ಪುಟ:Mysore-University-Encyclopaedia-Vol-1-Part-1.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೪

ಅಂತರಿಕ್ಷ ಸಂಶೋಧನೆ


ಆದರೂ ೨೦ ಸೆಕೆಂಡುಗಳ ನಂತರ ಅದು ಸ್ಥಬ್ದವಾಯಿತು. ಅದಾದ ಬಳಿಕ
ಮಂಗಲ ಗ್ರಹದ ಅನ್ವೇಷಣೆಯ ಸಂದಭ౯ದಲ್ಲಿ ಭಾಗಶಃ ಯಶಸ್ಸನ್ನಾದರೂ ಕಂಡ
ರಷ್ಯದ ಏಕೈಕ ನೌಕೆಯೆಂದರೆ ಫ಼ೋಬೋಸ್-೧
೨.ಅಮೇರಿಕದ ನೌಕೆಗಳು: ಅಮೇರಿಕನ್ನರು ೧೯೬೨ ಆಗಸ್ಟ್ ೨೭ರಂದು ಮ್ಯಾರಿನರ್
-೨ ಎಂಬ ನೌಕೆಯನ್ನು ಶುಕ್ತಗ್ರಹದೆಡೆಗೆ ಹಾರಿಸಿದರು. ಇದು ಶುಕ್ರನನ್ನು ೩೩೦೦ಕಿಮೀ
ಅಂತರದಲ್ಲಿ ಹಾದುಹೋಗಿ ಶುಕ್ರಗ್ರಹದ ಸಾಂದ್ರತೆ, ವಾತಾವರಣ, ಉಷ್ಣತೆ ಮತ್ತು
ಕಾಂತಕ್ಷೇತ್ರಗಳ ಅಧ್ಯಯಮನ ನಡೆಸಿತು.
೧೯೭೦ ದಶಕದ ಉತ್ತರಾಧ౯ದಲ್ಲಿ ಅಮೆರಿಕ ಉಡಾಯಿಸಿದ ಪಯನೀರ್ ವೀನಸ್
ಸರಣಿಯ ಎರಡು ನೌಕೆಗಳು ಶುಕ್ರಗ್ರಹವನ್ನು ಅನ್ವೇಷಿಸಿದವು. ಆ ಪೈಕಿ ಪಯನೀರ್
ವೀನಸ್ ೧ ರೆಡಾರ್ ಕಣ್ಣಿನಿಂದ ಶುಕ್ರಗ್ರಹದ ಸಮೀಕ್ಷೆ ನಡೆಸಿದರೆ ಪಯನೀರ್
ವೀನಸ್ ೨, ಆ ಗ್ರಹವನ್ನು ಸುತ್ತುತ್ತಲೇ ನಾಲ್ಕು ಕೋಶಗಲನ್ನು ಆ ಗ್ರಹದ ಮೇಲೆ ಎಸೆದು
ಆ ಮೂಲಕ ಅನ್ವೆಷಣೆ ನಡೆಸಿತು. ಅನಂತರ ೧೯೮೯ರಲ್ಲಿ ಉಡಾಯಿಸಲಾದ ಮೆಜಿಲಾನ್
ಎಂಬ ರೋಬೋತ್ ನೌಕೆ ತನ್ನ ರೋಬಾಟ್ ಕಣ್ಣಿನ ನೆರವಿನಿಂದ ಶುಕ್ರನ ಮೇಲ್ಮೆಯ
ಶೇ ೯೯ ಭಗದ ಸಮೀಕ್ಷೆ ನಡೆಸಿತು.
