ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೩೦t ಅ೦ತು ರಾವಣಂ ತನ್ನ ಮೇಲೆ ಬಂದು ರಜತಗಿರಿ ನಿತಂಬದೊಳ್ ಬೀಡಂ ಬಿಟ್ಟನೆಂಬುದನಿಂದ್ರಂ ಕೇಳು ಸಮರಸನ್ನಾಹ ಭೇರಿಯಂ ಪೊಯಿಸುವುದು ಕಂ || ಚತುರಂಬುರಾಶಿಯಂ ಘೋ ರ್ಣಿತವೆನೆ ದಿಗ್ವಲಯಮಂ ದಿಶಾ ದ್ವಿರದನ ಬೃ೦ ! ಹಿತಮೆನೆ ನಭಮಂ ಘನ ಗ ರ್ಜಿತಮೆನೆ ಪುದಿದು ಭೂರಿ ಭೇರೀನಿನದಂ || ೧೯೮ || ಚ || ಕರಿಗಳ ವಾಜಿರಾಜಿಗಳ ತೇರ್ಗಳ ಖೇಚರರೊಡ್ಡಣಕ್ಕಣಂ ! ಧರೆ ಕಿ ಚಿದಂಬರಂ ಕಿ ಅದು ಕೇತನಮಾಲಿಕೆಗೆಂಬಿನಂ ವಿಯ || ಚ್ಚರ ಧರಣೀಶ ರತ್ನಮಕುಟಪ್ರಭೆಯಿಂ ದಶದಿಜುಖಂಗಳುಂ! ಭರಿತ ಮೆನಿಪ್ಪಿನಂ ನೆರೆದುದಾ ಧ್ವನಿಗಿ೦ದ್ರನ ರುಂದ್ರಸೈನಿಕಂ || ೧೯೯ || ಅಂತು ನೆರೆದು ರಣಭೂಮಿಯೊಳಿ೦ದ್ರನ ಬಲಂ ಬಲಿದೊಡ್ಡಿ ನಿಲ್ವು ದುಂ ರಾವಣನ ಬಲಂ ರಣರಭಸದಿಂ ಬ೦ದು ತಾಗುವುದುಂ ಕಂ|| ಇರ್ಬಲದ ಚತುರ್ಬಲ ಮುಂ ದೊರ್ಬಲಮಂ ಮೆಅಲೆದು ನೆರೆದು ಕಾದುವ ಪದದೊಳ್ || ಮಾರ್ಬಲಮಂ ಸುರಸೈನಿಕ ಮೇಲ್ಪಟ್ಟ ದುದಳ್ಳಿ ಬಳ್ಳಿ ಬೆ೦ಗುಡುವಿನೆಗಂ | ೨೦೦ !! ಅ೦ತು ರಾಕ್ಷಸಬಲಮೆಲ್ಲಮೆಲ್ಲನುಲಿದೋಡುವುದು ಕಂಡು ಮುಖ್ಯನಾಯಕ ರಪ್ಪ ವಜ್ರ ವೇಗನುಂ ಹಸ್ತ ನುಂ ಪ್ರಹಸ್ತನುಂ ಮಾರೀಚನುಂ ಉದ್ಧಟನುಮುಚ್ಚಳ ನುಂ ವಜ್ರನಂ ಮಹಾಜಲಧರನುಂ ಸಂಧ್ಯಾ ಭ್ರನುಂ ಕೂರನುಮೆಂದಿವರ್ ಮೊದ ಲಾಗೆ ಮಹಾಬಲಪರಾಕ್ರಮ‌ ತಂತಮ್ಮ ಬಲಮಂ ಪೆಲಗಿಕ್ಕಿ ದಿವಿಜಬಲಮನೆಲ್ಲಂ ಗೆಲೆ ಕಾದುವುದಂ ಕಂಡು ಮೇಘಬಲಿಯುಂ ತಟತ್ತುಂಗನುಮದ್ರಿಯುಂ ಸಂಜ್ವಲ ನುಂ ಪಾವಕನುಂ ಮೊದಲಾಗೆ ಕಂ ॥ ಸುರಬಲದ ನಾಯಕರ್‌ ಸ೦ ಗರದೊಳ್‌, ರಾವಣನ ಬಲದ ನಾಯಕರಂ ಸಂ | ಹರಿಸಿ ಕೆಲರಂ ಕಪಿಧ್ವಜ ರರೆಬರ್ ಕಾಲಾಗ್ನಿ ರುದ್ರನಂತುರಿದೆದ್ದಿರ್ || ೨೦೧೧ ಅಲ್ಲಿ ಮಹೋಗ್ರನಂದನಂ ಪ್ರಸನ್ನ ಕೀರ್ತಿಯುಂ ಮಾಲ್ಯವಂತ ತನೂಭವಂ ಶ್ರೀಮಾಲಿಯುಮಡೆವೊಕ್ಕು ದಿವಿಜಬಲಮಂ ಹತ ವಿತತ ಕೋಲಾಹಲಮಂ ಮಾಡಿ