ಪುಟ:ಪ್ರೇಮ ಮಂದಿರ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರೇಮಮಂದಿರ, ೧೭ Avry - * * * * * * ವಿಮಲಸಿಂಹನು ತನ್ನ ಪ್ರಾಂತವನ್ನೂ ದುರ್ಗವನ್ನೂ ಕಳೆದುಕೊಂಡಾಗ ವಿಧುರ ವಸ್ಥೆಯಲ್ಲಿದ್ದನು. ಆತನ ಮೊದಲನೆಯ ಹೆಂಡತಿಯು ಸತ್ತ ತರುವಾಯ ಮತ್ತೊಬ್ಬ ರೂಪ ವತಿಯನ್ನು ಮದುವೆಮಾಡಿಕೊಂಡಿದ್ದನು. ಆ ತರುಣಿಯ ಚಾರಿತ್ರ್ಯದ ಸಂಬಂಧವಾಗಿ ಆತನ ನಗರದಲ್ಲಿ ಎಷ್ಟೋ ದುರ್ವತ್ತಾಂತಗಳು ಹರಡಿದ್ದುವು. ಈಗಿನ ದುರ್ಗಪತಿಯಾದ ಭೀಮಸಿಂಹನು ಸೇನಾಪತಿಯಾಗಿದ್ದನು. ನೂತನ ರಾಜ್ಜಿ ಮತ್ತು ಭೀಮಸಿಂಹ ಇವರ ವಿಷಯವಾಗಿ ಕಲಂಕದ ವರ್ತಮಾನವ ಪಟ್ಟಣದಲ್ಲಿ ಪಸರಿಸಿತು. ಈ ಅಪಮಾನವನ್ನು ಸಹಿಸಲಾರದೆ ,ವಿಮಲಸಿಂಹನು ಪತ್ನಿಗೆ ವಿಷಪ್ರಾಶನ ಮಾಡಿಸಿ ಅವಳನ್ನು ಕೊಂದು ಬಿಟ್ಟನು. (( ಅನಂತರ ಸ್ವಲ್ಪ ದಿವಸಗಳಲ್ಲಿಯೇ ವಿಮಲಸಿಂಹನ ದುರ್ದೈವಕ್ಕೆ - ಮೊದಲ ಯಿತು ! ಭೀಮಸಿಂಹನ ಕಪಟವನ್ನು ಅರಿಯದೆ ಅವನು ಹೇಳಿದುದೆಲ್ಲ ನಿಜವೆಂದು ತಿಳಿದು ದಿಲೀಪತಿಯು ದುರ್ಗವನ್ನು ಬಿಟ್ಟು ಬಿಡುವಂತೆ ವಿಮಲಸಿಂಹನಿಗೆ ಆಜ್ಞಾಪಿಸಿದನು. ಅದೇ ದಿವಸ ರಾತ್ರಿ ದುರ್ಗಾಧಿಪತಿಯು ಓಡಿಹೋದನು. ನಿನ್ನ ತಾಯಿಯ ದುರಾಚಾರವು ಚೆನ್ನಾಗಿ ಗೊತ್ತಿದ್ದರೂ ಪ್ರೀತಿ ವಿಶೇಷದ ಮೂಲಕ ಅವನು ನಿನ್ನನ್ನು ತ್ಯಜಿಸಲಿಲ್ಲ. ನೀವು ಕುಳಿತುಕೊಂಡಿದ್ದ ಹಡಗವು ಒಡೆದು ಹೋದ ಬಳಿಕ ಮುಕ್ತಾವಳಿಯ ದಂಡೆಯ ಮೇಲೆ ವಾಸವಾಗಿದ್ದ ಒಬ್ಬ ಬೈರಾಗಿಯು ನಿಮ್ಮನ್ನು ಬದುಕಿಸಿದನು. ಕೃಷ್ಣ ! ಆ ಬೈರಾ ಗಿಯೇ ನಾನು, ” - “ ನಾನು ಸಂಸಾರತ್ಯಾಗಿಯಾದ ಬೈರಾಗಿಯು ನಿನ್ನನ್ನು ಕಟ್ಟಿಕೊಂಡು ನಾನು ಮಾಡತಕ್ಕದ್ದೇನು ? ಆದರೂ ವಿಮಲಸಿಂಹನ ಮೇಲಿದ್ದ ನನ್ನ ಪ್ರೇಮವು ನನ್ನನ್ನು ಬಿಟ್ಟು ಹೋಗಲಿಲ್ಲ. ನಾನು ಯಾವಾಗಲೂ ಆಗ್ರಾ ಪಟ್ಟಣಕ್ಕೆ ಹೋಗುತ್ತಿದ್ದೆನು. ಅಲ್ಲಿ ಒಬ್ಬ ಸಾವುಕಾರನು ನನ್ನ ಪ್ರಮುಖ ಶಿಷ್ಯನಾಗಿದ್ದನು. ನಿಮ್ಮಿಬ್ಬರ ಪಾಲನಸೋಷಣದ ಭಾರ ವನ್ನು ನಾನು ಆತನಿಗೆ ಒಪ್ಪಿಸಿದೆನು. " ( ಮಾಘಮಾಸದಲ್ಲಿ ಪೌರ್ಣಿಮೆಯ ದಿವಸ ನಾನೊಮ್ಮೆ ಅಗ್ರಕ್ಕೆ ಹೋಗಿ ದ್ದೆನು. ಆಗ ಕರುಣಸಿಂಹನು ಬಾದಶಹನ ಬಳಿಯಲ್ಲಿ ಕೆಲಸ ಮಾಡುತ್ತಿದ್ದುದು ನನಗೆ ತಿಳಿಯಬಂತು. ಅದನ್ನು ಕೇಳಿ ನನಗೆ ಬಹಳ ಸಂತೋಷವಾಯಿತು. ನಾನು ನಿಂತ ನಾದೆನು. ಆದರೆ ನಿಮ್ಮಿಬ್ಬರ ಬಾಲ್ಯಸ್ನೇಹವು ಪ್ರೇಮದಲ್ಲಿ ರೂಪಾಂತರ ಹೊಂದುತ್ತ ನಡೆದಿರುವುದೆಂಬುದು ಆ ಸಾವಕಾರನ ಹೆಂಡತಿಯಿಂದ ನನಗೆ ಗೊತ್ತಾಯಿತು. ಇದನ್ನು ಕೇಳಿ ನನಗೆ ಅತ್ಯಂತ ವ್ಯಸನವಾಯಿತು, ” - - - ಕೃಷ್ಣ! ಮನಸ್ಸಿನಲ್ಲಿ ಕಳವಳಪಡಬೇಡ. ನಿನ್ನ ತಾಯಿಯ ಮೇಲಿನ ಕಲಂಕವು ಮರೆತುಹೋಗುವುದು ಅಶಕ್ಯವಾಗಿತ್ತು. ಕರುಣಸಿಂಹನೊಡನೆ ನಿನ್ನ ವಿವಾಹವಾಗು ವುದೂ ಅಶಕ್ಯವಾಗಿತ್ತು. ಈ ಸಂಗತಿಯು ನನಗೊಬ್ಬನಿಗೇ ಗೊತ್ತಿತ್ತು. ಆದುದರಿಂದ