ಪುಟ:ಪ್ರೇಮ ಮಂದಿರ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರೇಮಮಂದಿರ. ೪ WwwwY ಹೀಗೆಂದು ಸಮರಸಿಂಹನು ಅಜಯನನ್ನು ಹಿಡಿದುಕೊಂಡು ಹೋಗಿ ಒಂದು ಗಿಡಕ್ಕೆ ಕಟ್ಟಿಹಾಕಿದನು. ಮತ್ತು ಭಾಲೆಯನ್ನು ಅದೇ ಗಿಡದ ಕೊಂಬೆಯಲ್ಲಿ ಭದ್ರ ವಾಗಿಟ್ಟು ಕುಮಾರನಿಗೆ ದಾರಿಯನ್ನು ತೋರಿಸುವುದಕ್ಕಾಗಿ ಅವನ ಮುಂದೆ ಮುಂದೆ ಹೊರಟನು. ಕೆಲವು ಹೊತ್ತಿನವರೆಗೆ ಅವರಿಬ್ಬರೂ ಏನೂ ಮಾತನಾಡದೆ ಮೌನವಾ ಗಿಯೇ ನಡೆಯುತ್ತಲಿದ್ದರು. ಅಲ್ಪಾವಧಿಯಲ್ಲಿಯೇ ಅವರು ಒಂದು ಸಂಕೇತಸ್ಥಳಕ್ಕೆ ಬಂದು ಮುಟ್ಟಿದರು. ಆ ನಿಬಿಡವಾದ ವನದ ಸಮೀಪದಲ್ಲಿಯೇ ಒಂದು ಬೆಟ್ಟವಿತ್ತು. ಆ ಬೆಟ್ಟದ ಮೇಲಿಂದ ಒಂದು ಚಿಕ್ಕ ಹೊಳೆಯು ಹರಿಯುತ್ತಿತ್ತು. ಇದೇ ನದಿಯು ಮುಂದೆ ಮುಕ್ತಾ ವಲಿಗೆ ಕೂಡಿ ಅನಂತರ ದುರ್ಗವನ್ನು ಪರಿವೇಷ್ಟಿಸಿತ್ತು. ಸಮರಸಿಂಹನು ಅತ್ಯಂತ ಕಷ್ಟದಿಂದ ಮಾರ್ಗವನ್ನು ಪರಿಶೋಧಿಸಿ ಕುಮಾರನನ್ನು ಆ ಕ್ಷುದ್ರವಾದ ಗಿರಿನದಿಯ ಆಚೆಯ ದಡವನ್ನು ಮುಟ್ಟಿಸಿದನು. ನದಿಯ ಆಚೆಯ ತೀರಕ್ಕೆ ಬಂದಮೇಲೆ ಮುಂದಕ್ಕೆ ಹೋಗುತ್ತಲೇ ಕರುಣ ಸಿಂಹನು ತನ್ನ ಅನುಚರನನ್ನು ಕುರಿತು ಮಾತನಾಡಿದನು. ' ಸಮರಾ ! ಗೊತ್ತಾದ ವೇಳೆಯಲ್ಲಿ ನಾವು ದುರ್ಗವನ್ನು ಮುಟ್ಟುವುದಿಲ್ಲವೆಂಬಂತೆ ತೋರುತ್ತದೆ. ಹಾಗೆ ಒಂದು ವೇಳೆ ಸರಿಯಾದ ಹೊತ್ತಿಗೆ ಮುಟ್ಟದೆ ಹೋದರೆ ಅತ್ಯಂತ ಕೌಶಲ್ಯದಿಂದಲೂ ಪರಿಶ್ರಮ ದಿಂದಲೂ ನನಗೋಸ್ಕರ ನೀನು ಮಾಡಿಟ್ಟ ಸಿದ್ದತೆಯು ವ್ಯರ್ಥವಾಗುತ್ತದೆ ! ಸಮರಾ ! ನಿನ್ನ ಆ ಮಿತ್ರನ ಪಹರೆಯ ಕಾಲವು ಈಗ ಮುಗಿದು ಹೋಗಿರಬ ಹುದಲ್ಲವೇ ? ೨೨ ಸಮರಸಿಂಹನು ಕುಮಾರನಿಗೆ ಉತ್ತರವನ್ನೇ ಕೊಡಲಿಲ್ಲ. ಅವನು ಹಾಗೆಯೇ ಮುಂದಕ್ಕೆ ನಡೆಯುತ್ತಿದ್ದನು. ಕುಮಾರನ ಲಕ್ಷವಾದರೂ ಬೇರೆ ಕಡೆಗೆ ತೊಡಗಿದ್ದು ದರಿಂದ ಆತನು ಮತ್ತೆ ಪ್ರಶ್ನೆ ಮಾಡಲಿಲ್ಲ. ಮೌನವಾಗಿಯೇ ಸಮರಸಿಂಹನ ಹಿಂದಿಂದೆ ನಡೆಯಹತ್ತಿದರು. ಕೆಲಕಾಲದ ಅನಂತರ ಅವರಿಬ್ಬರು ಎತ್ತರವಾದ ತಟದಿಂದ ಪರಿವೇ ಮಿತವಾದ ಆ ದುರ್ಗದ ಒಂದು ಗುಪ್ತದ್ವಾರದ ಹತ್ತಿರ ಬಂದರು. ಸಮರನು ತನ್ನ ಕೈಬೆರಳುಗಳಿಂದ ಮೆಲ್ಲನೆ ಆ ಬಾಗಿಲದ ಮೇಲೆ ಹೊಡೆದನು. ಅದೇ ರೀತಿಯಾಗಿ ಒಳ ಗಿನಿಂದ ಅವನಿಗೆ ಉತ್ತರವು ದೊರೆಯಿತು. ಸಮರನು ಪುನಃ ಬಾಗಿಲದ ಮೇಲೆ ಆಘಾತ 'ವನ್ನು ಮಾಡಿದ ಬಳಿಕ ಅದು ತೆರೆಯಲ್ಪಟ್ಟಿತು. ಯಾವನೋ ಒಬ್ಬನು ಮೆಲ್ಲನೆ ಮಾತನಾಡಿದನು. 14 ಬನ್ನಿ, ಬೇಗನೇ ನಡೆಯಿರಿ, » - ಸಮರಸಿಂಹನು ಕುಮಾರನನ್ನು ಕುರಿತು ಮಾತನಾಡಿದನು. “ ದೊರೆಗಳೇ, ತಾವು ಒಳಗೆ ನಡೆಯಿರಿ. ಆದರೆ ವಿಪರೀತವಾದ ಧೈರ್ಯದ ಸಾಹಸವನ್ನು ಮಾತ್ರ ಮಾಡಬೇಡಿರಿ, ಈ ಪಹರೆಯವನೇ ನಿಮಗೆ ದುರ್ಗದಲ್ಲಿ ದಾರಿಯನ್ನು ತೋರಿಸುವನು