ಪುಟ:ಪ್ರೇಮ ಮಂದಿರ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರೇಮಮಂದಿರ, M I v Ayy Ayyy ಇದಕ್ಕೆ ಇನ್ನಾವ ಉಪಾಯವಿದೆ? ಈ ವಿಶಾಲವಾದ ಸೃಷ್ಟಿಯಲ್ಲಿ ಯಾರಿಗೆ ತನ್ನವ ರೆಂದು ಹೇಳಿಕೊಳ್ಳಲು ಒಬ್ಬರೂ ಇಲ್ಲವೋ ಅಂತಹರಿಗೆ ಭಗವಂತನ ಹೊರತು ಇನ್ನೊಂದು ಆಧಾರವಾವುದು? ಸಜಲನೇತ್ರಗಳಿಂದಲೂ ಭಾವಾಕ್ರಾಂತಹೃದಯ ದಿಂದಲೂ ಲಲಿತೆಯು ಆಕಾಶದ ಕಡೆಗೆ ನೋಡಿದಳು. ಶುಭ್ರವಾದ ನಿರ್ಜಲ ಮೇಘ ಖಂಡಗಳು ಎಲ್ಲೆಡೆಯಲ್ಲಿಯೂ ಹರಡಿದ್ದು ಅವುಗಳಾಚೆಯಲ್ಲಿ ಸುನೀಲವಾದ ಆಕಾಶವು ತರಂಗಹೀನವೂ ಶಾಂತವೂ ಸ್ಥಿರಪ್ರಕೃತಿಯೂ ಆದ ಸಮುದ್ರದಂತೆ ಕಾಣುತ್ತಿತ್ತು. ಆ ಶಾಂತವಾದ ನೀಲಾಕಾಶದ ಒಂದು ತೇಜಃಪುಂಜಿ ಭಾಗದಲ್ಲಿ ಮಹಾಮೂಲ್ಯವಾದ ರತ್ನಖಚಿತ ಸಿಂಹಾಸನದಲ್ಲಿ ಕರುಣಸಿಂಹನ ದಿವ್ಯವಾದ ಉಜ್ವಲಮೂರ್ತಿಯು ವಿರಾಜ ಮಾನವಾಗಿರುವಂತೆ ಅವಳಿಗೆ ತೋರಿತು! ಆ ಜ್ಯೋತಿರ್ಮಯವಾದ ಸ್ವರ್ಗ ರಾಜ್ಯದಲ್ಲಿ ಪ್ರವೇಶಿಸಿದ ಕುಮಾರನ ತೇಜೋಮಯ ಮೂರ್ತಿಯು ಅಧಿಕವಾದ ಉಜ್ವಲತೆಯನ್ನು ಧಾರಣಮಾಡಿತ್ತು. ತೇಜಃಪುಂಜವಾದ ಆ ಮುಖಮಂಡಲದ ಮೇಲೆ ಲವಮಾತ್ರವೂ ಕಲಂಕವಿದ್ದಿಲ್ಲ. ವಿಷಾದ, ಕ್ಲಾ೦ತಿ ಮೊದಲಾದ ಯಾವ ಕಳೆಯೂ ಆ ಮುಖದಲ್ಲಿದ್ದಿಲ್ಲ. ಆ ಮೂರ್ತಿಯ ನೇತ್ರಗಳಲ್ಲಿ ಆಶೆಯೂ, ದೃಷ್ಟಿಯಲ್ಲಿ ದಿವ್ಯಸ್ನೇಹವೂ, ಓಷ್ಠ ಪ್ರಾಂತದಲ್ಲಿ ಸ್ವರ್ಗಿಯ ಹಾಸ್ಯವೂ, ಹೃದಯದಲ್ಲಿ ಚಿರಕಾಲೀನ ಜೀವಂತಪ್ರೇಮವೂ ವಾಸಮಾಡು