ಪುಟ:ಪ್ರೇಮ ಮಂದಿರ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ವಾಗ್ಯೂಷಣ, • • • • • • • • • • • • • • • • • • • • • •++ ಚಂದ್ರಚೂಡನು ಖಿನ್ನ ಸ್ವರದಿಂದ ಮಾತನಾಡಿದರು. ಇಲ್ಲ. ಮಗಳೇ ! ಇಲ್ಲ. ಇದಕ್ಕೆ ಒಂದೂ ಉಪಾಯವಿಲ್ಲ. ಕುಮಾರನೊಡನೆ ನಿನ್ನ ವಿವಾಹವಾದರೆ ವೈಧವ್ಯಯೋ ಗವೇ ನಿನ್ನ ಹಣೆಯಲ್ಲಿದೆ. ಇಂದಿನಿಂದ ಒಂದು ವರುಷದವರೆಗೆ ನೀವು ಉಭಯತರೂ ಪರಸ್ಪರದರ್ಶನವನ್ನು ಕೂಡ ತೆಗೆದುಕೊಳ್ಳಲಾಗದು. ಇದು ನನ್ನ ಅಪ್ಪಣೆಯು, ನೀವು ಒಬ್ಬರನ್ನೊಬ್ಬರು ನೋಡುತ್ತಿರುವುದರಿಂದ ಭಯಂಕರವಾದ ಅನರ್ಥವು ಪ್ರಾಪ್ತವಾ ಗುವ ಸಂಭವವಿದೆ. ದೈವಘಟನೆಯು ಎಂದೂ ಸುಳ್ಳಾಗಲಾರದು. ಅದಕ್ಕೋಸ್ಕರ ವ್ಯರ್ಥ ವಾಗಿ ದುಃಖಪಟ್ಟು ಪ್ರಯೋಜನವೇನು ? ಲಲಿತೆಯ ಕಣೋಳಗಿಂದ ಅಶ್ರುಬಿಂದುಗಳು ಉದುರಿದವು. ಅವಳು ಬಿಕ್ಕುತ್ತ ಬಿಕ್ಕುತ್ತ ಮಾತನಾಡಿದಳು. “ ಹಾಗಾದರೆ ಸ್ವಾಮಿ ನಾನು ಇನ್ನು ಮೇಲೆ ದುರ್ಗಕ್ಕೆ ಹೋಗುವುದಿಲ್ಲ. ಸನ್ಯಾಸಿನಿಯಾಗಿ ನಿಮ್ಮ ಸೇವೆಯಲ್ಲಿಯೇ ಅಯುಷ್ಯವನ್ನು ಕಳೆ ಯುವೆನು. ೨) ಚಂದ್ರಚೂಡನು ಸ್ನೇಹಭರದಿಂದ ಮಾತನಾಡಿದನು. ( ಮಗಳೇ, ಹೀಗೆ ಮಾತ ನಾಡಬೇಡ. ನಾನು ಸಂಸಾರತ್ಯಾಗಿಯಾದ ಬೈರಾಗಿಯು, ಜಗತ್ತಿನೊಡನೆ ನನ್ನ ಸಂಬಂಧವ್ರ ಬಹಳ ಕಡಿಮೆ. ನಾನು ಎಲ್ಲಿ ಇರುತ್ತೇನೆ, ಏನು ಮಾಡುತ್ತಿರುತ್ತೇನೆ, ಎಲ್ಲಿ ತಿರುಗುತ್ತಿರುತ್ತೇನೆ, ಎಂಬುದಾವುದೂ ನಿಶ್ಚಿತವಿಲ್ಲ. ನನ್ನ ಆಯುಷ್ಯಕ್ರಮಕ್ಕೆ ತಾಳವೂ ಇಲ್ಲ ತಂತ್ರವೂ ಇಲ್ಲ! ಲಲಿತೇ, ಮಗೂ, ಸುಮ್ಮನೇ ನನ್ನನ್ನೇಕೆ ಮಾಯಾ-ಬಂಧನಕ್ಕೆ ಗುರಿಮಾಡುವೆ? ” ಚಂದ್ರಚೂಡನ ಈ ಪ್ರಶ್ನೆಗೆ ಏನೆಂದು ಉತ್ತರ ಕೊಡಬೇಕೆಂಬುದು ಲಲಿತೆಗೆ ತಿಳಿಯದಾಯಿತು. ಆಕೆಗೆ ಒಳ್ಳೆ ಕಠಿಣಪ್ರಸಂಗವು ಪ್ರಾಪ್ತವಾಯಿತು. (( ಒಂದು ವರುಷ! ಅಬಬಾ ? ಎಷ್ಟೊಂದು ದೀರ್ಘಕಾಲವಿದು! ಇಷ್ಟು ದೀರ್ಘಕಾಲವನ್ನು ಹೇಗೆ ಕಳೆಯುವೆನೋ ಯಾರಿಗೆ ಗೊತ್ತು ! ಇನ್ನು ದುರ್ಗಕ್ಕೆ ಪುನಃ ಹೋಗಿ ತಾಯಿಗೂ ತಂದೆಗೂ ಸುಮ್ಮ ಸುಮ್ಮನೆ ದುಃಖವನ್ನೇಕೆ ಉಂಟು ಮಾಡಬೇಕು ? ವಿಮಲಪ್ರೇಮದ ಸ್ಕೃತಿಯನ್ನು ಪ್ರಜ್ವಲಿಸುವ ಪ್ರಖರವಾದ ವತ್ನಿಯನ್ನು ಹೃದಯದಲ್ಲಿಟ್ಟು ಕೊಂಡು ಈ ದೀರ್ಘಕಾಲವನ್ನು ಹೇಗಾದರೂ ಕಳೆಯುವೆನು ; ಕಟ್ಟ ಕಡೆಗೆ ನನ್ನ ಹೃದಯೇಶ್ವರ ನನ್ನು ದೊರಕಿಸುವೆನು; ಶೇಷಾಯುಷ್ಯದಲ್ಲಿ ಸೌಖ್ಯವನ್ನು ಅನುಭವಿಸುವೆನು. ದುರ್ದೈ ವದಿಂದ ಈ ಪ್ರಕಾರ ಸಂಘಟಿಸದಿದ್ದರೆ ಸ್ವರ್ಗದೊಳಗಿನ ನಮ್ಮಿಬ್ಬರ ಸಮಾಗಮಕ್ಕೆ ಯಾರೂ ವಿಘ್ನವನ್ನುಂಟುಮಾಡಲಾರರು ! ” ಈ ಪ್ರಕಾರದ ವಿಚಾರತರಂಗಗಳು ಈ ಸಮ ಯಕ್ಕೆ ಲಲಿತೆಯ ಮನಃಸಮುದ್ರದಲ್ಲಿ ಉತ್ಪನ್ನವಾಗುತ್ತಿದ್ದುವು. ( ಹೋಗು ಮಗಳೇ ! ಹೋಗು. ಸುಮ್ಮನೇ ಹುಚ್ಚಿಯ ಹಾಗೆ ಮಾಡಬೇಡ