ಪುಟ:ಪ್ರೇಮ ಮಂದಿರ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರೇಮಮಂದಿರ. ಫೋನರೂಪವಾದ ಅಂಗುಲಿಗಳನ್ನು ಅಲ್ಲಾಡಿಸುತ್ತ ಚಂಚಲಸ್ವಭಾವದ ಮುಕಾವಲಿಯು ತಿರಸ್ಕಾರಭಾವದಿಂದ “ ಕೃಷ್ಣ, ಹೀಗೆಯೇ ನೀನು ಎಷ್ಟು ದಿವಸಗಳವರೆಗೆ ಬೆಂದು ಬೆಂಡಾಗುತ್ತಲಿರುವೆ?” ಎಂದು ತನ್ನನ್ನು ಕುರಿತು ನುಡಿಯುತ್ತಿರುವಂತೆ ಅವಳಿಗೆ ತೋರಿತು ! ಸರ್ವರೂ ಈ ಪ್ರಕಾರ ಸಹಾನುಭೂತಿಯನ್ನು ತೋರಿಸುತ್ತಿರಲು ಕೃಷ್ಣಾ ಕುಮಾ ರಿಯು ಅದನ್ನು ಉಪೇಕ್ಷಿಸುವುದು ಅಶಕ್ಯವಾಯಿತು. ಈಗ ಆಕೆಯ ಹೃದಯದಲ್ಲಿ ನಿರಾ ಶೆಯ ಪ್ರಲಯಾಗ್ನಿಯು ಭಯಂಕರವಾಗಿ ಉರಿಯುತ್ತಿತ್ತು. ಹಾಯ? ಆ ಅಗ್ನಿಜ್ವಾಲೆಯು ಅತಿಶಯ - ಭಯಂಕರವಾದುದು! ಆ ತಾಪವನ್ನು ಸಹಿಸುವುದು ಕೃಷ್ಣಗೆ ಶಕ್ಯವಾಗ ಲಿಲ್ಲ! ಶೂನ್ಯಮನಸ್ಕಳಾಗಿ ಆ ಉನ್ನತವಾದ ಶಿಖರದ ಮೇಲಿಂದ ಮುಕ್ತಾವಳಿಯ ಮಡುವಿನಲ್ಲಿ - ಧಡಮ್ಮ'ನೆ ಹಾರಿಕೊಂಡಳು ! ಮರುದಿವಸ ಮುಂಜಾನೆ ಮುಕ್ತಾವಲಿಯ ಮಡುವಿನಲ್ಲಿ ಕೃಷ್ಣಾ ಕುಮಾರಿಯ ಪ್ರೇತವು ತರಂಗಗಳ ಮೇಲೆ ತೇಲುತ್ತಿರುವದನ್ನು ಒಬ್ಬ ಒಕ್ಕಲಿಗನು ಕಂಡನು. ಪಾಪ! ಕೃಷ್ಟಯು ಸತ್ತುಹೋದುದೇನೋ ನಿಜ, ಆದರೂ ಅವಳಿಗೆ ಕರುಣಸಿಂಹನು ಲಭಿಸ ಲಿಲ್ಲ! ಸದೋಷಪ್ರೇಮದ ಮೂಲಕ ಸ್ವರ್ಗದ್ವಾರದಲ್ಲಿ ಪ್ರವೇಶಿಸಲು ಅವಳು ಅನರ್ಹ ಳಾದಳು! ಕಾಲಮಾಹಾತ್ಮದಿಂದ ಈಗ ' ಪ್ರೇಮಮಂದಿರ'ವು ನಷ್ಟವಾಗಿ ಹೋಗಿದೆ. ಅದರೆ ಲಲಿತಾಕರುಣಸಿಂಹರ ವಿಮಲಪ್ರೇಮದ ಸ್ಥಿರ ಸ್ಮಾರಕವಾದ ಆ ಬೆಟ್ಟವು ರಜ ಪೂತಸ್ಥಾನದಲ್ಲಿ ಪ್ರವಾಸಮಾಡುವವರಿಗೆ ಈಗಲಾದರೂ ಗೋಚರವಾಗುತ್ತದೆ?