ಪುಟ:Mysore-University-Encyclopaedia-Vol-1-Part-1.pdf/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆತೀಶಬ್ಧ ಒಳಭಾಗಕ್ಕೆ ಸೀಮಿತವಾಗಿರುತ್ತದೆ. ಈ ಕಾರಣ ಒಂದು ಕ್ಷಿಪಣಿ ವೇಗದಲ್ಲಿ ನಮ್ಮ ತಲೆಯ ಮೇಲೇ ಹಾದುಹೋದರೂ ಅದರ ಶಬ್ದ ನಮಗೆ ಬರುವುದು ಅದು ಬಹುದೂರ ಹೋದ ಮೇಲೆಯೇ.

ನೊದಿ- ಮ್ಯಾಖ್ ಅಂಕ ಈ ಪರಿಶೀಲನೆಯಿಂದಾಗಿ ಮೂರು ಸಾಮಾನ್ಯ ನಿಯಮಗಳು ನಿರ್ದಿಷ್ಟವಾಗುತ್ತದೆ. ೧. ಸಂಕೇತ ನಷೇಧ ನಯಮಃ ಒತ್ತಡದ ಬದಲಾವಣೆ ಮಾಡುವುದರಿಂದ ಯಾವ ಸಂಕೇತವೂ ಶಬ್ದವೇಗದಿಂದ ಮಾರತ್ರ ಪ್ರಸಾರವಾಗುವುದರಿಂದ ಶಬ್ದಾತೀತ ವೇಗದಲ್ಲಿ ಗಮಿಸುವ ವಸ್ತುವಿನಿಂದ ಅದರ ಮುಂದಿರುವ ಪ್ರದೇಶಕ್ಕೆ ಈ ರೀತಿಯ ಸಂಕೇತ ಕಳುಹಿಸಲು ಸಾಧ್ಯವಿಲ್ಲ. ೨. ಕ್ರಿಯಾ (ಆಕ್ಷನ್) ಮತ್ತು ........... ಶಬ್ದಾತೀತ ಪ್ರವಾಹದಲ್ಲಿನ ಒಂದು ನಶ್ಚಲ ಬಿಂದುಮೂಲ ತನ್ನಂದಾಚೆ ಪ್ರವಾಹದ ದಿಕ್ಕಿನಲ್ಲಿ ಮ್ಯಾಖ್ ಶಂಕುವಿನ ಒಳವಲಯದಲ್ಲಿ ಮಾತ್ರ ಕ್ರಿಯಯನ್ನುಂಟು ಮಾಡಬಲ್ಲುದು ಅಥವಾ ವಿಲೋಮ ರೀತಿಯಲ್ಲಿ ಹೇಳುವುದಾದರೆ, ಪ್ರವಾಹದ ಯಾವುದಾದರೊಂದು ಬಿಂದುವಿನ ವೇಗ, ಒತ್ತಡಗಳು ಅದರಿಂದ ಪ್ರವಾಹದ ಎದುರು ದಿಕ್ಕಿನಲ್ಲಿ ಅದೇ ಶೃಂಗಕೋನವುಳ್ಳ ಮ್ಯಾಖ್ ಶಂಕುವಿನ ಒಳಭಾಗದಲ್ಲಿರುವ ಬಿಂದುಗಳಿಂದ ಮಾತ್ರ ಒಂಟಾದ ಆವೇಗಗಳಿಂದ ಪ್ರಭಾವಿತವಾಗಬಲ್ಲದು. ೩. ಕೇಂದ್ರೀಕೃತ ಕ್ರಿಯಾನಮಃ ಶಬ್ದಾತೀತ ವೇಗದಲ್ಲಿ ಒಂದು ವಸ್ತು ಗಮಿಸುತ್ತಿದ್ದರೆ ಅದರ ಪ್ರಭಾವದ ಬಹುಭಾಗ ಕ್ರಿಯಾವಲಯದ ಬಾಹ್ಯ ಸೀಮೆಯಾಗಿರುವ ಮ್ಯಾಖ್ ಶಂಕುವಿನ ಸಮೀಪಕ್ಕೇ ಕೇಂದ್ರೀಕೃತಗೊಓಡಿರುತ್ತದೆ. ಧಕ್ಕ ತರಂಗ: ಶಬ್ದ ಮಿತ ವೇಗದಲ್ಲಿ ಒಂದು ಚವಸ್ತು ಚಲಿಸುತ್ತಿರುವಾಗ, ಆ ವಸ್ತು ತಲುಪುವ ಮುನ್ನವೇ ಅದ ಗಮನದ ಮುಂದಿನ ಪ್ರದೇಶದಲ್ಲಿ ಪ್ರವಾಹಿ ಮಾಧ್ಯಮದ ಒತ್ತಡ ಹಾಗೂ ಸಾಂದ್ರತೆಗಳಲ್ಲಿ ಕ್ರಮೇಣ ಬದಲಾವಣೆ ಕಂಡುಬರುತ್ತಿದ್ದು ಚಲಿಸುವ ವಸ್ತು ಅಲ್ಲಿ ಬಂದಾಗ ಪ್ರವಾಹಿಮಾಧ್ಯಮ ಅದರ ಮೇಲಿನ ಪ್ರವಾಹಕ್ಕೆ ಹೊಂದಿಕೊಳ್ಳುತ್ತದೆ. ಮ್ಯಾಖ್ ಅಂಕದ ಬೆಲೆ ಒಂದಾದಾಗ ಅಥವಾ ಮೀರಿದಾಗ, ಮೇಲೆ ಹೇಳಿದ ಮೊದಲ ನಿಯಮದಂತೆ , ನಿಶ್ಚಲ ಪ್ರವಾಹಿ ಮಾಧ್ಯಮದ ಮೇಲೆ ಚಲಿಸುವ ವಸ್ತು ಆ ಸ್ಥಳವನ್ನು ಮುಟ್ಟುವವರೆಗೂ ಯಾವ ಪ್ರಭಾವವೂ ಇಲ್ಲದೆ ಇದ್ದು, ವಚ್ತು ಮೂಟ್ಟಿದೊಡನೆಯೇ ಪ್ರವಾಹಿಮಾಧ್ಯಮದ ಒತ್ತಡ, ಸಾಂದ್ರತೆ ಹಾಗು ಉಷ್ಣತೆ - ಇತ್ಯಾದಿ ಗುಣಲಕ್ಷಣಗಳು ಇದ್ದಕ್ಕಿದ್ದಂತೆ ವ್ಯತ್ಯಾಸವಾಗುವುದರಿಂದ ಒಂದು ಧಕ್ಕಾ ತರಂಗವೇಳುತ್ತದೆ(ಷಾಕ್ ವೇವ್). ಈ ತರಂಗ ಚಲಿಸುವ ವಸ್ತುವಿನ ಮೇಲ್ಮೈ ಅಥವಾ ಅದರ ಸಮೀಪದಲ್ಲೇ ಉತ್ಪತ್ತಿಯಾಗಿ ಹೊರಗಡೆಗ ಹರಡುವುದಲ್ಲದೆ ಚಲಿಸುವ ವಸ್ತುವನ್ನೇ ನಾಶ ಮಾಡಿಬಿಡಬಹುದಾದಷ್ಟು ಸಾಂದ್ರತೆಯುಳ್ಳದ್ದಗಿರಲೂ ಸಾಧ್ಯ.

ತರಂಗ ಸೆಳೆತ: ಅತಿಶಬ್ದ ವೇಗದಲ್ಲಿ ಚಲಿಸುವ ರೆಕ್ಕೆಯೊಂದು ಎಬ್ಬಿಸುವ ತರಂಗಗಳನ್ನು ಚಿತ್ರ ೨ರಲ್ಲಿ ತೋರಿಸಿದೆ. ರೆಕ್ಕೆಯ ಮುಂಚೂಣಿಯಚಲ್ಲಿ ಒತ್ತಡ ಅಧಿಕಗೊಂಡು, ಒತ್ತರಿತ ವಾಯು ರೆಕ್ಕೆಯ ಮೈಮೇಲೆ ಕ್ರಮೇಣ ವಿಸ್ತರಿಸಿದಂತೆ ಒತ್ತಡ ಕಡಿಮೆಯಾಗುತ್ತ ಹೋಗುತ್ತದೆ. ಸುತ್ತಲಿನ ವಾಯು ಒತ್ತಡಕ್ಕಿಂತ ರೆಕ್ಕೆಯ ಮುಂಚೂಣೆಯಲ್ಲಿರುವ ಒತ್ತಡ ಹೆಚ್ಚಾಗಿಯೂ ಹಿಂಚೂಣೆಯಲ್ಲಿ ಕಡಿಮೆಯಾಗಿಯೂ ಇರುವುದರಿಂದ ಈ ಒತ್ತಡ ವ್ಯತ್ಯಾಸ ರೆಕ್ಕೆಯ ಮೇಲೆ ಪಾರ್ಶ್ವಘರ್ಷಣೆ ಮತ್ತು ಪ್ರವಾಹದ ಬೀರ್ಪಡೆ ಇವುಗಳಿಂದಾಗುವುದಲ್ಲದೆ ಜೊತೆಗೇ ಚಲಿಸುವ, ಒತ್ತರಿಸ್ಲ್ಪಟ್ಟ ವಿಸ್ತ್ರುತ ತರಂಗಮಾಲೆಯನ್ನು ಎಬ್ಬಿಸುತ್ತದೆ. ಈ ಹಿಂದುಸೆಳೆತವನ್ನು ವಿರೋಧಿಸಿ ಮುಂದೆ ಕ್ರಮಿಸಲು