ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ. ೯. ಏಕಾದಶಸ್ಕಂಧನ JNet ಮತ್ತು ಮನುಷ್ಯನ ಜೀವಿಸಿರುವವರೆಗೆ, ಅವನನ್ನು , ನಾಲಗೆ, ಕಣ್ಣು, ಕಿವಿ, ಮೂಗು, ಚರ್ಮ, ಶಿಶ್ನ, ಉದರ, ವಾಕ್ಕು ಮುಂತಾದ ಇಂದ್ರಿಯಸಮ ಹವೆಲ್ಲವೂ, ಅನೇಕ ಮಂದಿ ಸವತಿಯರು ಕುಟುಂಬಿಯನ್ನು ಹೇಗೋಹಾಗೆ ನಾನಾಕಡೆಗೆ ಎಳೆದಾಡುತ್ತಿರುವುವ, ಸೃಷ್ಟಿ ಕಾಕ್ಕಾಗಿ ಚತುರಖಶರೀ ರಕನಾದ ಭಗವಂತನು, ತನ್ನ ಶಕ್ತಿಯೆನಿಸಿಕೊಂಡ ಪ್ರಕೃತಿಯಿಂದ, ಮೊದಲು ಸಸ್ಯವರ್ಗಗಳೆಂದೂ, ಪಶು ಪಕ್ಷ ಮೃಗ,ಮ, ಸರೀಸೃಪಾದಿ ಜಂತುಗಳೆಂದೂ ವಾನಾಭೇದವುಳ್ಳ ಶರೀರಗಳನ್ನು ಸೃಷ್ಟಿಸಿದರೂ, ಇವೆ ಅವೂ ಮುಕ್ತಿಸಾಧನವನ್ನು ಅನುಷ್ಠಿಸುವುದಕ್ಕೆ ಅಶಕ್ತಿಗಳಾಗಿರುವುದನ್ನು ಕಂಡು, ಕಾಮ ಚೇತನೋಜೃವನಾರವಾಗಿ ನಡೆಸಿದ ಸೃಷ್ಟಿಕಾರವು ವ್ಯವಾಯಿತೆಂದು ತಿಳಿದು, ಮನಸ್ಯಪ್ತಿಯಿಲ್ಲದೆ, ಆಮೇಲೆ ಮನುಷ್ಯರನ್ನು ಸೃಷ್ಟಿಸಿದನು. ಈ ಮುಷ್ಯ ದೇಹದಲ್ಲಿ ಚೇತನನು ಬ್ರಹ್ಮ ಜ್ಞಾನವನ್ನು ಪಡೆಯುವುದಕ್ಕೆ ಶಕ್ತನಾಗಿರುವುದನ್ನು ನೋಡಿ ಭಗವಂತನು ತನ್ನ ಸೃಷ್ಟಿ ಕಾರವು ಸಾರ್ಥಕವಾಯಿತೆಂದು ಸಂತುಷ್ಟನಾದನು. ಓ ರಾಜೇಂದ್ರಾ ! ಜೀವನು ಅನೇಕಜನ್ಮಗಳನ್ನೆತ್ತಿ, ಕೊನೆಗೆ, ದುರ್ಲಭವಾದ ಮತ್ತು ಸತ್ಕಾರ ಸಿದ್ಧಿಪ್ರದವಾದ ಈ ಮನುಷ್ಯಜನ್ಯವನ್ನು ಪಡೆಯುವನು. ಈ ಮನುಷ್ಯ ದೇಹವೂ ಇತದೇಹಗಳಂತೆ ಶಾಶ್ವತವಾಗಿಯೇ ಇರುವುದು. ಇದರ ಬೆನ್ನ ಹಿಂದೆ ಮೃತ್ಯುವು ಕಾದಿರುವುದರಿಂದ, ಇದೇಹವು ಬಿದ್ದು ಹೋಗುವುದ ತೊರೆಗಾಗಿ ತನ್ನ ಶ್ರೇಯಸ್ಸಿಗೆ ಎಂದರೆ, ಮುಕ್ತಿಸಾಧನೆಗಾಗಿ ಪ್ರಯತ್ನಿಸ ಬೇಕೇ ಹೊರತು ವಿಷಯಸುಖಕ್ಕಾಗಿ ಆಸೆಪಡಬಾರದು. ಈ ವಿಷಯಸುಖ ವನ್ನು ಅನುಭವಿಸುವುದಕ್ಕೆ ಮಾನುಷಜನ್ಮವೇ ಬೇಕಾದುದಿಲ್ಲ. ನಾಯಿ, ನರಿ, ಕಕ್ಕೆ ಮೊದಲಾದ ಹೀನಜನ್ಮಗಳಲ್ಲಿಯೂ ಆ ಏಷಯೋಪಭೋಗವು ಸುಲಭವಾಗಿರುವುದು. ಓ ರಾಜೇಂದ್ರಾ! ಹೀಗೆ ನಾನು ಮೇಲೆ ಹೇಳಿದ ಅನೇಕನಿದರ್ಶನಗಳಿಂದ ಅನೇಕ ವಿಷಯಗಳನ್ನು ತಿಳಿದುಕೊಂಡು, ವೈರಾಗ್ಯ ವನ್ನು ವಹಿಸಿ, ಜ್ಞಾನದೃಷ್ಟಿಯಿಂದ ಆತ್ಮಸರೂಪವನ್ನು ಸಾಕ್ಷಾತ್ಕರಿಸಿ, ಅಹಂಕಾರ ಮಮಕಾರಗಳನ್ನು ತೊರೆದು ಭೂಮಿಯಲ್ಲಿ ತಿರುಗುತ್ತಿರುವೆನು. ಪುರುಷನಿಗೆ ಜ್ಞಾನವೆಂಬುದು ಒಂದೇ ಗುರುವಿನಿಂದ ಸಂಪೂರ್ಣವಾಗಿ 157 B