೧೯೬೪ ನವೆಂಬರ್ ೨೮ರಂದು ಮ್ಯಾರಿನರ್-೪ ಎಂಬ ನೌಕೆಯನ್ನು ಮಂಗಲ
ಗ್ರಹದೆಡೆಗೆ ಹಾರಿಸಿದರು. ಇದು ೧೯೬೫ ಜುಲೈ ತಿಂಗಳಲ್ಲಿ ಮಂಗಳ ಗ್ರಹದ ಸಮೀಪದಲ್ಲಿ
ಹಾರು ಹೋದುದಲ್ಲದೆ ಅದರ ಚಿತ್ರಗಳನ್ನೂ ತೆಗೆಯಿತು.ಈ ಅಧ್ವಯನದಂತೆ ಬಹುಮಟ್ಟಿಗೆ
ಕಾಬಾ౯ನ್ ಡೈ ಆಕ್ಸೈಡಿನಿಂದ ಕೂಡಿದ ಮಂಗಳ ವಾತಾವರಣದ ಒತ್ತಡ ಭೂಮಿಯದಕ್ಕಿಂತ
ಶೇ. ೧ ಭಾಗ ಮಾತ್ರವಿದೆ ಎಂದು ತಿಳಿಯಿತು.
೧೯೬೭ ಅಕ್ಟೋಬರ್ ೨೦ರಂದು
ಮ್ಯಾರಿನರ್ ಕಡ ೫ ಎಂಬ ನೌಕೆ
ಶುಕ್ರಗ್ರಹವನ್ನು ೫೦೦೦ ಕಿಮೀಗಳ
ಅಂತರದಲ್ಲಿ ಹಾದು ಹೋಗುತ್ತಿದ್ದಂತೆ
ಅದು ಕಳುಹಿಸಿದ ರೇಡಿಯೋ
ತರಂಗಗಳು ಶುಕ್ರನ ವಾತಾವರಣದ
ವಿವಿಧ ಸ್ತರಗಳನ್ನು ಹೊಕ್ಕು ಭೂಮಿಯ
ನ್ನು ತಲುಪುತ್ತಿದ್ದುವು. ತರಂಗ
ಗಳಲ್ಲಿ ಉಂಟಾಗುವ ವ್ಯತ್ಯಾಸಗಳಿಂದ
ಅಲ್ಲಿನ ವಾತಾವರಣ ಗುಣವಿಶೇಷ
ಗಳನ್ನು ಲೆಕ್ಕಹಾಕಿದರು. ಇದನ್ನು
ರೇಡಿಯೋ ಅಕೃಲ್ವೇಷನ್ ಪ್ರಯೋಗ
ಎನ್ನುತ್ತಾರೆ. ಈ ಪ್ರಯೋಗದಿಂದ
ಶುಕ್ರನ ವಾತಾವರಣದ ಒತ್ತಡ
ಭೂಮಿಯದಕ್ಕಿಂತ ೭-೮ನ ಪಾಲು
ಹೆಚ್ಚಾಗಿದೆಯೆಂದು ಅದರಲ್ಲಿ
ಇಂಗಾಲಾಮ್ಲ ಶೇ.೭೦-ಶೇ.೮೫
ರಷ್ಟಿದ್ದು ಜಲಜನಕ ಮತ್ತು ಆಮ್ಲಜನಕ
ಇಲ್ಲವೇ ಇಲ್ಲವೆಂತಲೂ ಲೆಕ್ಕ ಹಾಕಲಾ
ಯಿತು. ಇದರ ಜೊತೆಗೆ ಮ್ಯಾರಿನರ್
-೫ ಹೊತ್ತ ಉಪಕರಣಗಳು ಶುಕ್ರನಿಗೆ
ಕಾಂತಕ್ಷೇತ್ರವೇನಾದರು ಇದ್ದರೆ ಅದು ಭೂಮಿಯದಕ್ಕಿಂತ ೧/೩೦೦ ರಷ್ಟಕ್ಕಿಂತ
ಕಡಿಮೆಯಿರಬೇಕೆಂದು ಏಕಿರಣ ವಲಯಗಳನಲ್ಲವೆಂದೂ ತಿಳಿಸಿರುವು.