ಇತರ ಬಾಬುಗಳಿಗಿಂತ ಅಧಿಕ ಶಕ್ತಿಯ ಅವಶ್ಯಕತೆಯಿರುತ್ತದೆ. ಹರಿಯುವ ನೀರಿನ ಮೇಲೆನ ಅಲೆಗಳ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ದೋಣಿಯೊಂದು ಕ್ರಮಿಸುವಾಗ ದೋಣಿಯ ಮುಂದೆ ನೀರು ಶೇಖರಣೆಯಾದಂತಾಗಿ ಒಂದು ದೊಡ್ಡ ಅಲೆ ಸೃಷ್ಟಿಗೊಂಡು ದೋಣಿಯೊಡನೇ ಚಲಿಸುವುದನ್ನು ಇದು ಹೋಲುವುದರಿಂದ ಇದಕ್ಕೆ ತರಂಗ ಸೆಳೆತ ಎಂದು ಹೆಸರು.ಇದರ ವಿವರವಾದ ಪರಿಶೀಲನೆಯಿಂದಾಗಿ ಅತಿಶಬ್ದವೇಗದ ರೆಕ್ಕೆಗಳ ಮುಂಚೂಣೆ ಮತ್ತು ಹಿಂಚೂಣಿ ಎರಡು ಕಡೆಯೂ ಚೂಪಾಗಿರಬೇಕಲ್ಲದೆ, ಅವುಗಳ ದಪ್ಪ ಉದ್ದಗಳ ಪ್ರಮಾಣ ಸಾಧ್ಯವಿದ್ದಷ್ಟು ಕಡಿಮೆಯಿರಬೇಕೆಂದು ವ್ಯಕ್ತಪಟ್ಟಿದೆ. ಶಬ್ದಮಿತವೇಗದಲ್ಲಿ ಇದು ಕೇವಲ ... ಇರಬಹುದಾದರೆ, ಶಬ್ದಾತೀತ ವೇಗದ ಯಾನದಲ್ಲಿ ಕೈ ಮಿತಗೊಳ್ಳಬೇಕಾಗಬಹುದು.

ನಗಪು: ಶಬ್ದ ಮಿತ ವೇಗದಲ್ಲಿ ಚಲಿಸುವ ರೆಕ್ಕೆಯಲ್ಲುಂಟಾಗುವ ನಗಪು ರೆಕ್ಕೆಯ ಮೈಮೇಲೆ ಗಾಳಿಯ ಪರಿಚಲನೆಯ ದೆಸೆಯಿಂದ ಒಂಟಾಗುತ್ತದೆ. ಚಿತ್ರದಲ್ಲಿ ತೋರಿಸುವಂತೆ ಇಂಥ ರೆಕ್ಕೆಯ ಮುಂಚೂಣೆ ಗುಂಡಾಗಿದ್ದು, ಪ್ರವಾಹದ ದಿಕ್ಕಿಗೆ ಸ್ವಲ್ಪ ಓರೆಯಾಗಿರುವುದರಿಂದ ಗಾಳಿಯ ಪದರಗಳು ಮುಂತುದಿಗೆ ತಗಲಿ ಇಬ್ಭಾಗವಾಗುತ್ತದೆ. ಕೆಲವು ಪದರಗಳು ರೆಕ್ಕೆಯ ಮೇಲಿನಿಂದಲೂ ಕೆಲವು ಕೆಳಗಡೆಯೂ ಹರಿಯುವಾಗ ಮೇಲಿನ ಪದರಗಳು ರೆಕ್ಕೆಯ ಮೇಲಿನಿಂದಲೂ ಕಲವು ಕೆಳಗಡೆಯೂ ಹರಿಯುವಾಗ ಮೇಲಿನ ಪದರಗಳು ಹೆಚ್ಚು ದೂರವನ್ನು ಕಳಗಿನವು ಕಡಿಮೆ ದೂರವನ್ನೂ ಕ್ರಮಿಸಿ ಏಕಕಾಲಕ್ಕೆ ಹಿಂತುದಿಯ ಬಳಿ ಸೇರಿಕೊಳ್ಳುವ ದೆಸೆಯಿಂದ , ಮೇಲಿನ ಪದರಗಳ ವೇಗ ಸ್ವಲ್ಪ ಹೆಚ್ಚಗಿಯೂ ಕೆಳಗಿನದೆರಡು ಸ್ವಲ್ಪ ಕಡಿಮೆಯಾಗಿಯೂ ಆಗುತ್ತದೆ. ಪ್ರಸಿದ್ಧ ಬರ್ನೊಲಿ ನಿಯಮದಂತೆ, ರೆಕ್ಕೆಯನ್ನು ಮೇಲಕ್ಕೆ ಎತ್ತುವಂಥ ಪ್ರತಿಕ್ರಿಯೆ