ಪುಟ:ಪ್ರೇಮ ಮಂದಿರ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

99 ವಾಗ್ಯೂಷಣ. ವಿವಾಹದ ಮುಹೂರ್ತವನ್ನು ನಿಶ್ಚಯಿಸುವುದಕ್ಕೋಸ್ಕರ ನನ್ನ ತಂದೆಯು ಸರತಾನ ಸಿಂಹನ ಕಡೆಗೆ ಹೋಗಿದ್ದಾನೆ. ಯುವರಾಜನಾದ ದುರ್ಜಯಸಿಂಹನನ್ನು ಕರೆದುಕೊಂಡೇ ಇತ್ತ ಕಡೆಗೆ ನಮ್ಮ ಪ್ರನು ಬರುತ್ತಾನೆಂದು ನಾನು ಕೇಳಿದ್ದೇನೆ. ಕುಮಾರ! ತಾವು ಈ ಸಂಕಟದೊಳಗಿಂದ ನನ್ನನ್ನು ಬದುಕಿಸದಿದ್ದರೆ ನಾನು ಬದುಕುವುದಕ್ಕೆ ಮಾರ್ಗವೇ ಇಲ್ಲ. ಆದರೆ ಗೋಪ್ಯವಾಗಿ ಓಡಿಹೋಗುವುದೆಂದರೆ ನನಗೂ ನನ್ನ ವಂಶಕ್ಕೂ ಭಯಂಕರ ನಾದ ಕಲಂಕವನ್ನು ತೊಡೆದುಕೊಂಡಂತಾಗುವುದಿಲ್ಲವೇ? ನಾನು ಸರ್ವವನ್ನೂ ಸಹಿಸ ಬಲ್ಲೆನು. ಆದರೆ ಕುಲಕ್ಕೆ ಹತ್ತುವ ಕಲಂಕವನ್ನು ಸಹನಮಾಡಲಾರೆನು ! ಓಡಿ ಹೋಗು ವುದರ ಹೊರತು ನಾನು ಪಾರಾಗುವುದಕ್ಕೆ ಬೇರೆ ಉಪಾಯಗಳೇ ಇಲ್ಲವೇ? ೨ - ಹೃದಯವನ್ನು ಸ್ಥಿರಗೊಳಿಸಿ ಕರುಣಸಿಂಹನು ಬಹಳ ಹೊತ್ತಿನವರೆಗೆ ಯೋಚನೆ ಮಾಡುತ್ತ ಸುಮ್ಮನೆ ನಿಂತುಕೊಂಡನು. ಬಳಿಕ ಕ್ರಿಯೆಯ ಕರಣಪೂರ್ಣ ಮುಖ ಮಂಡಲವನ್ನು ನಿರೀಕ್ಷಿಸುತ್ತ ಇಂತು ನುಡಿದನು. (( ಲಲಿತೇ, ಎಷ್ಟು ವಿಚಾರಮಾಡಿದರೂ ಈ ಸಂಗತಿಗೆ ಅನ್ಯ ಉಪಾಯವೇ ತೋಚಲೊಲ್ಲದು. ಇಂದಿಗೆ ಎಂಟನೆಯ ದಿವಸ ಬಂದು ನಾನು ನಿನಗೆ ಭೆಟ್ಟಿಯಾಗುತ್ತೇನೆ.” (( ಯಾವ ಸ್ಥಾನದಲ್ಲಿ! ” « ಇದೇ ದುರ್ಗದಲ್ಲಿಯೇ, ” (( ಪ್ರಿಯರೇ, ತಾವು ಹೀಗೆ ವಿಪರೀತವಾದ ಧೈರ್ಯವನ್ನು ಮಾಡಬೇಡರಿ. ತಾವು ಮೊದಲನೆಯ ಸಾರೆ ಇಲ್ಲಿಗೆ ಬಂದಾಗಿನಿಂದ ದುರ್ಗದೊಳಗಿನ ಜನರಿಗೆ ಆವುದೋ ಒಂದು ಪ್ರಕಾರದ ಸಂಶಯವು ಬಂದಿದೆ. ಆ ದಿವಸಮೊದಲ್ಗೊಂಡು ಕೆಲವು ದಿವಸಗಳ ವರೆಗೆ ಪಹರೆಯವರು ನದಿಯ ಕಡೆಗೆ ಪ್ರದೇಶವನ್ನು ಒಳ್ಳೆ ಜಾಗರೂಕತೆಯಿಂದ ನೋಡಿಕೊಳ್ಳುತ್ತಿದ್ದರು. ನನ್ನ ತಂದೆಯು ಇಲ್ಲಿಂದ ಹೊರಟು ಹೋದಾಗಿನಿಂದ ಮಾತ್ರ ಆ ವ್ಯವಸ್ಥೆಯು ಇಲ್ಲದಂತಾಗಿದೆ. ಆದುದರಿಂದಲೇ ತಾವು ಈ ಹೊತ್ತಿನ ದಿವಸ ಇಷ್ಟು ಸುಲಭವಾಗಿ ಇಲ್ಲಿ ಬರುವದು ಸಾಧ್ಯವಾಯಿತು, ದೈವಾನುಕೂಲವೆಂದೇ ಹೇಳಬೇಕು; ಇಲ್ಲದಿದ್ದರೆ? « ಹಾಗಾದರೆ ಇನ್ನು ಮುಂದೆ ನಾನು ದುರ್ಗದಲ್ಲಿ ಪ್ರವೇಶ ಮಾಡುವದೆಂತು? ” ಕರುಣಸಿಂಹನು ಚಿಂತಾತುರನಾಗಿ ಪ್ರಶ್ನೆ ಮಾಡಿದನು. ಸ್ವಲ್ಪ ಹೊತ್ತು ವಿಚಾರಿಸಿ ರಾಜಕನ್ಯಯು ಇಂತು ನುಡಿದಳು. “ ಒಂದೆರಡು ದಿವೆ ಸಗಳೊಳಗಾಗಿಯೇ ನಾನು ತಮಗೊಂದು ಯುಕ್ತಿಯನ್ನು ತಿಳಿಸುತ್ತೇನೆ, ” ಒಂದು ದೀರ್ಘಶ್ವಾಸವನ್ನು ಬಿಟ್ಟು, ಲಲಿತೆಯ ಸುಂದರವಾದ ಮುಖಕಮಲವ ನ್ನೊಮ್ಮೆ ಚುಂಬಿಸಿ, ಹಗ್ಗದ ಏಣಿಯಿಂದ ಕೆಳಗಿಳಿದು ಮೆಲ್ಲಡಿಯನ್ನಿಕ್ಕುತ್ತ ಕರುಣ - ಸಿಂಹನು ಹೊರಟು ಹೋದನು.