ಪುಟ:Abhaya.pdf/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೮

ಅಭಯ

ಅಧ್ಯಾಪಕರಾದ ತಮಗೆ ಅವಮಾನವೆಂಬಂತೆ ತುಂಗಮ್ಮನ ತಂದೆ ಗಂಟಲು ಸರಿಪಡಿಸಿಕೊಂಡು ಮಾತಿಗೆ ಹಾದಿಮಾಡಿಕೊಟ್ಟರು

" ಅಮ್ಮ, ತಾವು ನನ್ನ ಮಗಳಿಗೆ ರಕ್ಷಣೆಕೊಟ್ಟು ದೊಡ್ಡ ಉಪಕಾರ ಮಾಡಿದೀರಿ. ಆ ಋಣ ಈ ಜನ್ಮದಲ್ಲಿ ತೀರಿಸೋದು ಸಾಧ್ಯವಿಲ್ಲ..."

ಸರಸಮ್ಮ ತಮ್ಮ ಮಂಚದಮೇಲೆ ಕುಳಿತುಕೊಂಡರು.

"ಅಯ್ಯೋ, ಅದೆಂಥ ಉಪಕಾರನಾರ್‌. ಏನೋ ಕರ್ತವ್ಯ ಅಂತ ಕೈಲಾದ್ದು ಮಾಡ್ತೀವಿ.

ಹೊರಡುವ ಹೊತ್ತಿಗೆ ಅಭಯಧಾಮದ ಸುಖದುಃಖ ವಿಚಾರಿಸು ತಿದ್ದಾರೆ, ಎಂದುಕೊಂಡರು ಸರಸಮ್ಮ, ಅಭಯಧಾಮದ ಈವರೆಗಿನ ಸೇವೆ- ಸಾಧನೆಗಳ ವರದಿಕೊಡಲು ಅವರು ಸಿದ್ಧರಾದರು

ಆದರೆ ತುಂಗಮ್ಮನ ತಂದೆಗೆ ಅದು ಬೇಕಾಗಿರಲಿಲ್ಲ. ಫಿರಾಶೆಯ ಧ್ವನಿಯಲ್ಲಿ ಅವರು ಹೇಳಿದರು:

" ನನ್ನ ಮಗಳು, ಬರೋದಿಲ್ಲ - ಇಲ್ಲೇ ಇರ್‍ತೀನಿ, ಅಂತಾಳೆ."

ಸರಸಮ್ಮನಿಗೆ ಅಶ್ಚರ್ಯವಾಯಿತು, ಸಂತೋಷವಾಯಿತು. ಆದರೂ, ಮೊದಲ ಭಾವವನ್ನಪ್ಟೆ ತೋರ್ಪಡಿಸುತ್ತ ಅವರೆಂದರು:

" ಹೌದೇ ತುಂಗ? ನನಗೆ ಹೇಳ್ಲೇ ಇಲ್ವೆ!"

ಮಗಳ ನಿರ್ಧಾರಕ್ಕೆ ಅ ಸರಸಮ್ಮನೇ ಕಾರಣವಿರಬೇಕೆಂದು ಭಾವಿಸಿದ್ದ ತಂದೆ, ಸೂಕ್ಷ್ಮವಾಗಿ ಆ ಮುಖವನ್ನು ವರೀಕ್ಷಿಸಿ ನೋಡಿದರು, ಮಾತುಗಳನ್ನು ತೂಗಿ ನೋಡಿದರು. ಅಲ್ಲಿ ಕೃತ್ರಿಮತೆ ಇರಲಿಲ್ಲ, ಪ್ರಾಮಾಣಿ ಕತೆ ಇತ್ತು.

ತುಂಗಮ್ಮ ಮಾತನಾಡಲಿಲ್ಲ. ಸರಸಮ್ಮ ಮತ್ತೂ ಕೇಳಿದರು:

" ಏನಮ್ಮ ತುಂಗ? ಏನಿದೆ ನಿನ್ನ ಮನಸ್ಸಲ್ಲಿ? ಯಾಕೆ ಹೋಗೊಲ್ಲ ಅಂತಿಯಾ ಊರಿಗೆ?"

" ನನಗೆ ಇಷ್ಟವಿಲ್ಲ ದೊಡ್ಡಮ್ಮ, ನಾನು ಇಲ್ಲೇ ಇರ್‍ತೀನಿ, ಓದ್ತೀನಿ, ಏನಾದರೂ ಕೆಲಸ ಮಾಡ್ತಿನಿ....ವಾಪಸು ಹೋಗೊಲ್ಲ ದೊಡ್ಡಮ್ಮ ."

ತನ್ನನ್ನು ಯಾರೂ ತಪ್ಪು ತಿಳಿಯಬಾರದು, ತಾನೇ ಸರಿ, ಯಾರೂ

ವಿರೋಧಿಸಬಾರದು - ಎಂಬ ಆಗ್ರಹವಿತ್ತು ಆ ಧ್ವನಿಯಲ್ಲಿ.