ಪುಟ:ಯಶೋಧರ ಚರಿತೆ.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೬೫


ಗೋದಾಮೆಗಂಡ ನವಿಲಂ
ತಾದುದು ಕಾರ್ಗಂಡ ಹಂಸನವೊಲಾದುದಲರ್‌
ವೋದ ಲತೆಗಂಡ ವಿರಹಿವೊ
ಲಾದುದು ದುರ್ನಯದ ಕಾಣ್ಕೆಗೆನ್ನಯ ಚಿತ್ತಂ೧೦


ವನಿತೆಯ ಕೇಡಂ ಜನಪತಿ
ಕನಸಿನ ನೆವದಿಂದೆ ಮರಸೆ ತಲ್ಲಣದಿಂ ತಾಯ್‌
ನೆನೆದಳ್‌ ಪೊಲ್ಲಮೆಯಂ ವಂ
ಚನೆಯೆಲ್ಲಿಯುಮೊಳ್ಪು ಮಾಡಲಾರದು ಕಡೆಯೊಳ್‌೧೧


ಅಡಸಿದ ನಲ್ಲಳ ತಪ್ಪಂ
ತಡವಿಕ್ಕಿದೊಡೇಳು ಭವದ ಕೇಡಡಸುವ ಕಿಳ್
ನುಡಿಯಂ ನುಡಿದಳ್‌ ತಾಯೊಂ
ದಡಸಿದೊಡೇಳಡಸಿತೆಂಬ ನುಡಿ ತಪ್ಪುಗುಮೇ೧೨


ವಿಹರಿಸುವುದನ್ನು ಕಂಡೆ. ೧೦. ಇಂತಹ ಹೊಲಸಿನ ಘಟನೆಯನ್ನು ಕಂಡ
ಬಳಿಕ ನನ್ನ ಮನಸ್ಸು ಗೋದಾಮೆಯನ್ನು ಕಂಡ ನವಿಲಿನಂತೆ ಆಯಿತು,೪೬
ಮಳೆಗಾಲವನ್ನು ಕಂಡ ಹಂಸದಂತೆ ತಳಮಳಿಸಿತು. ಮಾತ್ರವಲ್ಲ, ಹೂಬಿಟ್ಟ
ಲತೆಗಳನ್ನು ಕಂಡ ವಿರಹಿಯಂತೆ ಸಂತಾಪಗೊಮಡಿತು.೪೭ ೧೧. ಕೈಹಿಡಿದವಳ
ದುರ್ವರ್ತನೆಯನ್ನು ನೇರಾಗಿ ಹೇಳದೆ ಯಶೋಧರನು ಅದಕ್ಕೆ ಕನಸಿನ ರೂಪವನ್ನು
ಕೊಟ್ಟು ಹೇಳಿದನು. ಅದನ್ನು ಕೇಳಿದಾಗ ಚಂದ್ರಮತಿಗೆ ತಲ್ಲಣವಾಯಿತು. ಅವಳು
ಅದರಿಂದ ಕೆಟ್ಟದ್ದನ್ನೇ ನಿರೀಕ್ಷಿಸುವ೦ತಾಯಿತು. ವಂಚನೆಯಿಂದ ಎಲ್ಲಿಯಾದರೂ
ಯಾವಾಗಲಾದರೂ ಕಡೆಗಾದರೂ ಒಳ್ಳೆಯದಾದೀತೆ? ೧೨. ತನ್ನ
ನಲ್ಲೆಯೆನ್ನಿಸಿದವಳ ತಪ್ಪನ್ನು ಅವನು ಮರೆಮಾಡಿ ತಡೆದಿಟ್ಟನು. ಇದರ
ಪರಿಣಾಮವಾಗಿ ಅವನ ತಾಯಿ ಮುಂದೆ ಏಳೇಳು ಜನ್ಮಗಳ ಪರಿಯಂತವೂ
ಕೆಡಕಾಗುವ ಕೆಟ್ಟ ಮಾತನ್ನೇ ಹೇಳಿದಳು. ಒಂದು ಸೇರಿದರೆ ಏಳು ಸೇರಿಕೊಳ್ಳುತ್ತದೆ