ತಿದ್ದುವು. ಆ ಅಜ್ಞಾತವಾದ ಸಾಮ್ರಾಜ್ಯದಲ್ಲಿ ಹೋಗಿ ಉಜ್ವಲವೂ, ತೇಜಃಪೂರ್ಣವೂ ಆದ ಸ್ವರ್ಗೀಯ ಸಿಂಹಾಸನದಲ್ಲಿ ಕುಳಿತು ಕುಮಾರನು ಹಾಸ್ಯಮುಖದಿಂದ ಅಂಗುಲಿ ನಿರ್ದೆಶಮಾಡುತ್ತ ಲಲಿತೆಯನ್ನು ಕುರಿತು ಹೀಗೆ ಹೇಳುತ್ತಿರುವಂತೆ ತೋರಿತು. (ಲಲಿತೇ, ಹೃದಯೇಶ್ವರಿ! ಪ್ರಿಯೇ ಇಲ್ಲಿ ಬಾ ! ಇಲ್ಲಿ ಬರಲು ಹೆದರುವೆಯೇಕೆ ? ಇದೋ ನೋಡು. ನಿನಗೋಸ್ಕರವಾಗಿ ಈ ದಿವ್ಯಸಿಂಹಾಸನದಲ್ಲಿ ಅರ್ಧ ಸ್ಥಳವನ್ನು ಹಾಗೆಯೇ ಬಿಟ್ಟಿದ್ದೇನೆ. ಈ ಸ್ಥಾನದಲ್ಲಿ ಯಾವತರದ ಚಿಂತೆಯೂ ಇಲ್ಲ; ಯಾತನೆಗಳಿಲ್ಲ; ವಿರಹವಿಲ್ಲ; ನಿರಾಶೆ, ನಿಂದೆ, ಅವಮಾನಾದಿಗಳ ಹೆಸರು ಕೂಡ ಇಲ್ಲಿ ಇಲ್ಲ. ಹಾಗಾದರೆ ಇಲ್ಲಿ ಏನಿರುವುದೆಂದು ಕೇಳುತ್ತೀಯೋ? ಕೇವಲ ಚಿರಶಾಂತಿಯೂ, ಅನಂತವೂ ಸ್ವರ್ಗಿ ಯವೂ ಆದ ವಿಮಲಪ್ರೇಮವೂ, ಮಧುರಸ್ನೇಹವೂ ಇಲ್ಲಿ ಪೂರ್ಣತ್ವದಿಂದ ವಾಸಿಸ ಇವೆ, ಲಲಿತೇ! ಇಂತಹ ರಮಣೀಯವಾದ ಸ್ಥಳಕ್ಕೆ ಬರಲು ನೀನು ಶಂಕಿಸುತಿ, ರುವಿಯೇಕೆ ? ” ಮನಃಕಲ್ಪಿತವಾದ ಈ ದೃಶ್ಯವನ್ನು ನೋಡಿ ಆ ಯಾತನಾಮಯ ಸ್ಥಿತಿಯಲ್ಲಿಯೂ ಲಲಿತೆಯ ಮುಖಮಂಡಲದ ಮೇಲೆ ಹರ್ಷಚ್ಛಾಯೆಯು ಪಸರಿಸಿತು. ನಿರಾಶೆಯ ಘೋರ ವಾಡ ಅಂಧಕಾರದಲ್ಲಿ ಆಶಾಕಿರಣವೊಂದು ಪ್ರಕಾಶಿಸಲು ಆ ಅಂಧಕಾರದಲ್ಲಿ ತೋಳ ಲುತ್ತೆ ಬಿದ್ದಿರುವ ಪ್ರಾಣಿಗೆ ಹೇಗೆ ಉತ್ಕಟವಾದ ಆನಂದವಾಗುವುದೋ ಅದರಂತೆಯೇ ರಾಜಕುಮಾರಿಗೆ ಈ ಸಮಯದಲ್ಲಿ ಅಪೂರ್ವವಾದ ಆನಂದವಾಯಿತು. ಹೃದಯವಲ್ಲ