೧೯೬೯ ಫ಼ೆಬ್ರವರಿ ೨ರಂದು ಮ್ಯಾರಿನರ್-೬ ಮತ್ತು ೨೪ರಂದು ಮ್ಯಾರಿನರ್
-೭ ನೌಕೆಗಳನ್ನು ಮಂಗಳಗ್ರಹದೆಡೆಗೆ ಹಾರಿಸಿದರು. ಇವುಗಳಲ್ಲಿ ಮ್ಯಾರಿನರ್-೬
ಜೂನ್ ೩೧ರ ವೇಳೆಗೆ ಮಂಗಳನ ಭೂ ಮಧ್ಯ ವಿಭಗದ ಮೆಲೂ ಮ್ಯಾರಿನರ್-೭
ಆಗಸ್ಟ್ ೫ರ ಹೊತ್ತಿಗೆ ಧ್ರುವಭಾಗದ ಮೇಲೂ ಹಾರುಹೋದವು. ಎರಡು ನೌಕೆಗಳು
ಮಂಗಳನ ಚಿತ್ರವನ್ನುತೆಗೆದು ಆ ಪ್ರದೇಶದ ಉಷ್ಣತೆಯನ್ನೂ ಅಳಿದವು. ಇದರ
ಜೊತೆಗೆ ಅವುಗಳಲ್ಲಳವಡಿಸಲಾದ ಅತಿನೇರಳೆ ಮತ್ತು ಅವರಕ್ತದೋಹಿತಮಾಪಕಗಳು
(ಇನ್ಫ಼್ರಾರೆಡ್ ಸ್ಪೆಕ್ಟೋಮೀಟರ್) ಆ ಗ್ರಹದ ವಾತಾವರಣವನ್ನು ನಡೆಸಿದವು.
ನೌಕೆಗಳು ಗ್ರಹಣವನ್ನು ಸಮೀಪಿಸಿದಂತೆ ಅವುಗಳ ಪಥವನ್ನು ನಿಖರವಾಗಿ ಕಂಡುಹಿಡಿದು ಗ್ರಹದ
ಸರಿಯಾದ ತೂಕ ಮತ್ತು ಸ್ಥಾನವನ್ನು ಲೆಕ್ಕಹಾಕಲಾಯಿತು. ೧೯೭೧ರಲ್ಲಿ ಅಮೇರಿಕದ
ಮ್ಯಾರಿನರ್-೯ ನೌಕೆ ಮಂಗಳ ಗ್ರಹದ ಮೊದಲ ಕೃತಕ ಉಪಗ್ರಹವಾಯಿತು. ಆ ಗ್ರಹವನ್ನು ಸುತ್ತುವಾಗ ಅದರ ಮೇಲ್ಮೆಯ ಸ್ಪುಟವಾದ ಚಿತ್ರಗಳನ್ನು ಆ ರೋಬೋಟ್ ನೌಕೆ ಭೂಮಿಗೆ ಪ್ರಸಾರಮಾಡಿತು. ಆನಂತರ ೧೯೭೬ರಲ್ಲಿ ವೈಕಿಂಗ್ ಸರಣಿಯ ಎರಡು ನೌಕೆಗಳು ಮಂಗಳ ಗ್ರಹದ ಮೇಲೆ ಸುರಕ್ಷಿತವಾಗಿ ಇಳಿದು ಅಲ್ಲಿಂದ ಮಣ್ಣಿನಲ್ಲೂ ಸೂಕ್ಷ್ಮ ಜೀವಿಗಳಿಗಾಗಿ ಅವು ಹುಡುಕಾಟ ನಡೆಸಿ ಕಳುಹಿಸಿದ ವರದಿಯನ್ನು ವಿಶ್ಲೇಷಿಸಿದ ಅನಂತರ ಅದರಲ್ಲಿ ಸೂಕ್ಶ್ಮ ಜೀವಿಗಳು ಇಲ್ಲವೆಂದು ಬಹುತೇಕ ವಿಜ್ನಾನಿಗಳು ತೀರ್ಮಾನಿಸಿದರು. ವೈಕಿಂಗ್ ನೌಕೆಗಳು ಮಂಗಳ ಗ್ರಹದ ಎರಡು ಪುಟ್ಟ ಉಪಗ್ರಹಗಳಾದ ಫ಼ೋಬೋಸ್ ಮತ್ತು ಡೈಮೋಸ್ಗಳ ಚಿತ್ರಗಳನ್ನೂ ಭೂಮಿಗ್ರ್ ಒರಸಾರ ಮಾಡಿದವು.

