ಪುಟ:ಸುವರ್ಣಸುಂದರಿ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ವನ್ನು ಹೋಗಲಾಡಿಸಿಕೊಳ್ಳುವುದುಂಟೆ ? ಎಲ್ಲಿಯ ಮಾತು ? ಹೀಗೆ ಹೇಳುತ್ತಿರುವಾಗಲೂ ಸುವರ್ಣಶೇಖರನು ಹಸಿವು ಬಾಯಾ ರಿಕೆಗಳಿಂದ ಬಳಲುತ್ತಿದ್ದನು ನಿಮಿಷ ನಿಮಿಷಕ್ಕೆ ಹಸಿವು ಹೆಚ್ಚುತ ಹೋಯಿತು ಅರಸನು ಸಂಕಟಪಡುತ್ತಾ ಅರಚಲಾರಂಭಿಸಿದನು ಮಗಳಾದ ಸುವರ್ಣಸುಂದರಿಗೆ ಏನೂ ತೋರದೆ ತಂದೆ ಸಂಕಟ ಪಡುವುದನ್ನೇ ನೋಡುತ್ತಿದ್ದಳು ಏನು ಮಾಡಿಯಾಳು ? ಇನ್ನೂ ಬಾಲಿಕೆ ಹೀಗಾಗುವುದಕ್ಕೆ ಕಾರಣಗಳೇ ಅವಳಿಗೆ ತಿಳಿಯಲಿಲ್ಲ ಕರಗೆ ಆತನನ್ನು ಸಮಾಧಾನಗೊಳಿಸಬೇಕೆಂದು ಸುವರ್ಣ ಸುಂದರಿ ತಂದೆಯನ್ನು ಪ್ರಿತಿಬಂದ ತಬ್ಬಿಕೊಂಡಳು. ಕೂಡಲೇ ಸುವರ್ಣಶೇಖರನೂ ಬಗ್ಗಿ ಮಗಳಿಗೆ ಮುತ್ತಿಟ್ಟು ಪ್ರೇಮ ದಿಂದ, ಮಗು, ಸುವರ್ಣ ಸುಂದರಿ ? " ಎಂದು ಕರೆದನು ಆದರೆ ಅವಳಿಂದ ಉತ್ತರವೇ ಬರಲಿಲ್ಲ ಕಾರಣವೇನು ? ಅಯ್ಯೋ, ವಿಧಿಯೇ ! ಸುವರ್ಣಸ್ಪರ್ಶದ ಮಹಿಮೆ ಎಂತಹದು ! ಯಾವು ದನ್ನೂ ಬಿಡುವುದಿಲ್ಲವಲ್ಲಾ ! ಸುವರ್ಣಶೇಖರನ ಮೈಕೈಗಳು ಮಗಳಿಗೆ ಸೋಕಿದಕೂಡಲೆ ಅವಳ ಮಾರ್ಪಟ್ಟಳಲ್ಲಾ! ಸುವರ್ಣ ಸುಂದರಿ ಸುವರ್ಣಸುಂದರಿಯೇ ಆದಳು ! ಅವಳ ಹೆಸರು ಅವಳಿಗ ಅನ್ನರ್ಧನಾಮವಾಯಿತು ಅವಳ ಗುಲಾಬಿಬಣ್ಣದ ಮುಖವೂ, ಕೆನ್ನೆ ಗಳೂ ಧಳಧಳಿ ಸು ಾ ಸುವರ್ಣವಾಗಿ ಬದಲಾ ಯಿಸಿ ಕಣ್ಣಿನಲ್ಲಿ ಸುರಿಯುತ್ತಿದ್ದ ನೀರು ಸಹಾ ಹಳದಿಬಣ್ಣದ ಹನಿಗಳಾದವು ತಲೆಯಲ್ಲಿದ್ದ ಕೂದಲೂ “ಸಹ ಚಿನ್ನದ ಎಳೆ ಗಳಾದವು. ಮೃದುವಾದ ಆ ಮದುಮಗಳ ಶರೀರವು ಕಲ್ಲಿನಂತೆ ಗಟ್ಟಿಯಾಗಿ ಅವಳು ಸುವರ್ಣ ಪ್ರತಿಮಯಾದಳು ಸುವರ್ಣಶೇಖರನ ದುರದೃಷ್ಟಕ್ಕೆ ಅವಸಿದ್ದ ಒಬ, ಮಗಳೂ ಸುವರ್ಣಸ್ಪರ್ಶದ ಬಾಯಿಗೆ ತುತ್ತಾದಳು ದುರದೃಷ್ಟವು ಹೀಗೂ ಬಾಧಿಸುವು ದುಂಟೇ ? ಇದನ್ನು ನೋಡಿದರೆ ಯಾರಿಗೆ ತಾನೇ ದುಃಖವುಂಟಾ