೧೦೮
ಮತ್ತವಾರಣಂಗಳೊಳಮಲ್ಲಿಂ ಪೊರಗೆ ಶೋಣ ಮಣಿ ಕಳಶ ಕರ ಕಿಸಲಯ೦ಗಳಾ
ನಭಶ್ಶ್ರೀಯ ನಾಲಿಂಗಿಸುವ ಬಾಗಿಲ್ವಾಡಂಗಳೊಳಮವರ ಮುಂದೆ ಸಂದಣಿಸಿದ
ಮರಕತ ಮಕರ ತೋರಣಂಗಳೊಳತಿ ರಮಣೀಯಮಾಗಿ--
ಮ||ದಿವಿಜೋರ್ವೀರುಹಮಿತ್ತ ದೇವರ ಮನೋವ್ಯಾಪರದಿಂದಾದ ದೇ|
ವ ವಿಮಾನ೦ಗಳಿವ೦ಬಲಭೇದದೊಳೆ ಭೇದಂ ಮಾಟ ಕೂಟಂಗಳಿ೦||
ನವರತ್ನೋಪಲ ಕರ್ಮದಿಂ ಮಣಿವಿತಾನಶ್ರೇಣಿಯಿಂ ಭೇದಮೆ೦|
ಬವರಾರೆಂಬಿನೆಗಂ ಸ್ವಯಂವರಗೃಹಂ ಕಣ್ಗೀಂ ಬೆಡಂಗಾದುದೋ||೩೫||
ಆ ಸ್ವಯಂವರವಿಹಾರಕ್ಕೆ ಜನಕಂ ಪ್ರಧಾನ ಪುರುಷ ಪುರಸ್ಸರಂ--
ಕಂ||ಪುರುವಂಶದ ಕುರುವಂಶದ
ಹರಿವಂಶದ ನಾಥನಂಶ ದುಗ್ರಾನ್ವಯದು||
ರ್ವರೆಯೊಡೆಯರಾದಿಯಾಗಿರೆ
ನರನಾಥ ಸುತರ್ಕಳೆನಿಬರಾನುಂ ಬಂದರ್||೩೬||
ನಾನಾ ವಾಹನಮುಂ ನಾ
ನಾನಕಮುಂ ವಂಶ ವಿಧೃತ ನಾನಾ ಧ್ವಜ ಸಂ||
ತಾನಮುಮೆಸೆದಿರೆ ಬಂದರ್
ನಾನಾ ದೇಶಾಧಿನಾಥ ನಂದನರನಿಬರ್||೩೭||
ಆ ಸಮಯದೊಳ್ ದಶರಥಂ ರಾಮ ಲಕ್ಷ್ಮಣ ಭರತ ಶತ್ರುಘ್ನರ್ವೆರಸು ಬಂ
ದೊ೦ದು ಪಳಿಕಿನ ಚೌಪಳಿಗೆಯೊಳ್ ರತ್ನಮುದ್ರಿಕೆಯ ಮಧ್ಯ ನಾಯಕ ರತ್ನದಂತಿ
ರ್ಪುದುಂ--
ಚ||ಶರನಿಧಿ ರತ್ನರಾಶಿಗಳಿನುರ್ವರೆ ರೋಹಣ ಪರ್ವತಂಗಳಿಂ।
ಸುರಗಿರಿ ಸಾನು ಕಲ್ಪಕುಜದಿಂ ಗಗನಸ್ಥಳಿ ತಳ್ತಿ ತಾರಕಾ||
ಪರಿಕರದಿಂ ಸರೋಜಿನಿ ಮರಾಳದಿನೊಪ್ಪುವ ಮಾಳ್ಕೆಯಿಂ ಸ್ವಯಂ|
ವರ ಗೃಹಮೊಪ್ಪಮಂ ತಳೆದುದೊಪ್ಪುವ ರಾಜ ತನೂಜ ರಾಜಿಯಿಂ||೩೮||
ಅನ್ನೆಗಮಿತ್ತಲ್--
ಚ||ಮಳಯಜ ಮಿಶ್ರ ತೀರ್ಥ ಜಲ ಧಾರೆಗಳಿಂ ಶಶಿ ಕಾಂತ ಕಾಂತಮಂ|
ಗಳ ಕಲಶಾಂಶು ಧಾರೆಗಳಿನಿರ್ಮಡಿಸಿತ್ತು ವಿವಾಹ ಮುಖ್ಯ ಮಂ ||