೧೯೯೭ರಲ್ಲಿ ಅಮೆರಿಕದ ಪಾತ್ಫ಼ೆಂಡರ್ ನೌಕೆ ಸೋಜೋರ್ನರ್ ಎಂಬ ಪುಟ್ಟ ರೋಬೋಟ್ ವಾಹನವೊಂದನ್ನು ಮಂಗಳ ಗ್ರಹದ ಮೇಲೆ ಇಳಿಸಿತು. ಅದೇ ವರ್ಷ ಹಾಗೂ ೨೦೦೧ರಲ್ಲಿ ಮಾರ್ಸ್ ಗ್ಲೋಬಲ್ ಸರ್ವೇಯರ್ ಮತ್ತು ಮಾರ್ಸ್ ಒಡಿಸ್ಸಿ ಎಮ್ಬ ಎರಡು ರೋಬೋಟ್ ನೌಕೆಗಳು ಮಂಗಳ ಗ್ರಹದ ಕೃತಕ ಉಪಗ್ರಹಗಳಾಗುವ ಮೂಲಕ ಅದರ ಅನ್ವೇಷಣೆಯನ್ನು ಪ್ರಾಂರಭಿಸಿದವು. ೨೦೦೪ರಲ್ಲಿ ಅಮೆರಿಕದ ಮತ್ತೆರಡು ನೌಕೆಗಳು ಮಂಗಳ ಗ್ರಹದ ಮೇಲಿಳಿಸಿದ ಸ್ಪಿರಿಟ್ ಮತ್ತುಬ್ ಅಪರ್ಚುನಿಟಿ ಎಂಬ ಎರಡು ರೊಬೋಟ್ ವಾಹನಗಳು ತಾವಿಳದ ಪ್ರದೇಶದಿಂದ ಎರಡು ಕಿಲೋಮೀಟರ್ಗಿಂತ ಹೆಚ್ಚು ದೂರ ಧಾವಿಸಿ ಅನ್ವೇಷಣೆ ನಡೆಸುತ್ತಿವೆ. ಅಂತೆಯೇ ಮಾರ್ಸ್ ಎಕ್ಸ್-ಪ್ರೆಸ್ ಎಂಬ ಯುರೋಪಿನ ಒಂದು ರೋಬೋಟ್ ನೌಕೆ ಮಂಗಳ ಗ್ರಹವನ್ನು ಸುತ್ತುತ್ತಾ ಅದರ ಮೇಲ್ಮೈಯತ್ತ ತನ್ನ ಚುರುಕಾದ ನೋಟವನ್ನು ಹಾಯಿಸಿ ಅಲ್ಲಿನ ಸ್ಫುಟವಾದ ಚಿತ್ರಗಳನ್ನು ಭೂಮಿಗೆ ಪ್ರಸಾರ ಮಾಡುತ್ತಿದೆ.


ಭಾಗ ೬. ಅಂತಾರಾಷ್ಟ್ರೀಯ ಅಂತರಿಕ್ಷ ಕಾರ್ಯಕ್ರಮಗಳು: ೧೯೫೮ ನವೆಂಬರ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಅಂತರಿಕ್ಷ ಸಂಶೋಧನೆ ಸಮಿತಿ( ಇಂಟರ್ ನ್ಯಾಷನಲ್ ಕಮಿಟಿ ಫ಼ಾರ್ ಸ್ಪೇಸ್ ರಿಸರ್ಚ್)ಸ್ಥಾಪನೆಯಾಯಿತು. ಸದಸ್ಯ ರಾಷ್ಟ್ರಗಳು ಆಗಾಗ ಸಭೆ ಸೇರುವುದಲ್ಲದೆ ತಾವು ನಡೆಸಿದ ಅಂತರಿಕ್ಷ ಸಂಶೋಧನೆ ಅಂಕಿ-ಅಂಶಗಳನ್ನು, ಹಾರಿಸಲಿರುವ ಪರೀಕ್ಷಕ ರಾಕೆಟ್ಟುಗಳ ಅಥವಾ ಅಂತರಿಕ್ಷ ನೌಕೆಗಳ ವಿವರಗಳನ್ನು ವಿನಿಮಯ ಮಾಡಿಕೊಳ್ಳಲಾಗಿರಂಭಿಸಿದವು.

