ಪುಟ:ಕುರುಕ್ಷೇತ್ರ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ಆಟೋಧಿಸಿ ಆ ಕಾಲದಲ್ಲಿ ತಾವುಪಟ್ಟ ಪಶ್ಚಾತ್ತಾಪವನ್ನು ನಾನೆಂದಿಗೂ ಮರೆಯಲಾ ರನು. ಈಗಲೂ ದಿಕ್ಕು ತೋರುವುದಿಲ್ಲ; ಮನೆಯಲ್ಲೆಲ್ಲಿ ನೋಡಿದರೂ ಅವಳನ್ನು ಕಳದುಕೊಂಡು, ಇನ್ನೂ ಬದುಕಿರುವ ನನ್ನ ದೌರ್ಭಾಗ್ಯ ವೇ ಎದುರಿಗೆ ಬಂದು ನಿಂತುಕೊಳ್ಳುವಹಾಗಿದೆ. ಸಾಯುವಾಗ ನಮ್ಮ ಮಗುವಿನ ಯೋಗಕ್ಷೇಮಕ್ಕೆ ಯಾರೂದಿಕ್ಕಿಲ್ಲವೆಂದು ಅತ್ತುಕೊಂಡು ಹೋದಳು. ಆ ಮಗುವಿಗೋಸ್ಕರ ಈ ಕಠಿಣವಾದ ಪ್ರಪಂಚದಲ್ಲಿ ನಾನು ಪರಮೇಶ್ವರನ ದಯೆಬರುವವರೆಗೂ ಗೋಳಾಡಿಕೊಂಡಿರಬೇಕಾ ಗಿದೆ, ಇದು ತಮ್ಮ ರಂಗರಾಯನ ವಿಜ್ಞಾಪನೆ. ಯಜಮಾನರವರ ಚರಣ ಸನ್ನಿಧಾನಂಗಳಿಗೆ. ನಿಮ್ಮ ಪ್ರಿಯಳಾದ ಸುಂದರಿಯ ವಿಜ್ಞಾಪನೆ. ಈ ವರೆಗೆ ಚಿರಂಜೀವಿಗಳೊಡನೆ ನಾನೂ ಕ್ಷೇಮವಾಗಿದೇನೆ. ತಮ್ಮ ಸುಕ್ಷೇಮಾತಿಶಯಗಳ ವಿಷಯವಾಗಿ ಪದೇ ಪದೇ ಬರೆಯುತಿರ ಬೇಕೆಂದು ಬೇಡುತೇನೆ. ತರುವಾಯ ತಾವು ಮನೆಯಿಂದ ಹೊರಟುಹೋಗಿ ಒಂದು ತಿಂಗಳಾಗಿ ಬಂತು; ಈವರೆಗೂ ಮೂರೇ ಕಾಗದ ಬಂದಿರುವುವು. ಅಲ್ಲಿ ಕೆಲಸ ಹೇಗಿರು ವುದೋ? ಆದರೂ ಎರಡು ದಿನ, ಮೂರು ದಿನಕ್ಕೆ ಒಂದೊಂದು ಪಚ್ಚೆ ಬರೆಯುತಿದ್ದರೆ ನಮಗೆಲ್ಲಾ ಯೋಗಕ್ಷೇಮ ಸಮಾಚಾರ ತಿಳಿದು ಧೈ ರ್ಯವಾಗುವುದು. ಈಚಿಗೆ ಚಿಗಿ ಕಪ ನಿಗೆ ಒಂದು ದಿನ ನೆಗಡಿ ತಲೆನೋವು ಬಂ ದು, ವಾಸಿಯಾದುದು ಏನಾ ಮಕ್ಕಳಲ್ಲರೂ ನೆಮ್ಮದಿಯಾಗಿದಾರೆ, ತುಂ ಟಾಟ ಮಾತ್ರ ಬಹಳವಾಗಿದೆ. ಒಂದು ದಿನಕ್ಕೆ ಹತ್ತು ಸಲವಾದರೂ ಹುಡುಗರೆಲ್ಲರೂ ತಾವು ಬರಲಿಲ್ಲವೆಂದು ನೆನದುಕೊಳ್ಳುತ್ತಾರೆ.