ಪುಟ:ಕಥಾಸಂಗ್ರಹ ಸಂಪುಟ ೨.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ಕಥಾಸಂಗ್ರಹ-೪ ನೆಯ ಭಾಗ ಇತ್ಯಲಾ ರಾವಣನು ಒಂದು ದಿವಸ ಪರಿವಾರಪರಿವೃತನಾಗಿ ತನ್ನ ಓಲಗದ ಚಾವಡಿಯಲ್ಲಿ ಕುಳಿತುಕೊಂಡು ಇಂದ್ರಾದಿ ದಿಗೀಶರನ್ನೂ ದೈತ್ಯ ದಾನವಾದಿಗಳನ್ನೂ ಜಯಿಸಿದೆನೆಂಬ ಗರ್ವಾತಿಶಯದಿಂದ ಮದಿಸಿದವನಾಗಿ ಮಾರೀಚಪ್ರಹಸ್ತರೇ ಮೊದ ಲಾದ ತನ್ನ ಮಂತ್ರಿಗಳನ್ನು ನೋಡಿ ನಾವು ಇನ್ನಾರನ್ನು ಜಯಿಸಬೇಕು ? ತ್ರಿಮ ರ್ತಿಗಳಲ್ಲಿ ಒಬ್ಬನಾದ ಬ್ರಹ್ಮದೇವನು ನನಗೆ ಮುತ್ತಜ್ಞನು, ಕೈಲಾಸಗಿರಿಯನ್ನು ಕಿತ್ತು ಅಲ್ಲಾಡಿಸಲು ಶಿವನು ನನ್ನ ಪರಾಕ್ರಮಕ್ಕೆ ಮೆಚ್ಚಿ ಚಂದ್ರಹಾಸವೆಂಬ ಕತ್ತಿ ಯನ್ನಿತ್ತು ಸಂತೋಷಪಡಿಸಿದನು. ವಿಷ್ಣು ಒಬ್ಬನು ಮಾತ್ರ ಉಳಿದಿರುವನು. ಆತನು ಪಾಲ್ಗಡಲಲ್ಲಿ ಮಲಗಿದ್ದಾನಂತೆ. ಅಲ್ಲಿಗೆ ಹೋಗಿ ಆತನೊಬ್ಬನನ್ನೂ ಜಯಿಸಿಬಿಟ್ಟರೆ ಈರೇಳು ಲೋಕಗಳಲ್ಲೂ ನನ್ನೆ ದುರಿಗೆ ನಿಲ್ಲುವವರು ಯಾರೂ ಇಲ್ಲವೆಂದು ಹೇಳು ತಿರಲು ಆಗ ಸಭಾಸೀನನಾಗಿದ್ದ ವಿಭೀಷಣನು ರಾವಣನನ್ನು ಕುರಿತು-ಎಲ್ಲೆ ರಾಕ್ಷಸರಾಜನೇ ! ಲೋಕದಲ್ಲಿ ಶೂರರಿಲ್ಲವೆಂದು ಹೇಳಕೂಡದು. ಪ್ರಪಂಚದಲ್ಲಿ ಒಬ್ಬ ನಿಗಿಂತ ಇನ್ನೊಬ್ಬನು ಬಲಶಾಲಿಯು ಇದ್ದೇ ಇರುತ್ತಾನೆ ಸಹಸ್ರಬಾಹುಗಳನ್ನು ಧರಿಸಿ ಮಹಾವೀರನಾಗಿ ಚಕ್ರವರ್ತಿಯೆನ್ನಿಸಿಕೊಂಡು ಮಾಹಿಷ್ಮತೀ ನಗರಾಧೀಶ್ವರ ನಾದ ಕಾರ್ತವೀರ್ಯಾರ್ಜುನನು ಸಾಮಾನ್ಯನೇ ? ಜಗದೇಕ ವೀರನಲ್ಲವೇ ? ಮತ್ತು ದೇವೇಂದ್ರನ ಮಗನಾದ ವಾಲಿಯೆಂಬವನು ವಾನರಾಧೀಶ್ವರನಾಗಿ ಕಿಪ್ರಿಂಧಾಪವ್ರ ಣದಲ್ಲಿ ವಾಸಿಸುತ್ತಿರುವನು. ಆತನು