ಪುಟ:Mysore-University-Encyclopaedia-Vol-1-Part-1.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಷದ್ರವವು ಕಡಿಮೆ ಒತ್ತಡವಿರುವ ಸ್ಥಳಗಳಿಗೆ ಚಲಿಸಿ ಹೊಸ ಸನ್ನಿವೇಶದಲ್ಲಿ ಸ್ಫಟಿಕೀಕರಣ ಮುಂದುವರೆಯುತ್ತದೆ. ಈ ರೀತಿಯು ವಿಭೇದೀಕರಣವನ್ನು ಶೋಧಕ ವಿಭೇದೀಕರಣ ಎಂದು ಕರೆಯುತ್ತಾರೆ. ಮಾತೃಶಿಲಾದ್ರವ ವಿಕಾಸಕ್ಕೆ ಶಿಲಾಭಕ್ಷಣವು ಒಂದು ಮೂಲ. ಶಿಲಾದ್ರವವು ನಾಡ ಶಿಲೆಗಳ ಮೂಲಕ ಹೊರಹೊಮ್ಮುವಾಗ ನಾಡಶಿಲೆಗಳ ಛಿದ್ರಗಳನ್ನು ಕಬಳಿಸಿದಾಗ ನಾಡಶಿಲೆಗಳು ಕರಗಿ ಮಾತೃಶಿಲಾ ಸಂಯೋಜನೆಯಲ್ಲಿ ಬದಲಾವಣೆ ತರುತ್ತವೆ. ಇವಲ್ಲದೆ ಬೇರೆ ಬೇರೆ ಮೂಲಗಳಿಂದ ಸೃಷ್ಟಿಯಾದ ಶಿಲಾದ್ರವದ ಬೆರೆಯುವಿಕೆಯಿಂದಲೂ (ವಿಲೀನಿಕರಣ) ಕೂಡ ಮಾತೃಶಿಲಾ ದ್ರವವು ವಿಕಾಸಗೊಳ್ಳುತ್ತದೆ. ಬವೆನ್‍ರವರ ಪ್ರತಿಕ್ರಿಯಾ ತತ್ತ್ವ: ಮಾತೃಶಿಲಾದ್ರವ ಶೈತ್ಯೀಕರಣಕ್ಕೆ ಒಳಪಟ್ಟರೆ ಸ್ಫಟಿಕೀಕರಣ ಕ್ರಿಯೆ ನಡೆಯುತ್ತದೆ. ಸ್ಫಟಿಕೀಕರಣ ಮುಂದುವರೆದಂತೆ ರೂಪುಗೊಂಡಿರುವ ಹರಳುಗಳು ಮತ್ತು ಶೇಷ ಮಾತೃಶಿಲಾ ದ್ರವಗಳ ನಡುವೆ ಸಮಸ್ಥಿತಿ ಕಾಪಾಡುವ ಪ್ರಯತ್ನಗಳು ಸತತವಾಗಿ ನಡೆಯುತ್ತವೆ. ಈ ಪ್ರಯತ್ನದಲ್ಲಿ ಹರಳುಗಳು ಮತ್ತು ಶೇಷದ್ರವದ ನಡುವೆ ಪ್ರತಿಕ್ರಿಯೆ ನಡೆದು ಹೊಸ ಖನಿಜಗಳನ್ನು ಸೃಷ್ಟಿ ಮಾಡುತ್ತವೆ. ಹೀಗಾಗಿ ಸ್ಫಟಿಕೀಕರಣ ಕ್ರಿಯೆಯ ಉದ್ದಕ್ಕೂ ಈ ಪ್ರಕ್ರಿಯೆ ನಡೆಯುತ್ತಲೇ ಇದ್ದು ಹೊಸ ಹೊಸ ಖನಿಜಗಳು ಜನಿಸಿ ವಿವಿಧ ಅಗ್ನಿಶಿಲೆಗಳ ಉಗಮಕ್ಕೆ ಕಾರಣವಾಗಿವೆ. ಬವೆನ್ ಅವರು ಈ ತತ್ತ್ವವನ್ನು ಮೊದಲ ಬಾರಿಗೆ ಪ್ರತಿಪಾದಿಸಿದವರಾದ್ದರಿಂದ ಇದು ಬವೆನ್‍ರವರ ಪ್ರತಿಕ್ರಿಯಾ ತತ್ತ್ವವೆಂದೇ ಪ್ರಸಿದ್ಧಿಯಾಗಿದೆ. ಈ ಪ್ರತಿಕ್ರಿಯಾ ತತ್ತ್ವದ ಅನ್ವಯ ಮಾತೃ ಶಿಲಾದ್ರದ ಸ್ಫಟಿಕೀಕರಣ ಕ್ರಿಯೆಯಲ್ಲಿ ಕ್ರಮಾನುಗತವಾದ ಪ್ರತಿಕ್ರಿಯಾ ಶ್ರೇಣಿಯನ್ನು ಸಾದರ ಪಡಿಸಲಾಗಿದೆ. ಈ ಪ್ರತಿಕ್ರಿಯಾ ಶ್ರೇಣಿಯಲ್ಲಿ ಎರಡು ವಿಧಗಳಿವೆ: 1. ವಿಚ್ಛಿನ್ನ ಶ್ರೇಣಿ (ಜisಛಿoಟಿಣiಟಿuous seಡಿies), 2. ಅವಿಚ್ಛಿನ್ನ ಶ್ರೇಣಿ (ಛಿoಟಿಣiಟಿuous seಡಿies). ವಿಚ್ಛಿನ್ನ ಶ್ರೇಣಿಯಲ್ಲಿ ಆಲಿವೀನ್, ಪೈರಾಕ್ಸಿನ್, ಆಂಫಿಬೋಲ್ ಮುಂತಾದ ಕೃಷ್ಣವರ್ಣ ಖನಿಜಗಳಿರುತ್ತವೆ. ಈ ಶ್ರೇಣಿಯ ಖನಿಜಗಳ ನಡುವೆ ಸಂಯೋಜನೆಯಲ್ಲಾಗಲೀ ಒಳರಚನೆಯಲ್ಲಾಗಲೀ ಕ್ರಮಾನುಗತವಾದ ಬದಲಾವಣೆಗಳಿರುವುದಿಲ್ಲ, ಆದ್ದರಿಂದಲೇ ಇದು ವಿಚ್ಛಿನ್ನ ಶ್ರೇಣಿ ಎನ್ನಲಾಗಿದೆ. ಅವಿಚ್ಛಿನ್ನ ಶ್ರೇಣಿಯಲ್ಲಿ ಪ್ಲೇಜಿಯೋಕ್ಲೇಸ್ ಶ್ರೇಣಿಯ ವಿವಿಧ ಪ್ರಭೇದಗಳನ್ನು ಕಾಣಬಹುದು. ಅಂದರೆ ಈ ಶ್ರೇಣಿಯ ಖನಿಜಗಳ ಒಳರಚನೆ ಒಂದೇ ಆಗಿದ್ದು, ಸಂಯೋಜನೆ ದೃಕ್ (oಠಿಣiಛಿಚಿಟ) ಮತ್ತು ಭೌತ ಲಕ್ಷಣಗಳಲ್ಲಿ ಕ್ರಮಾನುಗತವಾದ ಬದಲಾವಣೆಯನ್ನು ಕಾಣಬಹುದು. ಈ ಎರಡು ಶ್ರೇಣಿಗಳು ಅಂತಿಮವಾಗಿ ಪೊಟ್ಯಾಸ್ ಫೆಲ್ಡ್‍ಸ್ಟಾರ್, ಮಸ್ಕೊವೈಟ್, ಕ್ವಾಟ್ರ್ಸ್ ಖನಿಜಗಳ ಉತ್ಪತ್ತಿಯೊಂದಿಗೆ ಸ್ಫಟಿಕೀಕರಣವು ಅಂತ್ಯಗೊಳ್ಳುತ್ತದೆ. ವಿಚ್ಛಿನ್ನ ಶ್ರೇಣಿ ಅವಿಚ್ಛಿನ್ನ ಶ್ರೇಣಿ ಆಲಿವೀನ್ ಕ್ಯಾಲ್ಸಿಕ್ ಪ್ಲೇಜ಼ಿಯೊಕ್ಲೇಸ್ ಮೆಗ್ನಿಷಿಯಂ ಪೈರಾಕ್ಸಿನ್ ಕ್ಯಾಲ್ಸಿಯಂ ಪೈರಾಕ್ಸಿನ್ ಕ್ಯಾಲ್ಕ್-ಆಲ್ಕಲಿ ಪ್ಲೇಜ಼ಿಯೊಕ್ಲೇಸ್ ಆಲ್ಕಲಿ-ಕ್ಯಾಲ್ಕ್ ಪ್ಲೇಜ಼ಿಯೊಕ್ಲೇಸ್ ಆಂಫಿಬೋಲ್ ಆಲ್ಕಲಿ ಪ್ಲೇಜ಼ಿಯೊ ಕ್ಲೇಸ್ ಬಯೊಟೈಟ್ ಪೊಟ್ಯಾಷ್ ಫೆಲ್ಡ್‍ಸ್ಟಾರ್ ಮಸ್ಕೊವೈಟ್ ಕ್ವಾಟ್ರ್ಸ್ ಈ ಪ್ರತಿಕ್ರಿಯಾ ತತ್ತ್ವ ನಿರೂಪಿಸುವ ಅನೇಕ ಕುರುಹುಗಳನ್ನು ಅಗ್ನಿಶಿಲೆಗಳಲ್ಲಿ ಕಾಣಬಹುದು. ಆಲಿವೀನ್ ಸುತ್ತಲೂ ಪೈರಾಕ್ಸಿನ್ ಇದ್ದು ಪೈರಾಕ್ಸಿನ್ ಸುತ್ತಲೂ ಹಾರ್ನ್‍ಬ್ಲೆಂಡ್ ಇರುವುದನ್ನು ಅನೇಕ ಶಿಲಾಛೇದದಲ್ಲಿ ಗುರುತಿಸಬಹುದು. ಹಾಗೆಯೆ ಪ್ಲೇಜ಼ಿಯೋಕ್ಲೇಸ್‍ನ ಒಂದು ಕಣದ ವಿವಿಧ ಪ್ಲೇಜ಼ಿಯೋಕ್ಲೇಸ್ ಪ್ರಭೇದದ ವಲಯಗಳು ಸುತ್ತುವರಿಸಿರುವುದನ್ನು ಕೂಡ ಕಾಣಬಹುದು. ಈ ಪ್ಲೇಜ಼ಿಯೋಕ್ಲೇಸ್‍ನ ಮಧ್ಯಭಾಗವು ಅನಾರ್ಥೈಟ್ ಆಗಿದ್ದು ಹೊರವಲಯವು ಆಲ್ಫೈಟ್ ಪ್ರಭೇದವಾಗಿರುತ್ತದೆ. ಆದ್ದರಿಂದ ಮಾತೃಶಿಲಾ ದ್ರವವು ಘನೀಕರಣಕ್ಕೆ ಒಳಪಟ್ಟಾಗ ಒಂದು ನಿರ್ದಿಷ್ಟ ಉಷ್ಣತೆಯಲ್ಲಿ ಸ್ಫಟಿಕೀಕರಣ ಪ್ರಾರಂಭವಾಗಿ ಕೊಂಚಕಾಲ ಅಥವಾ ದೀರ್ಘಕಾಲದವರೆಗೆ ಮುಂದುವರೆಯುವುದು. ಕಡೆಯ ಹನಿ ಘನೀಕರಿಸುವ ತನಕ ಸ್ಫಟಿಕೀಕರಣ ನಡೆದು ಖನಿಜಗಳು ರೂಪಗೊಂಡು ಬಗೆಬಗೆಯ ಅಗ್ನಿಶಿಲೆಗಳಿಗೆ ಕಾರಣವೆನಿಸಿವೆ. ಈ ಕ್ರಿಯೆಯೇ ಆಂಶಿಕ ಸ್ಫಟಿಕೀಕರಣ (ಈಡಿಚಿಛಿಣioಟಿಚಿಟ ಅಡಿಥಿsಣಚಿಟisಚಿಣioಟಿ). ಹೀಗೆ ಮಾತೃಶಿಲಾ ದ್ರವದ ಘನೀಕರಣವು ವಿವಿಧ ಹಂತಗಳಿಂದ ಕೂಡಿದೆ. (ಅ) ಆರ್ಥೊಮ್ಯಾಗ್ಮಾಟಿಕ್ ಹಂತ: ಮೊದಲ ಹಂತದಲ್ಲಿ ಅನಿಲಾಂಶವು ಕಡಿಮೆಯಿರು ವುದರಿಂದ ಅಗ್ನಿಜನ್ಯ ಖನಿಜಗಳು (Pಥಿಡಿogeಟಿiಛಿ miಟಿeಡಿಚಿಟs) ಮತ್ತು ಅನಂತರದ ಹಂತಗಳಲ್ಲಿ ಜಲಜನ್ಯ ಖನಿಜಗಳು ಜನಿಸುತ್ತವೆ. (ಆ) ಪೆಗ್ಮಟಿಟಿಕ್ ಹಂತ: ಈ ಹಂತದ ಉಷ್ಣತೆ ಸು 600ಲಿ ಸೆ. - 800ಲಿ ಸೆ. ವರೆಗೆ ಇರುತ್ತದೆ. ಈ ಪರಿಸ್ಥಿತಿಯಲ್ಲೂ ಸ್ಫಟಿಕೀಕರಣ ಮುಂದುವರೆಯುತ್ತದೆ. ದ್ರವದಲ್ಲಿ ಜಲಾಂಶ ಮತ್ತು ಸಿಲಿಕೇಟ್ ಅಂಶ ಅಧಿಕವಾಗಿದ್ದು, ದೊಡ್ಡ ದೊಡ್ಡ ಕ್ವಾಟ್ರ್ಜ್ ಮತ್ತು ಫೆಲ್ಡ್‍ಸ್ಟಾರ್ ಹರಳುಗಳು ಉತ್ಪತ್ತಿಯಾಗುತ್ತವೆ. (ಇ) ನ್ಯೂಮೆಟಾಲಿಟಿಕ್ ಹಂತ: ಈ ಹಂತದಲ್ಲಿ ಶಾಖವು 400ಲಿ ಸೆ. - 600ಲಿ ಸೆ. ವರೆಗೆ ಇರುತ್ತದೆ, ಹಾಗೂ ಶೇಷದ್ರವದಲ್ಲಿ ಜಲವಿಶ್ಲೇಷಣೆ ಹೆಚ್ಚಾಗುತ್ತಾ ಹೋಗುತ್ತದೆ. (ಈ) ಹೈಡ್ರೋಥರ್ಮಲ್ ಹಂತ: ಇದು ಘನೀಕರಣದ ಕೊನೆಯ ಹಂತ. ಇದರಲ್ಲಿನ ಶಾಖವು 100ಲಿ ಸೆ. - 400 ಸೆ. ವರೆಗೆ ಇರುತ್ತದೆ.ಈ ಹಂತದಲ್ಲಿ ಸ್ಫಟಿಕ ವಸ್ತು, ದ್ರಾವಣಗಳು ಮತ್ತು ದ್ರವಾನಿಲಗಳು ಸಮಸ್ಥಿತಿಯಲ್ಲಿರುತ್ತವೆ. (ಉ) ಡ್ಯೂಟಿರಿಕ್ ಹಂತ: ಈ ಹಂತವನ್ನು ಮುಟ್ಟುವ ವೇಳೆಗೆ ಮಾತೃಶಿಲಾ ದ್ರವದ ಬಹು ಭಾಗವು ಘನೀಕರಣಗೊಂಡಿರುತ್ತದೆ. ಕೇವಲ ಅನಿಲಾಂಶ ಉಳಿದಿರುತ್ತದೆ. ಇವು ಈಗಾಗಲೇ ರೂಪುಗೊಂಡಿರುವ ಖನಿಜಗಳ ಮೇಲೆ ದಾಳಿ ಮಾಡಿ ಕ್ಲೋರೈಟ್, ಸೆರಿಸೈಟ್, ಸರ್ಪಂಟಿನ್, ಜಿಯೋಲೈಟ್, ಕಯೋಲಿನ್ ಮುಂತಾದ ಆನುಷಂಗಿಕ ಖನಿಜಗಳಾಗಿ ಪರಿವರ್ತನೆಗೊಳ್ಳುತ್ತದೆ. ಈ ಹಂತದ ಕ್ರಿಯೆಯನ್ನು ಆಲ್ಸಟೀಕರಣ, ಕ್ಲೋರಿಟೀಕರಣ, ಸೆರಿಸಿಟೀಕರಣ ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಮಾತೃ ಶಿಲಾದ್ರವದ ಘನೀಕರಣ ಕ್ರಿಯೆಯಲ್ಲಿ ಮೇಲೆ ಪಟ್ಟಿ ಮಾಡಿರುವ ಎಲ್ಲ ಹಂತಗಳನ್ನು ದಾಟಿ ಘನೀಕರಿಸಬೇಕೆಂಬ ನಿಯಮವೇನು ಇಲ್ಲ. ಈ ಹಂತಗಳು ಶಿಲಾದ್ರವದ ಸಂಯೋಜನೆ ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿ ಜರಗುತ್ತವೆ. ಹೀಗೆ ಅಗ್ನಿಶಿಲೆಗಳು ಮಾತೃ-ಶಿಲಾದ್ರವ-ವಿಕಾಸ ಮತ್ತು ಘನೀಕರಣ- ಕ್ರಿಯೆಗಳಿಂ ದಲೂ ಹಾಗೂ ಇತರ ಕಾಯಂತರ ಕ್ರಿಯೆಗಳಿಂದಲೂ (ನಾಡಶಿಲೆಗಳ ಗ್ರ್ಯಾನಿಟೀಕರಣ, ಪ್ಯಾಲೆಂಜೆನಿಸಿಸ್ ಪಾಶ್ರ್ವ ದ್ರವೀಕರಣ ಮುಂತಾದವು) ಜನಿಸುತ್ತವೆ. (ಎಸ್.ಎ.ಎಂ) (ಪರಿಷ್ಕರಣೆ: ಎಂ.ಎನ್. ಮಾಲೂರ್) ಅಗ್ನಿಷ್ಟೋಮ : ವೇದೋಕ್ತ ಯಜ್ಞಗಳಲ್ಲಿನ ಅನೇಕ ಪ್ರಕಾರಗಳಲ್ಲಿ ಸೋಮಯಾಗ ಗಳಿಗೆ ಪ್ರಾಶಸ್ತ್ಯವುಂಟು. ಸೋಮಯಾಗಗಳಲ್ಲಿಯೂ ಒಂದರಿಂದ ಹನ್ನೆರಡು ದಿನಗಳವರೆಗೆ ನಡೆಯುವ ಅತಿರಾತ್ರ, ಉಕ್ಥ್ಯ ಮುಂತಾದ ಬೇರೆ ಬೇರೆ ಏಳು ಪ್ರಕಾರಗಳುಂಟು. ಈ ಪ್ರಕಾರಗಳಲ್ಲಿ (ಸಂಸ್ಥಾ) ಅಗ್ನಿಷ್ಟೋಮ ಮೊದಲನೆಯದು ಅತ್ಯಂತ ಸರಳವೂ ಆದುದು. ಈ ಯಾಗದ ಅವಧಿ ಒಂದೇ ದಿನ. ಬೇಕಾಗುವ ಯಾಜ್ಞಿಕರು ಹದಿನಾರು. ಅಗ್ನಿಯನ್ನು ನುತಿಸುವ ಸ್ತೋಮ ಎಂದರೆ ತೃಚ (ಮೂರು ಋಕ್ಕುಗಳ ಗುಂಪುಗಳು) ಕಡೆಯಲ್ಲಿ ಬರುವುದರಿಂದ ಈ ಹೆಸರು ಯಾಗಕ್ಕೆ ಅನ್ವರ್ಥಕವಾಗಿದೆ. ಇದರಲ್ಲಿ ಹನ್ನೆರಡು ಶಸ್ತ್ರಗಳು (ಹಾಡದ ಮಂತ್ರಗಳು) ಮತ್ತು ಮೂರು ಸವನಗಳು, ಕಡೆಗೆ ಸಾಮಗಾನ ಬರುತ್ತವೆ. ವಿಧಿಯ ವಿವರಗಳು ತಾಂಡ್ಯ ಮಹಾಬ್ರಾಹ್ಮಣದ ಆರನೆಯ ಅಧ್ಯಾಯದಲ್ಲಿವೆ. ಇದು ಅಗ್ನಿದೇವತಾಕಪಶುಯಾಗ. (ಕೆ.