ಅನ್ಯಾಯವನ್ನು ಸೈರಿಸಿ ರಾಜ್ಯವನ್ನು ಕೈಕೊಳ್ಳಬೇಕೆಂದು ಕೇಳಿಕೊಂಡಳು. ಇದಕ್ಕೆ ರಾಮನು ಕೈ ಮುಗಿದುಕೊಂಡು " ತಾಯೇ! ಅಕಳಂಕ ಚರಿತ್ರನಾದ ಅಯನ ನನ್ನಿಗೆ ಕುಂದನ್ನುಂಟುಮಾಡಿ ರಾಜ್ಯವನ್ನು ನಾನು ಪಡೆದರೆ ನನ್ನ ಮಾತು ಹುಸಿಯಾಗು ವುದು : ಸುಳಿಗಿಂತಲೂ ಹೆಚಾದ ಪಾತಕವಿ: ಆದುದರಿಂದ ತಾವು ಮರು ಮಾತಾಡದಿರಿ” ಎಂದು ಹೇಳಿ, ಭರತನು ತನ್ನ ಮಾತಿಗೆ ಪ್ರತಿಯಾಡಿದರೆ ತನ್ನ ಆಜ್ಞೆಗೆ ಮಾರಿದವನಾಗುವನೆ೦ದು ನಿಲೆನುಡಿದನು. ಇದಕ್ಕೆ ಭರತನು ರಾಮನ ಆಣ್ಣಿಗೆ ಕಟ್ಟು ಬಿದ್ದು, ಆತನು ಹಿಂದಿರುಗಿ ಬರುವವರೆಗೂ ತಾನು ರಾಜ್ಯವನ್ನು ಪರಿಪಾಲಿಸುವೆನೆಂದೂ ತನ್ನ ಮನಸ್ಸಾಕ್ಷಿಯಾಗಿಯೂ ರಾಜ್ಯವನ್ನಪೇಕ್ಷಿಸುವವನಲ್ಲ ವೆಂದೂ ಹೇಳಿದನು. ರಾಮನು ಭರತನನ್ನೂ ತಾಯಿಯನ್ನೂ ತಕ್ಕಂತೆ ಮನ್ನಿಸಿ ಅಯೋಧ್ಯೆಗೆ ಕಳುಹಿಸಿ ಸೀತೆಯೊಡನೆ ತಾನೂ ಲಕ್ಷ್ಮಣನೂ ಮುಂದಕ್ಕೆ ತೆರಳಿದರು.
ಸೀತೆಯು ದಾರಿಯಲ್ಲಿ ಕಲ್ಲು ಮುಳ್ಳುಗಳನ್ನು ತುಳಿದರೂ ಬಿಸಿಲಿನ ಬೇಗೆಯಲ್ಲಿ ಬಳಲಿದರೂ ಪತಿಯು ತನ್ನೊಡನೆ ಇರುವನಲ್ಲಾ ಎಂಬ ಸಂತೋಷದಿಂದ ಆ ಬಾಧೆಗಳನ್ನು ಲಕ್ಷ್ಯಮಾಡದೆ ನಡೆದಳು. ಅವರು ಅನೇಕ ದೇಶಗಳನ್ನೂ ಗ್ರಾಮಗಳನ್ನೂ ದಾಟಿ ಚಿತ್ರಕೂಟ ಪರ್ವತವನ್ನು ಬಲಕ್ಕೆ ಬಿಟ್ಟು ಅವಂತೀದೇಶ ದಲ್ಲಿ ಬರುತ್ತ ಒಂದು ಆಲದ ಮರದ ಕೆಳಗೆ ವಿಶ್ರಮಿಸಿಕೊಂಡು ಸುತ್ತಲೂ ನೋಡುವಲ್ಲಿ, ಹಣ್ಣುಗಳ ಭಾರದಿಂದ ಜಗ್ಗುತ್ತಿರುವ ಫಲವೃಕ್ಷಗಳುಳ್ಳ ತೋಟ ಗಳು ಕಾಯುವವರಾರೂ ಇಲ್ಲದೆ ಆ ಪ್ರಾಂತವೆಲ್ಲ ನಿರ್ಜನಪ್ರದೇಶವಾಗಿರು ವಂತೆ ಕಂಡುಬಂದಿತು. ದಾರಿಹೋಕನೊಬ್ಬನು ಬಂದು ರಾಮಲಕ್ಷ್ಮಣರಿ ಗೆರಗಿ ಭಯಪಟ್ಟು ನಿ೦ತಿರಲು, ಲಕ್ಷಣನು ಅ೦ಜದಿರೆಂದು ಹೇಳಿ ಆ ನಾಡು ಏಕೆ ಪಾಳಾಯಿತೆಂದು ಅವನನ್ನು ಕೇಳಿದನು. ಅದಕ್ಕವನು ಕೈ ಮುಗಿದುಕೊಂಡು “ ಮಹಾಸ್ವಾಮಿ! ಇದು ಅವಂತೀದೇಶವು ; ಇದರಲ್ಲಿಯ ಉಜ್ಜಯಿನಿಯೆಂಬ ಪಟ್ಟಣವನ್ನಾಳುವ ಸಿ೦ಹೋದರನೆಂಬ ಪರಾಕ್ರಮಶಾಲಿಯು, ತನ್ನ ಸಾಮಂತ ನಾದ ವಜ್ರ ಕರ್ಣನು ಸಕಲಜ್ಞನಿಗಲ್ಲದೆ ಮತ್ತಾರಿಗೂ ಕೈಮುಗಿ ಯೆನೆಂಬ ಪ್ರತಿಜ್ಞೆ ಯಿಂದ ತನಗೆ ಸುಳ್ಳು ಮರ್ಯಾದೆಯನ್ನು ಮಾಡುತ್ತಿರುವುದನ್ನು ಕರ್ಣಪರಂಪರೆ ಯಾಗಿ ಕೇಳಿ ಮುನಿದು, ಅವನಿದ್ದ ಪಟ್ಟಣಕ್ಕೆ ಮುತ್ತಿಗೆ ಹಾಕಿದನು. ಅವನ ಭಯ ಕಾಗಿ ಈ ದೇಶವೆಲ್ಲವೂ ಹಾಳಾಗಿ ಹೋಯಿತು. ವಜ್ರ ಕರ್ಣನಿರುವ ದಶ ಪುರವು ಇಲ್ಲಿಗೆ ಸಮೀಪದಲ್ಲಿಯೇ ಇರುವುದು” ಎಂದು ಹೇಳಿ ಅಪ್ಪಣೆ ಪಡೆದು ಹೊರಟು ಹೋದನು. ರಾಮಲಕ್ಷ್ಮಣರು ವಜ್ರ ಕರ್ಣನ ಭಕ್ತಿಗೆ ಮೆಚ್ಚಿ ದುರ್ಮತಿ ಯಾದ ಸಿ೦ಹೋದರನನ್ನು ದಂಡಿಸುವುದು ತಮ್ಮ ಕರ್ತವ್ಯವೆಂದಾಲೋಚಿಸಿ ದಶ ಪುರವನ್ನು ಸೇರಿದರು. ವಜ್ರ ಕರ್ಣನು ಇವರನ್ನು ತನ್ನ ಅರಮನೆಯಿಂದ ನೋಡಿ ಇವರು ಕಾರಣಪುರುಷರೆಂದರಿತು ಬಲನಾರಾಯಣರೇ ಇರಬೇಕೆಂದು
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೧
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಪಂಪರಾಮಾಯಣದ ಕಥೆ
15