಚಾರನು, ದೋರ ಸಮುದ್ರದ ಅರಸು ನೃಸಿಂಹಬಲ್ಲಾಳನು, ಪದ್ಮರಸರೆಂಬ ಆರಾಧ್ಯಪುಂಗವರ್ಗೆ ಪ್ರಧಾನಿ ಪಟ್ಟವಂ ಕಟ್ಟಿ ಹಂಪೆಯ ಹರೀಶ್ವರದೇವರ್ಗೆ ರಹಸ್ಯವ ಬರೆವ ಕರಿಣಿಕರಿಗೆಲ್ಲಾ ಹಿರಿಯ ತನನಂ ಕೊಟ್ಟು ಮಡಗಿಕೊಂಡಿರಲಾ ಹರಿಯಣ್ಣಪಂಡಿತನು ವಿಷ್ಣು ಮೊದಲಾದ ಅನ ದೈವಕ್ಕೆ ಪೊಡೆಮಡಲೊಲ್ಲೆನು; ಗುಡಿಯ ಹೊಗಲೊಲ್ಲೆನು ಎಂದು ನೇಮವ ಮಾಡಿ ಕೊಂಡಿದ್ದನು, ಹರಿಹರೇಶ್ವರನ ಗುಡಿಯಲ್ಲಿ ಬ್ರಹ್ಮರಾಕ್ಷಸನನ್ನು ಓಡಿಸಿದನು, 'ಸರ ಸಮೃದುಮಧುರೋಪಮೆಗಳಿಂದ ವಸ್ತುಕವರ್ಣಕದಿಂದ ಶಿವನಂ ಶಿವಗಣಂಗಳಂ ರಗಳ ಗಳಿಂದ ನುತಿಸಿ ವಚನದ ರಚನೆ ಹೆಚ್ಚುವಂತೆ ಗಿರಿಜೆಯು ಕಲ್ಯಾಣವಂ ರಚಿಸಿದನು.' ( ಶತಕಾಕಾಕ್ಷರಮಾಲಾಗದೃಮೊದಲಾದುವರಿಂದ ಶಿವನಂ ನುತಿಸಿದನು.' (( ಈ ಕವಿಗೆ ಹರಿದೇವ, ಹರಿಹರ, ಹರಿಗ, ಹರಿ, ಹರಿಯಣ್ಣಪಂಡಿತ, ಹಂಪೆಯ ಹರೀಶ್ವರ, ಎಂಬ ಹೆಸರುಗಳುಂಟು, 1 ಪರಮಾನಂದಾಬ್ಬಿ ಸಂವಾಪುರದರಸವಿರೂಪಾಕ್ಷ ಸಾಕ್ಷಾತ್ಸುಪುತ್ರ' ಎಂದು ಹೇಳಿಕೊಂಡಿದ್ದಾನೆ. ಹಂಪೆಯ ವಿರೂಪಾಕ್ಷನನ್ನೇ ತನ್ನ ಗ್ರಂಥಗಳಲ್ಲಿ ವಿಶೇಷವಾಗಿ ಕೊಂಡಾಡಿದ್ದಾನೆ. ಈತನನ್ನು ಪ್ರಾಯಶಃ ಎಲ್ಲಾ ವೀರಶೈವಕವಿಗಳ ಸ್ತುತಿಸಿದ್ದಾರೆ. ವೀರಶೈವ ಕವಿಗಳಲ್ಲಿ ಈತನೇ ಪ್ರಬಲನಾದ ಪೂರ್ವಕವಿಯೆನ್ನಬಹುದು, ಈತನನ್ನು ಭೀಮಕವಿ (ಸು. ಶ. 1369; ತನ್ನ ಬಸವಪುರಾಣದಲ್ಲಿ ಸರಸಮೃದುಮಧುರೋಪಮೆಗಳಂ | ಕುರಿಸೆ ವಸ್ತು ಕವಣ ಕಂಗಳ | ನೆರಪಿ ಹರನಂ ಹರಗಣಂಗಳನೈದೆ ಕೀರ್ತಿಸಿದ | ಧರೆಗುಭಯಕವಿ ಶರಭಭೇರುಂ | ದರಸು ಕವಿ ಹರಿಬುಧವರನು ...... | ಎಂದೂ ಪದ್ಮಣಾಂಕನು (ಸು. ಶ. 1383) ತನ್ನ ಪದ್ಮರಾಜಪುರಾಣದಲ್ಲಿಚದುರಿಂಪು ಸೊಂಪಲಂಕೃತಿ ಚಮತ್ಕೃತಿ ರೀತಿ || ಮೃದುಮಧುರಸರಸೋಪವಾದ್ಯಖಿಳಲಕ್ಷಣಾ ಭ:ದಿತವನ್ನು ಕವರ್ಣಕಂಗಳಿಂ ತಿವನಂ ಶಿವೈಕ್ಯರಂ ನುತಿಸುತಿರ್ದ | ......... ಶಿವಕವೀಂದ್ರ || ಎಂದೂ, ನೀಲಕಂಠನು (ಸು. ಶ. 15 ನೆಯ ಶತಮಾನ) ತನ್ನ ಆರಾಧ್ಯಚರಿತ್ರದಲ್ಲಿ