ದುಂದುಭಿ ಮಾಯಾವಿಗಳೆಂಬ ಅಪರಿಮಿತ ಬಲಪರಾಕ್ರಮಶಾಲಿಗಳನ್ನು ಲೀಲಾಮಾತ್ರದಿಂದ ಜಯಿಸಿದಂಥ ಮಹಾವೀರಾಗ್ರೇ ಸರನು. ಆತನೇನು ಸಾಧಾರಣನೇ ? ಅಪ್ರತಿಮ ಮಲ್ಲನಲ್ಲವೇ ? ಎಂದು ಹೇಳಲು ಆಗ ರಾವಣನು-ಮೊದಲು ಅವರಿಬ್ಬರನ್ನೂ ಜಯಿಸಬೇಕೆಂದು ಮಾರೀಚ ಪ್ರಹ ಸಾದಿ ಮಂತ್ರಿಗಳೊಡನೆ ಕೂಡಿ ಮಾಹಿಷ್ಕ ತೀ ನಗರ ಸಮೂಾಸಕ್ಕೆ ಹೋಗಿ ಆ ರಾಜ ಧಾನಿಯ ಹೊರಗಣ ಉದ್ಯಾನವನದಲ್ಲಿ ಪಾಳೆಯವನ್ನು ಬಿಡಿಸಿಕೊಂಡು ತನ್ನ ದೂತ ನನ್ನು ಕರೆದು-ನೀನು ಕಾರ್ತವೀರ್ಯಾರ್ಜುನನ ಬಳಿಗೆ ಹೋಗಿ ನಾವು ಬಂದಿರುವ ವರ್ತಮಾನವನ್ನು ತಿಳಿಸೆಂದು ಹೇಳಿ ಕಳುಹಿಸಲು ಆ ದೂತನು ಬಂದು ಕಾರ್ತವೀ ರ್ಯಾರ್ಜುನನ ಮಂತ್ರಿಯನ್ನು ಕಂಡು ಆತನೊಡನೆ ಅಯಾ ಮ೦ತ್ರಿಯೇ !ನಮ್ಮೊ ಡೆಯನಾದ ದಶಕಂಧರನು ನಿನ್ನೊಡೆಯನಾದ ಕಾರ್ತವೀರ್ಯಾರ್ಜುನನನ್ನು ಯುದ್ದ ಕೈ ಕರೆದು ಕೊಂಡು ಬರಬೇಕೆಂದು ನನ್ನನ್ನು ಇಲ್ಲಿಗೆ ಕಳುಹಿಸಿದನೆಂದು ಹೇಳಲು ಆಗ ಆ ಮಂತ್ರಿಯು ರಾವಣಸಂದೇಶಹಾರಿಯೊಡನೆ ನಮ್ಮ ರಾಜನು ಅಂತಃಪುರ ಕಾಂತಾ ಜನದೊಡನೆ ಕೂಡಿ ಜಲಕ್ರೀಡೆಗಾಗಿ ನರ್ಮದಾನದಿಗೆ ಹೋಗಿದ್ದಾನೆ. ಇನ್ನು ಒಂದೆ ರಡು ಗಳಿಗೆಗಳೊಳಗಾಗಿ ಇಲ್ಲಿಗೆ ಬರುವನೆನಲು ಆ ಮಾತುಗಳನ್ನು ಕೇಳಿದ ದೂತನು ಅಲ್ಲಿಂದ ಹಿಂದಿರುಗಿ ಬಂದು ಆ ಸಂಗತಿಯನ್ನೆಲ್ಲಾ ರಾವಣನಿಗೆ ತಿಳಿಸಲು ಆಗ ರಾವಣನು ಅಷ್ಟು ಹೊತ್ತಿನವರೆಗೂ ಸಾವಕಾಶ ಮಾಡುವುದರಿಂದ ಪ್ರಯೋಜನ ವೇನು ? ನಾನೇ ಅಲ್ಲಿಗೆ ಶೀಘ್ರವಾಗಿ ಹೋಗುವೆನೆಂದು ಹೊರಟು ನರ್ಮದಾನದಿ ಯನ್ನು ಹುಡುಕುತ್ತ ಅಗಮ್ಯವಾದ ವಿಂಧ್ಯಾರಣ್ಯ ಮಾರ್ಗವಾಗಿ ಬರುತ್ತಿರಲು ಆಗ