ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚತುರ್ಥಾಶ್ವಾಸಂ

೭೭

      ದರಿ ನಡೆನೋಡೆ ಕಂತು ನಡೆ ಪೂಡಿದ ಪೂಗಣೆಗೆತ್ತು ನಾಡೆ ಕಾ|
      ತರತೆಯನಪ್ಪುಕೆಯ್ಯೆ ಬಗೆ ನೋಡಿದನಾಕೆಯನಾ ಕುಮಾರಕಂ|| ೧೦ ||

      ಅಂತಾತಂ ಕಣ್ಸೋಲ್ತುನೋಡಿ ದೂದವಿಯನಟ್ಟುವುದುಂ--

ಚ || ಬಗೆಯದೆ ತನ್ನ ಮುನ್ನಿನೊಲವಂ ನೆಲೆಯಿಂದೊಡಗೂಡಿ ಬಂದುದಂ।
      ಬಗೆಯದೆ ಪಾಳಿಯಂ ಪಸುಗೆಯಂ ಗುಣಹಾನಿಯನಪ್ರಸಿದ್ದಿಯ೦||
      ಬಗೆಯದೆ ಬಂದ ದೂದವಿಗೆ ಚಿತ್ರಮನೊಪ್ಪಿಸಿ ಕೂಟದಾಸೆಯಂ|
      ಬಗೆದಳಿದಾವ ವಿಸ್ಮಯವೊ ನಾರಿಗೆ ನಚ್ಚಿನ ಕೆಯ್ದ ಕೈತವಂ || ೧೧ ||

      ಅಂತಾಕೆಯನಾ ಕುಮಾರಂ ಬರಿಸಿ ತನಗರಸಿಮಾಡಿ ಕಪಿಳನಂ ಮರುಳ್ಮಾಡಿ
ಕಳೆವುದುಮಾತನದುವೆ ನಿರ್ವೇಗಕಾರಣಮಾಗೆ ಕೆಲವುಕಾಲದಿನಾರ್ಯಗುಪ್ತರೆಂಬಾ
ಚಾರ್ಯರ ಸಮಕ್ಷದೊಳ್ ಬಾಹ್ಯತಪೋರೂಪಮಂ ತಳೆದು--

      ಕಂ || ಆ ಸುದತಿ ನೆಲಸೆ ಚಿತ್ರ ನಿ
             ವಾಸದೊಳಾ ಕಪಿಳಮುನಿ ತಪಶ್ಯ್ರೀ ತನುವಂ||
             ಬಾಸಣಿಸೆ ತೇದು ಪೊನ್ನಂ
             ಪೂಸಿದ ಕರ್ಬೊನ್ನ ಪಾಪೆಯಂತೆವೊಲಿರ್ದಂ||೧೨||

             ಒಪ್ಪಿಸಿ ಮನಮಂ ಮಾನಿನಿ
             ಗೊಪ್ಪಿಸಿ ತನುವಂ ತಪಕ್ಕೆ ಮುನಿ ಮನಸಿಜನಿ೦||
             ಸೊಪ್ಪಾಗಿರ್ದೊರ್ಚವಡಿಯ
             ಕುಪ್ಪಸಮಂ ಪೋಲ್ತು ಪೊರಗೆ ನೇರಿದನಾದ೦||||೧೩||

             ಮುನಿ ನಡೆದಾ ತಪದೊಳ್ ಜೀ
             ವನಮಂ ತವೆ ಪೀರ್ದು ದೇ ವಗತಿ ಸಮನಿಸೆ ಮು||
             ನ್ನಿನ ಪಗೆಯಂ ಕುಂಡಲನಂ
             ನೆನೆದವಧಿಯಿನಳವಿಗಳಿದ ಮುಳಿಸಂ ತಳೆದಂ||೧೪||

       ಆತ೦ ನಿಜವಿರೋಧಿಯಪ್ಪ ಕುಂಡಲಮಂಡಿತಂ ಪೆರತೊಂದು ಹೆಣ್ಗೂಸುವೆರಸು ವಿದೇಹಿಯ ಗರ್ಭದೊಳ್ ಬಳೆವುದಂ ತಿಳಿದು---


1.ತೆಗೆದು, ಕ, ಖ, ಗ, ಘ.