ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚತುರ್ಥಾಶ್ವಾಸಂ

೮೩

      ಎಂದು ಪರಿಚ್ಛೇಧಿಸಿ ನುಡಿಯೆ---
      
      ಕಂ||ನಿನಗೆ ಸಹಾಯಂ ದಶರಥ
           ಜನನಾಥಂ ತತ್ಸಹಾಯದಿಂ ಲುಬ್ಧಕ ವಾ||
           ಹಿನಿಯಂ ಮರ್ದಿಸು ಧುರದೊಳ್
           ನಿನಗಂ ತನಗಂ ಜವಂಗಮಿದಿರಾಂಪವರಾರ್||೪೨||

      ಎಂದು ಮಂತ್ರಿಮಂಡಲಂ ಬಿನ್ನವಿಸೆ ಜನಕಂ ದಶರಥನಲ್ಲಿಗೆ ಲೇಖವಾಹಕರ
ನಟ್ಟಿ ಸಮರಸನ್ನದ್ಧನಾಗಿ ಬೇಗಮೊಂದೆರಡು ಪಯಣಮಂ ನಡೆದನಿತ್ತಲ್--

      ಕಂ||ಬಾರಿಸಿ ಲೇಖಾರ್ಥಮನವ
           ಧಾರಿಸಿ ದಶರಥಮಹೀಭುಜಂ ಪೊಯಿಸುವುದುಂ||
           ಭೇರಿಯ ಬ೦ಭಾರವಮದು
           ಭೈರವ ರವದಂತೆ ತೀವೆ ಗಗನೋದರಮಂ||೪೩||

      ಆ ವೃತ್ತಾಂತಮಂ ತಿಳಿದು--

ಚಂ||ಪುದಿಯೆ ವಿಭೂಷಣಾ೦ಶು ನಭಮಂ ತನುದೀಧಿತಿ ಬೇರದೊಂದು ಜೊ|
ನ್ನದ ಸಿರಿ ಕಾರ ಕಾರಿರುಳ ಮೆಯ್ಸಿರಿ ತಪ್ಪದೆನಲ್ ದಿಗಂತಮಂ||
ಪುದಿಯೆ ಬಲಾಚ್ಯುತರ್ ತರುಣಕೇಸರಿವೋಲ್ ಪುಗುತಂದರಿರ್ವರುಂ|
ಕದನ ಮದೋದ್ಧತರ್ ದಶರಥಕ್ಷಿತಿನಾಥ ಸಭಾಂತರಾಲಮಂ|| ೪೪ ||

      ಅಂತು ಬಂದು ತಂದೆಯ ಪಾದಾರವಿಂದಕ್ಕೆರಗಿ--

      ಕಂ||ಬಲದೆಡಗೆಲದಾಸನದೊಳ್
           ಬಲಾಚ್ಯುತರ್ ನೆಲಸಿ ಮೇರುನಗದುಪನಗಮಂ||
           ಗೆಲೆವಂದರ್ಪಸರಿಸೆ ನಿ
           ಸ್ತುಲ ಮುಕ್ತಾಭರಣ ಕಿರಣ ನಿರ್ಝರ ನೀರಂ||೪೫||

      ಅನ೦ತರ೦--

      ಕಂ||ಗೆಲೆ ನಿಟಿಲಮರ್ಧಚಂದ್ರನ
           ವಿಲಾಸಮಂ ನೊಸಲೊಳೆಸೆಯೆ ಕರ ಸರಸಿಜ ಕು||
           ಟ್ಮಲಮಮೃತಕಳೆಗೆ ದಂತಾಂ
           ಶು ಲೇಖೆ ಮಾರ್ಪೊಳೆಯೆ ರಾಮಚಂದ್ರಂ ನುಡಿದಂ||೪೬||