ಕೆ.) ಅಗ್ನಿಹೋತ್ರ : ವೈದಿಕ ಪರಂಪರೆಯಲ್ಲಿ ಗೃಹಸ್ಥನಿಗೆ ಉಕ್ತವಾಗಿರುವ ನಿತ್ಯಕರ್ಮ. ಯಾವಜ್ಜೀವವೂ ಅಗ್ನಿಹೋತ್ರ ಮಾಡಬೇಕೆಂದು ಶ್ರುತಿಯಿದೆ. ಇದು ಹವಿರ್ಯಜ್ಞಗಳಲ್ಲಿ ಒಂದು. ತುಪ್ಪ ಅಥವಾ ಹಾಲು ಅಥವಾ ಬೇರೆ ಹವಿಸ್ಸನ್ನು ಬೆಳಗ್ಗೆ ಮತ್ತು ಸಂಜೆ ಹೋಮಾಹುತಿ ಕೊಡುತ್ತ ಸತತವೂ ಅಗ್ನಿಯನ್ನು ನಂದದಂತೆ ಸಂರಕ್ಷಿಸಿಕೊಂಡು ಪೂಜೆ ಮಾಡುವುದು ಇದರ ಮುಖ್ಯಾಂಶ. ನಿತ್ಯವಿಧಿಯಾದ ಅಗ್ನಿಹೋತ್ರದಲ್ಲಿ ಸೂರ್ಯ ಮತ್ತು ಪ್ರಜಾಪತಿಗಳಿಗೆ ಬೆಳಗ್ಗೆಯೂ ಅಗ್ನಿ ಮತ್ತು ಪ್ರಜಾಪತಿಗಳಿಗೆ ಸಂಜೆಯೂ ಪ್ರಾರ್ಥನಾಮಂತ್ರಗಳಿರುತ್ತವೆ. ಇವನ್ನು ಉಪಸ್ಥಾನ ಮಂತ್ರಗಳೆನ್ನುತ್ತಾರೆ. ವೈದಿಕಧರ್ಮದಲ್ಲಿ ಹೆಚ್ಚಿನ ಆಸ್ಥೆಯಿದ್ದಾಗ ಅಗ್ನಿಹೋತ್ರ ಮನೆ ಮನೆಯಲ್ಲಿಯೂ ಆಚರಣೆಯಲ್ಲಿತ್ತು. ಈಗಲೂ ಅಗ್ನಿಹೋತ್ರಿಗಳು ನಮ್ಮ ನಾಡಿನಲ್ಲಿ ಕೆಲವರು ಸಿಕ್ಕುತ್ತಾರೆ. ಕೃಷ್ಣಯಜುರ್ವೇದದ ತೈತ್ತಿರೀಯ ಸಂಹಿತೆ, ಬ್ರಾಹ್ಮಣ, ಆರಣ್ಯಕಗಳಲ್ಲಿ ಈ ವಿಷಯ ವಿಸ್ತಾರವಾಗಿ ಬರುತ್ತದೆ. (ಕೆ.ಕೆ.) ಅಗ್ನ್ಯಬಾಧಿತ ಕಟ್ಟಡ : ಅಲ್ಯೂಮಿನಸ್ ಸಿಲಿಕೇಟ್, ಸುಣ್ಣ, ಕಾರ್ಬೊನೇಟುಗಳು, ಗಂಧಕಾಂಶವಿರುವ ಕಬ್ಬಿಣ, ಮೂಲರೂಪದ ಸಿಲಿಕ, ಪೊಟ್ಯಾಷ್, ಸೋಡ ಮತ್ತು ನೀರು-ಇವುಗಳನ್ನು ಸೂಕ್ತಪ್ರಮಾಣದಲ್ಲಿ ಹೊಂದಿರುವ ವಿಶೇಷ ರೀತಿಯ ಜೇಡಿ ಮಣ್ಣಿನಂಥ (ಫೈರ್‍ಕ್ಲೇ) ರಚನಾಸಾಮಗ್ರಿಯನ್ನು ಉಪಯೋಗಿಸಿ ಕಟ್ಟಲಾಗುವ ಕಟ್ಟಡಗಳಿಗೆ ಈ ಹೆಸರಿದೆ. ಈ ಜೇಡಿಮಣ್ಣಿಗೆ ಅಧಿಕವಾಗಿ ಸುರುಟಿಕೊಳ್ಳದೆ ಅಥವಾ ವಕ್ರವಾಗದೆ, ಅತ್ಯಧಿಕ ಉಷ್ಣತೆಯನ್ನು ತಡೆದುಕೊಳ್ಳಬಲ್ಲ ಗುಣವಿದೆ. ಇಂಥ ವಸ್ತುಗಳಿಂದ ಕಟ್ಟಲಾಗುವ ಕಟ್ಟಡಗಳು ಅಗ್ನಿಯಿಂದಾಗುª