ಅಂತಾರಾಷ್ಟ್ರೀಯ ಅಂತರಿಕ್ಷಯಾನ ಸಂಘದಈ(ಇಂಟರ್ ನ್ಯಾಷನಲ್ ಆಸ್ಟ್ರೋನಾಟಿಕಲ್ ಫ಼ೆಡರೇಷನ್) ಆಶ್ರಯದಲ್ಲಿ ಅಂತರಿಕ್ಷ ಸಂಶೋಧನೆಗೆ ಸಂಬಂಧಿಸಿದ ಯಂತ್ರೋದ್ಯಮದ(ಇಂಜಿನಿಯರಿಂಗ್) ವಿಚಾರಗಳನ್ನು ಆಗಾಗ ಚರ್ಚಿಸಲಾಗುತ್ತದೆ.

ಅಂತಾರಾಷ್ಟ್ರೀಯ ಸಂಪರ್ಕ ಸಾಧನೋಪಗ್ರಹಗಳ ಸಂಘದಲ್ಲಿ(ಇಂಟರ್ ನ್ಯಾಷನಲ್ ಟೆಲಿಕಮ್ಯುನಿಕೇಷನ್ ಸೆಟಲೈಟ್ ಕನ್ಸಾರ್ಟಿಯಮ್) ಭಾರತವನ್ನೊಳಗೊಂಡಂತೆ ಅನೇಕ ಸದಸ್ಯರಾಷ್ಟ್ರಗಳಾಗಿವೆ. ಎದರ ಆಶ್ರಯದಲ್ಲಿ ಸಂಪರ್ಕ ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಗೆ ಹಾರಿಸುವುದು. ೧೯೬೫ರಿಂದ ಪ್ರಾಂಭವಾಯಿತು. ಆ ಪೈಕಿ:i,ಆರ್ಲಿಬರ್ಡ್-ಇದನ್ನು ಭೂಸ್ಥಿರ ಕಕ್ಷೆಯಲ್ಲಿ ೧೯೬೫ರ ಏಪ್ರಿಲ್ ನಲ್ಲಿ ಅಟ್ಲಾಂಟಿಕ ಸಾಗರದ ಮೇಲೆ ಹಾರಿಸಿದರು. ಇದರಿಂದ ಅಮೇರಿಕ ಮತ್ತು ಯುರೋಪಗಳಿಗೆ ಟೆಲಿಫ಼ೋನ್ ಮತ್ತು ಟೆದ್ಲಿವಿಷನ್ ಸಂಪರ್ಕಹಳೇರ್ಪಟ್ಟವು. ii.ಇಂಟೆಲ್ಸ್ಯಾಟ್-II-ಪೆಸಿಫ಼ಿಕ್-೧: ಇದನ್ನು ೧೯೬೭ರ ಜನವರಿಯಲ್ಲಿ ಪೆಸಿಫ಼ಿಕ್ ಸಾಗರದ ಮೇಲೆ ಸ್ಥಾಪಿಸಿದರು. ಇದರಿಂದ ಉತ್ತರ ಅಮೆರಿಕ, ಪೂರ್ವ ದೇಶಗಳು ಹಾಗೂ ಆಷ್ಟೇಲಿಯಕ್ಕೆ ಸಂಪರ್ಕವೇರ್ಪಟ್ಟಿತು.ಇಂಟಲ್ಸ್ಯಾಟ್ ಉಪಗ್ರಹಗಳಿಂದ ಪ್ರಪಂಚದ ಎಲ್ಲ ಭಾಗಗಳಿಗೂ ಸಂಪರ್ಕ ೧೯೬೯ರಿಂದ ಏರ್ಪಟ್ಟಿತು. ಉಪಗ್ರಹಗಳು ಪುನಃಪ್ರಸಾರ ಮಾಡಿದ ಸೂಕ್ಷ್ಮತರಂಗ ಸಂಜ್ನಗಳನ್ನು ಗ್ರಹಿಸುವ ಒಮ್ದು ಕೇಂದ್ರವನ್ನು ಭಾರತದ ಅಹಮದಾಬಾದಿನಲ್ಲಿ ವಿಸ್ವಸಂಸ್ಥೆಯ ಸಹಾಯದಿಂದ ೧೯೬೭ರಲ್ಲಿ ಸ್ಥಾಪಿಸಲಾಯಿತು. ಇದು ಅಮೆರಿಕ ಹಾರಿಸಿದ ATS-2 ಎಂಬ ಉಪಗ್ರಹದ ಸಹಾಯದಿಂದ ಜಪಾನಿನೊಡನೆ ಸಂಪರ್ಕವನ್ನು ಪಡೆಯಿತು. ಈ ಕೇಂದ್ರದಲ್ಲಿ ಭಾರತದ ಮತ್ತು ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ವಿಜ್ನಾನಿಗಳು ತರಬೇತಿ ಪಡೆದರು.

