ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಂಥದಲ್ಲಿ ಮಾತ್ರ ಪುರುಷಮೃಗವೆಂದು ದೀರ್ಘರಹಿತವಾಗಿ ಪ್ರಯೋಗಿ ಸಲ್ಪಟ್ಟಿರುವುದು. ಪ್ರಡಕ್ಷರಿದೇವಕೃತ ರಾಜಶೇಖರಗ್ರಂಥದ ಪ್ರಥಮಾ ಶ್ವಾಸದ 135 ನೆಯ ಗದ್ಯದಲ್ಲಿ “ ಪರಿವ ಪುರುಷಾಮೃಗಗಳಿಂ” ಎಂದು ಪರ್ವತವರ್ಣನಪ್ರಸ್ತಾವದಲ್ಲಿ, ಮಹಾಭಾರತದಲ್ಲಿಯೂ ಇತರ ಕನ್ನಡ ಗ್ರಂಥಗಳಲ್ಲಿಯೂ ( ಪುರುಷಾಮೃಗ ” ಎಂತ ದೀರ್ಘಸಹಿತವಾಗಿಯೂ ಪ್ರಯುಕ್ತವಾಗಿದೆ. ಪುರುಷಮೃಗವೆಂದರೂ ಪುರುಷಾಮೃಗವೆಂದರೂ ಅರ್ಥಭೇದವಿರುವುದಿಲ್ಲ. ಪುರುಸಮೃಗವೆಂದರೆ ಪುರುಷಾಕಾರವೂ ಮೃಗಾಕಾರವೂ ಉಳ್ಳದ್ದೆಂತ ಅರ್ಥ. ಪುರುಷಾಮೃಗವೆಂಬುದರಲ್ಲಿ ಪುರುಷಪದವೂ ಆಮೃಗಪದವೂ ಸೇರಿ ಇದೆ. ಆಮ್ಮಗ ಎಂಬುದಕ್ಕೆ ಸ್ಪಲ್ಪ ಮೃಗಾಕಾರವುಳ್ಳದ್ದೆಂತ ಅರ್ಥ. ಆದುದರಿಂದ ವಿರೋಧವಿರುವುದಿಲ್ಲ. ಈ ಪುಸ್ತಕದಲ್ಲಿ ಪ್ರಚುರಿಸಿರುವ ಪಾಠಗಳು ಪ್ರಾಯಿಕವಾಗಿ ಇದುವರೆಗೂ ಮುದ್ರಿತವಾಗಿರುವ ಪುಸ್ತಕಗಳಿಗೆ ಅನುಸಾರವಾಗಿಯೇ ಇರುತ್ತವೆ. ಈ ಸಂಚಿಕೆಯ ಶೋಧನಕ್ಕಾಗಿ ಉಪಯೋಗಿಸಿರುವ ಪುಸ್ತಕ ಗಳು ಕನ್ನಡ ಸೆಕ್ರ್ಸ ನಂಬರು ೪ ನೆಯದಾದ ಎರಡನೆಯ ಸಂಪುಟಕ್ಕೆ ಉಪಯೋಗಿಸಿದವುಗಳಾಗಿಯೇ ಇರುತ್ತವೆ. ನಮ್ಮಿಂದ ಸಾಧ್ಯವಾದವರೆಗೂ ಬಹುಪುಸ್ತಕಗಳ ಸಹಾಯದಿಂದ ಶೋಧನಕಾರ್ಯವು ನಡೆಸಲ್ಪಟ್ಟಿದೆ. ಪ್ರಾಮಾದಿಕದೋಷಗಳೇನಾದರೂ ಇದ್ದರೆ ಸಜ್ಜನರು ಗುಳ್ಳೆಕದೃಷ್ಟಿಗಳಾಗಿ ಅವುಗಳನ್ನು ಲಕ್ಷಕ್ಕೆ ತಾರದೆ, ಸಂತೋಷಪಡುವರೆಂದು ನಂಬಲ್ಪಟ್ಟಿದೆ. S - ಟ