ಪುಟ:ಕಥಾ ಸಂಗ್ರಹ - ಭಾಗ ೨.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

70 ಕಥಾಸಂಗ್ರಹ-೪ ನೆಯ ಭಾಗ ಆ ಮೇಲೆ ರಾಮನು ಪಂಪಾವನದಲ್ಲಿ ಬರುತ್ತೆ ಅಲ್ಲಿರುವ ಶಬರಿಯೆಂಬ ಕಿರಾತ ಸ್ತ್ರೀಯ ಆಶ್ರಮವನ್ನು ಹೊಕ್ಕು ಆಕೆ ಮಾಡಿದ ಭಕ್ತಿ ಪೂರ್ವಕವಾದ ಆತಿಥ್ಯವನ್ನು ಕೈಕೊಂಡು ಸಂಪಾತೀರಕ್ಕೆ ಬಂದನು. ಆಗ ರಾಮನು ಲಕ್ಷ್ಮಣನನ್ನು ನೋಡಿ ಎಲೈ ತಮ್ಮನೇ, ನೋಡು, ಇದು ಮತಂಗಮುನಿಯ ಆಶ್ರಮವು, ಆ ಯತಿಯ ಮಹಿಮಾತಿಶಯದಿಂದ ಇಲ್ಲಿರುವ ಮೃಗಪಕ್ಷಿಗಳು ಸ್ವಭಾವವಾದ ಜಾತಿವೈರವನ್ನು ಬಿಟ್ಟು ಪರಸ್ಪರೋಪಕಾರಿಗಳಾಗಿರುವುವ, ಹೆಣ್ಣು ನವಿಲುಗಳು ಹಾವಿನ ಮರಿಗಳಿಗೆ ಕುಟುಕುಗಳನ್ನು ಕೊಟ್ಟು ಪೋಷಿಸುತ್ತಿರುವವ. ಸಿಂಹಗಳು ಸಲ್ಲ ಕೀಶಾಖೆಗಳನ್ನು ತಂದು ಆನೆ ಮರಿಗಳಿಗೆ ತಿನ್ನಿಸುತ್ತಿರುವುವು. ಹುಲಿಮರಿಗಳು ಹಸುಗಳ ಮೊಲೆಗಳನ್ನು ಪ್ರೀತಿಯಿಂದ ಉಣ್ಣು ತಿರುವುವು. ಸಿವಂಗಿಗಳು ಹುಲ್ಲೇಮರಿಗಳೊಡನೆ ಸರಸವಾಡು ತಿರುವವು. ಇದೋ, ಇದೇ ಋಷ್ಯಮಕಮ ಹೀಧರವು, ಇಲ್ಲಿ ನಮಗೆ ಸಹಾಯ ಮಾಡುವವನಾದ ಸುಗ್ರೀವನೆಂಬ ಕಪಿವೀರನಿರುವನು. ಇಲ್ಲಿ ನೋಡು, ಇದೇ ಸಂಪಾ ಸರಸ್ಸು, ಇದರ ರಮಣೀಯತೆಯನ್ನು ಬಣ್ಣಿಸುವವರಾರು ? ಈ ಸರಸ್ಸೆಂಬ ನಾರಿಯು ಶೈವಾಲವೆಂಬ ಕೇಶಪಾಶದಿಂದಲೂ ತಾವರೆಯೆಂಬ ಮುಖದಿಂದಲೂ ವಿಾನು ಗಳೆಂಬ ಕಣ್ಣುಗಳಿಂದಲೂ ಚಂಪಕಕುಸುಮವೆಂಬ ನಾಸಿಕದಿಂದಲೂ ಕುಮುದಪುಷ್ಪಗ ಳೆಂಬ ಮಂದಹಾಸದಿಂದಲೂ ಚಕ್ರವಾಕಗಳೆಂಬ ಕುಚಗಳಿಂದಲೂ ಕಿರು ದೊರೆಗಳೆಂಬ ತ್ರಿವಳಿಗಳಿಂದಲೂ ದಡದಲ್ಲಿರುವ ಮಾಮರಗಳ ಚಿಗುರುಗಳೆಂಒ ವಸ್ತ್ರದಿಂದಲೂ ನಿರ್ಮ ಲೋದಕವೆಂಬ ಲಾವಣ್ಯದಿಂದಲೂ ಕೂಡಿ ಸೊಗಸಾಗಿರುವಳು ಎಂದು ಹೇಳುತ್ತ ಹಾ ಸೀತೆಯೇ ! ಕೋಮಲಾಂಗಿಯೇ ! ಎಂದು ಬಾರಿಬಾರಿಗೂ ಹಂಬಲಿಸುತ್ತಿದ್ದನು. ಒಂದು ರಾತ್ರಿಯಲ್ಲಿ ಉದಯವನ್ನು ಹೊಂದಿದ ಚಂದ್ರನನ್ನು ನೋಡಿ ಭಯ ಪಟ್ಟು ಲಕ್ಷ್ಮಣನನ್ನು ಕುರಿತು-ಎಲೈ ತಮ್ಮ ನೇ, ಬೇಗೇಳು ಒಂದು ಮರದ ನೆರಳನ್ನು ಸೇರಿಕೊಳ್ಳೋಣ. ಸೂರ್ಯನು ತನ್ನ ತೀಕ್ಷ್ಯತೆಯುಳ್ಳ ಕಿರಣಗಳಿಂದ ಸುಡುತ್ತಿರು ವನು ಎನ್ನಲು ; ಆಗ ಲಕ್ಷ್ಮಣನು..- ಎಲೈ ಅಣ್ಣನೇ, ಸಮರಾತ್ರಿಯಲ್ಲಿ ಸೂರ್ಯನೆ ಇರುವನು ? ಈಗ ಚಂದ್ರನುದಿಸಿರುವನು ಎನ್ನಲು, ರಾಮನು.ಇವನು ಚಂದ್ರನೆಂಬು ದು ನಿನಗೆ ಹೇಗೆ ತಿಳಿಯಿತು? ಎಂದು ಕೇಳಿದುದಕ್ಕೆ ಲಕ್ಷ್ಮಣನು--ಅದೋ, ಬಿಂಬಮ ಧ್ಯದಲ್ಲಿ ಕಳಂಕವಿರುವುದು, ನೋಡು ಎಂದನು. ರಾಮನು ಕಳಂಕವೆಂಬ ಮಾತನ್ನು ಕೇಳಿ-ಅಯ್ಯೋ, ಇದು ಚಂದ್ರಬಿಂಬವೇ ? ಎಲೆ ಚಂದ್ರಮುಖಿಯೇ, ಎಲ್ಲಿರುವೆ ? ಎಂದು ಸೀತೆಯನ್ನು ನೆನಸಿಕೊಂಡು ಮರ್ಲೆಹೊಂದಿದನು. ಆಗ ಲಕ್ಷ್ಮಣನು ಶೈತ್ಯೋಪಚಾರಮಾಡಿ ರಾಮನನ್ನು ಎಬ್ಬಿಸಿ ಹಿಡಿದು ತನ್ನೆ ದೆಗೊರಗಿಸಿಕೊಂಡು-ಎಲೈ ಆಗ್ರಜನೇ, ನೀನು ಯುಕ್ತಾಯುಕ್ತ ವಿಚಾರತತ್ಪರನು. ಮತ್ತು ಮಹಾ ಧೈರ್ಯಸಂಪನ್ನನು, ಇಂಥಾ ನೀನು ಧೈರ್ಯಹೀನನಾಗಿ ದುಃಖಪಡು ವುದುಚಿತವೇ ? ಮನುಷ್ಯರಿಗೆ ದುಃಖಕ್ಕಿಂತ ಬೇರೆ ಹಗೆಯುಂಟೇ ? ದುಃಖವು ಉತ್ಸಾಹವನ್ನು ತಗ್ಗಿಸುವುದು, ಧೈರ್ಯವನ್ನು ಹಾಳ್ಳಾಡಿ ಬುದ್ಧಿ ಯನ್ನು ಮಣ್ಣು ಕೂಡಿಸುವುದು, ಬಲವನ್ನು ಕುಂದಿಸುವುದು, ತೇಜಸ್ಸನ್ನು ನಂದಿಸುವುದು, ಅದು ಕಾ