ಪುಟ:ಯಶೋಧರ ಚರಿತೆ.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೪

ಯಶೋಧರ ಚರಿತೆ



ಕಿತ್ತ ಕರವಾಳ್ಗ ಮೆನಗಂ
ಮೃತ್ಯುವಿನಂತಿರ್ದ ಮಾರಿಗಂ ಬೆದರದೆ ನಿಂ-
ದರ್ತಿಯನೆ ನುಡಿದರಿವರ ನೆ
ಗುಳ್ತೆ ಕರಂ ಪಿರಿದು ಧೀರರಕಟ ಕುಮಾರರ್ ೬೧

ಜವಳಿವೆರೆ ಮನುಜರೂಪದಿ-
ನವನಿಯೊಳೊಗೆದಂತೆ ಕಾಂತಿ ಮೆರೆದಪುದಿಂದಿಂ-
ತಿವರ್ಗಳಚೆಲ್ವಿಕೆ ಕಣ್ಗಳ
ತವರಾಜಮನಿಂದು ಕಂಡೆನೀ ಬಾಲಕರಂ ೬೨

ಆವ ಕುಲಮಾರ ತನಯರಿ
ದಾವೆಡೆಯಿಂ ಬಂದಿರೇಕೆ ಬಾಲ್ಯದೊಳೀ ಭಿ-
ಕ್ಷಾವೃತ್ತಿಯೆಂದು ಬೆಸಗೊಳೆ
ಭೂವರ ಕೇಳೆಂದು ಕುವರನಂದಿಂತೆಂದಂ ೬೩


ಪಾಲಿಸು!” ಎಂದು ಹರಸಿದನು. ೬೦. ಈ ಆಶೀರ್ವಚನವನ್ನು ಕೇಳುವುದೇ
ತಡ, ರಾಜನು ಕಡಿದಿಕ್ಕದೆ “ಇದೇನು! ಈ ಮೊದಲೆಲ್ಲ ಈ ದೇವಾಲಯದ
ಒಳಗೆ ಹೊಕ್ಕ ಎಲ್ಲರಿಗೂ ಜೀವವೇ ಹೋದಂತಾಗುತ್ತಿತ್ತು. ಈ ರೀತಿ
ಅಂಜದಿರುವವರನ್ನು ನಾನಿದುವರೆಗೂ ಕಂಡಿಲ್ಲ! ೬೧. ಹಿರಿದ ಖಡ್ಗಕ್ಕೂ,
ನಿಂತ ನನಗೂ, ಮೃತ್ಯು ಸ್ವರೂಪಿಯಾದ ಮಾರಿಗೂ ಒಂದಿಷ್ಟೂ ಹೆದರದೆ,
ಧೈಯ್ಯದಿಂದ ನಿಂತುಕೊಂಡು ಪ್ರೀತಿಯಮಾತನ್ನೇ ಇವರು ಆಡಿದ್ದಾರೆ. ಇವರ
ನಡತೆ ಬಹಳ ಹಿರಿದು! ನಿಜವಾಗಿಯೂ ಈ ಕುಮಾರರು ಧೀರರೇ ಸರಿ! ೬೨.
ಜೋಡಿ ಚಂದ್ರರು ಮನುಷ್ಯ ರೂಪವನ್ನು ಧರಿಸಿ ಈ ಭೂಲೋಕದಲ್ಲಿ
ಹುಟ್ಟಿಬಂದಂತೆ ಇವರ ಕಾಂತಿ ಮೆರೆಯುತ್ತಾ ಇದೆ. ನಿಜವಾಗಿಯೂ ಇವರ
ಸೌಂದರ್ಯವು ಕಣ್ಣಿಗೆ ತವರಾಜದಂತೆ ಮಧುರವಾಗಿದೆ. ಈ ಬಾಲಕರನ್ನು
ಇಂದು ನಾನು ಕಂಡೆನು. ೬೩. ಮಕ್ಕಳೇ, ನಿಮ್ಮ ಕುಲವಾವುದು? ಯಾರ
ಮಕ್ಕಳು ನೀವು ? ಎಲ್ಲಿಂದ ಬಂದಿರಿ? ಈ ಎಳೆಯ ವಯಸ್ಸಿನಲ್ಲಿ ಈ ಭಿಕ್ಷಾ
ವೃತ್ತಿಯನ್ನು ಕೈಕೊಂಡುದೇಕೆ ?” ಎಂದು ಮಾರಿದತ್ತನು ಕೇಳಿದನು.