ಪುಟ:ಪ್ರೇಮ ಮಂದಿರ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ಯೂಷಣ. ••••••••••••••••••••••••••••••• ಆ ಸ್ತ್ರೀಯು ಪುನಃ ನಕ್ಕಳು. ಅವಳ ಆ ಮೊದಲಿನ ಸ್ವಭಾವವು ಇನ್ನೂ ವರೆಗೆ ದೂರವಾಗಿಲ್ಲವೆಂಬಂತೆ ತೋರಿತು. ನಗುನಗುತ್ತ ಅವಳು ಮಾತನಾಡಿದಳು, “ ನನ್ನ ಪರಿಚಯವನ್ನು ನಿನಗೆ ಹೇಳದೆ ಇದ್ದರೆ ಏನುಮಾಡುವೆ ? ” ಲಲಿತೆಗೆ ಈಗ ಬಹಳೇ ಬೇಸರವುಂಟಾಯಿತು. ಹುಬ್ಬು ಗಂಟಿಕ್ಕಿ ಅವಳು ಉಚ್ಛ ಧ್ವನಿಯಿಂದ ಮಾತನಾಡಿದಳು. “ ನಿನ್ನ ಪರಿಚಯವನ್ನು ಹೇಳದಿದ್ದರೆ ನಾನು ಬೇರೆ ಏನೂ ಮಾಡುವಂತಿಲ್ಲ. ” 1 ಹಾಗಾದರೆ ಏನು ಮಾಡುವೆ ? : « ಈಗಿಂದೀಗಲೇ ಒದರಿ ಪಹರೆಯವನನ್ನು ಇಲ್ಲಿಗೆ ಕರೆಯುವೆನು. ” ಲಲಿತೆಯ ಈ ಸಿಟ್ಟಿನಿಂದ ಆ ಸ್ತ್ರೀಯ ಮನಸ್ಸಿನ ಮೇಲೆ ಯಾವ ಪರಿಣಾಮವೂ ಉಂಟಾಗಲಿಲ್ಲ. ಆಕೆಯು ನಕ್ಕು ರಾಜಕಸ್ಯೆಯನ್ನು ಕುರಿತು ಮಾತನಾಡಿದಳು (( ಪಹರೆಯವನು ನನಗೆ ಏನು ಮಾಡಬಲ್ಲನು ? ನಾನಂತೂ ಹೇಳಿಕೇಳಿ ಹೆಂಗಸು. ನಿನ್ನ ಆ ಪಹರೆಯವನು ನನ್ನ ಶರೀರವನ್ನು ಮುಟ್ಟಲು ಕೂಡ ಸಮರ್ಥನಾ ಗಲಾರನು. ೨೨ ಆ ವಿಲಕ್ಷಣ ಸ್ತ್ರೀಯ ಮುಂದೆ ಯಾವ ರೀತಿಯಿಂದಲೂ ತನ್ನ ಆಟವು ಸಾಗುವು ದಿಲ್ಲವೆಂದು ತಿಳಿದ ಲಲಿತೆಯು ತನ್ನಲ್ಲುಂಟಾದ ಸಂತಾಪವನ್ನೆಲ್ಲ ನಿಗ್ರಹಿಸಿದಳು. ಮತ್ತು ಶಾಂತಸ್ವರದಿಂದ ಮಾತನಾಡಿದಳು. “ ಒಳ್ಳೇದು. ಹಾಗಾದರೆ ನಾನು ಪಹರೆ ಯವನನ್ನು ಕರೆಯುವುದಿಲ್ಲ. ನೀನು ಈ ಕಾಲದಲ್ಲಿ ಇಲ್ಲಿ ಏಕೆ ಬಂದಿರುವೆಯೆಂಬುದನ್ನು ಮಾತ್ರ ನನಗೆ ಹೇಳು, ” - ತನ್ನ ಮನಸ್ಸಿನೊಳಗಿನ ಉದ್ದೇಶವನ್ನು ಲಲಿತೆಗೆ ಹೇಳಬೇಕೋ ಹೇಳಬಾ ರಜೋ ಎಂದು ಆ ಸ್ತ್ರೀಯು ಆಲೋಚನೆ ಮಾಡಹತ್ತಿದಳು. ಆದರೆ ಈ ವಿಚಾರವು ಕ್ಷಣಮಾತ್ರ ನಡೆದಿತ್ತು! ದೃಢಸ್ವರದಿಂದ ಅವಳು ಕೂಡಲೇ ಉತ್ತರವಿತ್ತಳು. ( ನಿನ್ನ ಬಳಿಯಲ್ಲಿ ನಾನೊಂದು ವಸ್ತುವನ್ನು ಬೇಡಬೇಕಾಗಿದೆ. ” ( ಏನ ಬೇಡುವೆ? ನಿನಗೆ ಏನು ಬೇಕಾಗಿದೆ ? ” ಲಲಿತೆಯು ಆಶ್ಚರ್ಯದಿಂದ ಕೇಳಿದಳು.

  • ನನಗೆ ಏನು ಬೇಕೆಂದು ಕೇಳುತ್ತೀಯಾ? ನಿಜವಾಗಿಯೂ ನನಗೆ ಏನು ಬೇಕು? ಆ ಸ್ತ್ರೀಯು ಭ್ರಮೆಗೊಂಡು ತನ್ನಲ್ಲಿಯೇ ವಿಚಾರಿಸಹತ್ತಿದಳು.

ಆ ಸ್ತ್ರೀಯು ಹುಚ್ಚಿಯಾಗಿರಬೇಕೆಂದು ಈಗ ಲಲಿತೆಯು ತಿಳಿದುಕೊಂಡಳು. ಆದುದರಿಂದ ಇಷ್ಟು ಹೊತ್ತಿನವರೆಗೆ ಆ ಸ್ತ್ರೀಯ ವಿಷಯದಲ್ಲಿ ಉತ್ಪನ್ನವಾದ ತಿರಸ್ಕಾರ ಭಾವವೆಲ್ಲ ಇಲ್ಲದಂತಾಗಿ ಈಗ ದಯೆಯು ಹುಟ್ಟಿತು. ಲಲಿತೆಯು ಆವಳ ಸಮೀಪಕ್ಕೆ