ಪುಟ:ಪ್ರೇಮ ಮಂದಿರ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರೇಮಮಂದಿರ. L - - - - - - - -•••rrrrr+MMM: ( . ممرمرم به ಲಿಲ್ಲ. ಆ ಕುದುರೆಯು ಇಂದಿನವರೆಗೆ ಎಷ್ಟೋ ಪ್ರಸಂಗಗಳಲ್ಲಿ ತನ್ನ ಯಜಮಾನನ ವಿಜಯಕ್ಕೆ ಕಾರಣೀಭೂತವಾಗಿತ್ತು. ಆದರೆ ಇಂದಿನಂತೆ ಅದು ಹೇಡಿತನವನ್ನೆಂದೂ ತೋರ್ಪಡಿಸಿದ್ದಿಲ್ಲ! ಆದುದರಿಂದ ಅಲ್ಲಿ ಏನಾದರೂ ವಿಶೇಷವಿರಲಿಕ್ಕೆ ಬೇಕೆಂದು ತಿಳಿದು ಆ ತರು ಣನು ಚಟ್ಟನೆ ಕುದುರೆಯ ಮೇಲಿಂದ ಇಳಿದನು; ಮತ್ತು ಕುದುರೆಯ ಕಡಿವಾಣವನ್ನು ಕೈಯಲ್ಲಿ ಹಿಡಿದು ನಾಲ್ಕೂ ಕಡೆಗೆ ಸೂಕ್ಷ್ಮದೃಷ್ಟಿಯಿಂದ ನಿರೀಕ್ಷಿಸುತ್ತ ಒಂದೊಂದೇ ಹೆಜ್ಜೆಯನ್ನು ನಡೆಯಹತ್ತಿದನು. ಆತನ ಊಹೆಯು ನಿಜವಾಗಿಯೇ ಇತ್ತು. ಕೆಲವು ಹೆಜ್ಜೆಗಳನ್ನು ನಡೆದುಹೋದ ಬಳಿಕ ಎದುರಿನ ಒಂದು ಗಿಡದ ಬುಡದಲ್ಲಿ ಅಸ್ಪಷ್ಟವಾ ದೊಂದು ಮೂರ್ತಿಯ ಛಾಯೆಯು ಆತನಿಗೆ ಗೋಚರವಾಯಿತು ! - ನಮ್ಮ ತರುಣನು ಈ ಪ್ರಸಂಗದಲ್ಲಿ ಸ್ವಲ್ಪಾದರೂ ಭಯಪಡಲಿಲ್ಲ. ಕೈಯೊಳಗಿನ ದೀರ್ಘವಾದ ಭಾಲೆಯನ್ನು ಗಟ್ಟಿಯಾಗಿ ಹಿಡಿದು ಧೀರಸ್ವರದಿಂದ ಆತನು ಅಂಧಕಾರ ವೇಷ್ಟಿತವಾದ ಆ ಮೂರ್ತಿಯನ್ನು ಕೇಳಿದನು. ( ಅಲ್ಲಿ ನಿಂತುಕೊಂಡಿರುವವರು ಯಾರು ? ” ಆ ವ್ಯಕ್ತಿಯು ಮಾತಾಡಲಿಲ್ಲ; ಆದರೆ ಮೊಳನೊಳನೆ ನಗಹತ್ತಿತು! ನಮ್ಮ ತರುಣವೀರನು ಚಕಿತನಾದನು ! ಮತ್ತೆ ಆತನು ರೇಗಿನಿಂದ ಮಾತನಾಡಿ ದನು. “ ಯಾರೆಂಬುದನ್ನು ಹೇಳು, ಇಲ್ಲದಿದ್ದರೆ ಪ್ರಾಣಕ್ಕೆ ಎರವಾಗುವೆ. ” ಆ ಮೂರ್ತಿಯು ಎರಡು ಹೆಜ್ಜೆ ಮುಂದಕ್ಕೆ ಬಂದು ತರುಣವೀರನ ಮುಂದೆ ನಿಂತುಕೊಂಡು ಮಾತನಾಡಿತು. ( ಕುಮಾರನಿಗೆ ಜಯಜಯಕಾರವಿರಲಿ! ಮಹಾರಾಜ ರಿಗೆ ಇನ್ನೂ ವರೆಗೆ ನನ್ನ ಗುರುತು ಹತ್ತಲೇ ಇಲ್ಲವೆಂಬಂತೆ ತೋರುತ್ತದೆ!” ಕಂಠಸ್ವರದ ಮೇಲಿಂದ ತರುಣನಿಗೆ ಆ ಮೂರ್ತಿಯ ಪರಿಚಯವುಂಟಾಯಿತು. ಆತನ ಎದುರಿನಲ್ಲಿ ನಿಂತುಕೊಂಡಿದ್ದ ವ್ಯಕ್ತಿಯು ಇನ್ನಾರೂ ಆಗಿರದೆ ಆತನ ವಿಶ್ವಾಸ ಪಾತ್ರ ಸಹಚರನಾದ ಸಮರಸಿಂಹನಾಗಿದ್ದನು ! ಕಿಂಚಿದ್ದ ಂಭೀರಸ್ವರದಿಂದ ಕುಮಾರನು ಆತನಿಗೆ ಪ್ರಶ್ನೆ ಮಾಡಿದನು. (( ಸಮರಾ ನಿನಗೆ ಇಷ್ಟೇಕೆ ತಡವಾಯಿತು ? ನಿಯಮಿತಸ್ಥಾನದಲ್ಲಿ ಎಷ್ಟೋ ಹೊತ್ತಿನವರೆಗೆ ನಾನು ನಿನ್ನ ದಾರಿಯನ್ನು ನೋಡಿ ನೋಡಿ ಬೇಸತ್ತನು; ಮತ್ತು ಹಾಗೆಯೇ ತಿರುಗಬೇಕೆಂದೂ ಯೋಚಿಸಿದ್ದೆನು; ನಿನ್ನ ಪ್ರಯತ್ನಗಳೆಲ್ಲವೂ ನಿಷ್ಪಲವಾದುವೆಂದೇ ನಾನು ಭಾವಿಸಿದೆನು. ” ಸಮರಸಿಂಹನು ನಮ್ರತೆಯಿಂದ ಕುಮಾರನಿಗೆ ಪ್ರಣಾಮಮಾಡಿ ಮಾತನಾಡಿದನು. «ತಮ್ಮ ಆಶೀರ್ವಾದದಿಂದ ಕೈಕೊಂಡ ಕಾರ್ಯದಲ್ಲಿ ನನಗೆ ಯಶಸ್ಸು ಪ್ರಾಪ್ತವಾ ಯಿತು; ಆದರೆ ನನಗೆ ಕಷ್ಟಗಳು ಮಾತ್ರ ಬಹಳ ಪ್ರಾಪ್ತವಾದುವು! ೨೨