ಪುಟ:ಪ್ರೇಮ ಮಂದಿರ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ವಾಗ್ಯೂಷಣ, vvvvvvvvvvvvvvvvvvvvvvvvvvv ಮುಂದೆ ಸಂಭವಿಸಬಹುದಾದ ಅನರ್ಥವನ್ನು ತಡೆಯುವದಕ್ಕೋಸ್ಕರ ನಿಮ್ಮಿಬ್ಬರನ್ನು ಅಗಲಿಸಿ ನಿನ್ನನ್ನು ನನ್ನ ಆಶ್ರಮದಲ್ಲಿ ತಂದಿಟ್ಟು ಕೊಂಡೆನು. • ದೈವಘಟನೆಯಿಂದ ಕುಮಾರನು ಗಾಯಪಟ್ಟವನಾಗಿ ನನ್ನ ಆಶ್ರಮಕ್ಕೆ ಬರಲು, ಆತನ ಹತ್ತಿರ ಹೋಗಬೇಡವೆಂದು ನಾನು ನಿನ್ನನ್ನು ಆಜ್ಞಾಪಿಸಿದ್ದೆನು. ಆದರೂ ಅದನ್ನು ಮೀರಿ ನೀನು ಆತನ ದರ್ಶನವನ್ನು ತೆಗೆದುಕೊಂಡೆ. ಕೃಷ್ಣ ! ನನ್ನ ಅಪ್ಪಣೆಯನ್ನು ವಿರುವ ಪಾತಕಕ್ಕೆ ನೀನು ಹೇಸಲಿಲ್ಲ. ಆ ಪಾಪಕ್ಕೆ ಚಿತ್ರದಮನವೇ ಪ್ರಾಯಶ್ಚಿತ್ತವು ! ಮೂರು ದಿವಸಗಳವರೆಗೆ ನಿನ್ನನ್ನು ಉಪವಾಸದಿಂದ ಇರಿಸಿದೆನು. ಮನಸ್ಸನ್ನು ಸಿರಗೊಳಿ ಸೆಂದು ಉಪದೇಶ ಮಾಡಿದನು. ಆದರೆ ನಿನಗದು ಸಾಧ್ಯವಾಗಲಿಲ್ಲ. ಕೃಷ್ಣ ! ನಿನ್ನ ಅದೃ ಷ್ಟದಲ್ಲಿ ಏನಿದೆಯೆಂಬುದು ಈಗ ನಿನಗೆ ಗೊತ್ತಾಗಿದೆಯಷ್ಟೇ ? ಇನ್ನು ಮೇಲಾದರೂ ಜಾಗರೂಕಳಾಗು, ಕರುಣಸಿಂಹನೊಡನೆ ನಿನ್ನ ವಿವಾಹವಾಗುವದು ಹೇಗೆ ಅಶಕ್ಯವಾಗಿ ದೆಯೆಂಬದು ಈಗ ನಿನಗೆ ಗೊತ್ತೇ ಆಯಿತು. ಕರುಣನಿಗೆ ತಾಯಿಯಿಲ್ಲ; ತಂದೆಯಿಲ್ಲ; ನಾನೇ ಪ್ರತಿಪಾಲಕನು. ನಾನು ಆತನ ಹಿತದ ಕಡೆಗೆ ಲಕ್ಷಗೊಡದಿದ್ದರೆ ಇನ್ನಾರು ಕೊಡ ಬೇಕು. ನಿನಗೆ ಇನ್ನೂ ನಾಲ್ಕು ಪ್ರಹರಗಳ ಅವಕಾಶವನ್ನು ಕೊಡುತ್ತೇನೆ. ನಾಳೆ ಮುಂಜಾನೆ ನನಗೆ ಮತ್ತೆ ಭೆಟ್ಟಿಯಾಗು. ” ಇಷ್ಟು ಮಾತನಾಡಿ ಚಂದ್ರಚೂಡನು ಹೊರಟುಹೋದನು. ಕೃಷ್ಣಾ ಕುಮಾರಿಯು ಒಂದು ನಿಶ್ವಾಸವನ್ನು ಬಿಟ್ಟು ತನ್ನಲ್ಲಿಯೇ ವಿಚಾರಮಾಡಹತ್ತಿದಳು. ಎರಡೂ ಕೈಗಳನ್ನು ಜೋಡಿಸಿ ಆಕಾಶದ ಕಡೆಗೆ ನೋಡುತ್ತ ಅವಳು ಮಾತನಾಡಿದಳು. “ ಪ್ರಭೋ, ದಯಾ ಮಯಾ! ಈ ಪ್ರಬಲವಾದ ಪ್ರೇಮಕಾಂಕ್ಷೆಯನ್ನು ಹೇಗೆ ಪ್ರತಿಬಂಧಿಸಲಿ ? ಕರುಣಸಿಂಹ ವಿಷಯಕವಾದ ಪ್ರೇಮವನ್ನು ಹೃದಯದಲ್ಲಿ ತಳೆದೇ ಸತ್ತು ಹೋದರೆ ಒಳಿತಲ್ಲವೇ? ಈ ವಿಶಾಲವಾದ ಜಗತ್ತಿನಲ್ಲಿ ನನ್ನವರು ಯಾರಿದ್ದಾರೆ? ಕೇವಲ ಪ್ರೇಮಚಿಂತನವೊಂದು ಮಾತ್ರ ನನ್ನ ಸಹಚಾರಿಯಾಗಿದೆ. ಚಂದ್ರಚೂಡರೇ ? ಮಹಾಸ್ವಾಮಿಗಳೇ! ನೀವಂತೂ ಬೈರಾಗಿಗಳು. ನಿಮಗೆ ಹೃದಯವೆಲ್ಲಿರುವುದು ? ಪ್ರೇಮದ ಮರ್ಮವು ನಿಮಗೆ ಹೇಗೆ ಗೊತ್ತಾಗುವುದು ? ” ಕೃಷ್ಣಾಕುಮಾರಿಯ ಎರಡೂ ಕಣ್ಣುಗಳೊಳಗಿಂದ ಅಶ್ರುಪ್ರವಾಹವು ಹರಿಯತೊ ಡಗಿತು. ಒಂದೆರಡು ಅಶ್ರುಬಿಂದುಗಳು ಆ ಕರಿಯ ಕಲ್ಲಮೇಲೆಯೂ ಉದುರಿದುವು. ಆದರೆ ಆ ಪಾಷಾಣವು ನೇತ್ರಜಲದಿಂದ ಕರಗುವದುಂಟೇ ? ಕೃಷ್ಣಯು ಎದ್ದು ನಿಂತಳು. ಮೆಲ್ಲಡಿ ಗಳನ್ನಿ ಕ್ಕುತ್ತ ಆಶ್ರಮದ ಅಂತರ್ಭಾಗವನ್ನು ಸೇರಿದಳು. ಹೋಗುವಾಗ ಮನಸ್ಸಿನಲ್ಲಿಯೇ ಇಂತು ಪ್ರತಿಜ್ಞೆ ಮಾಡಿದಳು « ಕರುಣಸಿಂಹನನ್ನು ತ್ಯಾಗಮಾಡುವ ಸಂದರ್ಭವು ಒಂದು ವೇಳೆ ಪ್ರಾಪ್ತವಾದರೆ ಇನ್ನೊಮ್ಮೆ ಆರೂಪಜ್ಯೋತಿಯ ದರ್ಶನವನ್ನು ತೆಗೆದುಕೊಂಡು ಪತಂಗಿಯಂತೆ ಅದರ ಮೇಲೆ ಹಾರಿ ಸಟ್ಟು ಕೊಂಡು ಸಾಯುವೆನು, ”