೧೯೬೧ರಲ್ಲಿ ವಿಶ್ವಸಂಸ್ಥೆಯ ಬಾಹ್ಯಾಂತರಿಕ್ಷದ ಶಾಂತಿಯತ ಉಪಯೋಗಗಳ ಮಂಡಳಿ ಏರ್ಪಟ್ಟಿತು.ವೈಜ್ನಾನಿಕ ಮತ್ತು ತಾಂತ್ರಿಕ ವಿಷಯಗಳು ಮತ್ತು ಕಾನೂನಿನ ವಿಷಯಗಳು-ಇವಕ್ಕೆ ಸಂಬಂಧಿಸಿದ ಎರಡು ಉಪಸಮಿತಿಗಳ ರಚನೆಯಾಯಿತು. ಇವುಗಳಲ್ಲೊಂದಾದ ವೌಜ್ನಾನಿಕ ಮತ್ತು ತಾಂತ್ರಿಕ ಉಪಸಮಿತಿ ಭೂಕಾಂತ ಮಧ್ಯರೇಖೆಯಲ್ಲಿ ಅಂತರಾಷ್ಟ್ರೀಯ ಉಪಯೋಗಕ್ಕಾಗಿ ಒಂದು ರಾಕೆಟ್ ಕೇಂದ್ರವನ್ನು ಸ್ಥಾಪಿಸಲು ಕರೆಯಿತ್ತಿತ್ತು. ಇದಕ್ಕೆ ಓಗೊಟ್ಟು ಭರತ ಆಗಲೇ ಸಿದ್ಧವಾಗಿತ್ತುದ್ದ ತನ್ನ ತುಂಬಾ ಕೇಂದ್ರವನ್ನು ಅಂತಾರಾಷ್ಟ್ರೀಯ ಕೇಂದ್ರವನ್ನಾಗಿ ಮಾಡಲು ಒಪ್ಪಿಕೊಂಡಿತು. ಇದಕ್ಕೆ ವಿಶ್ವಸಂಸ್ಥೆಯ ಅನುಮೋದನೆ ಸಿಕ್ಕಿತು. ತುಂಬಾ ಕೇಂದ್ರದ ಬೆಳವಣೆಗೆಗೆ ರಷ್ಯ, ಅಮೆರಿಕ ಮತ್ತು ಫ಼್ರಾನ್ಸ್ ದೇಶಗಳ ನೆರವು ದೊರಕಿತು.

ತುಂಬಾ ಕೇಂದ್ರದಿಂದ ೧೯೬೩ ನವೆಂಬರ್ನಿಂದ ಪರೀಕ್ಷಕ ರಾಕೆಟ್ಟುಗಳನ್ನು ಹಾರಿಸಲು ಪ್ರಾರಂಭ ಮಾಡಲಾಯಿತು. ಮೊದಲಿಗೆ ಅಮೆರಿಕ ಮತ್ತು ಫ಼್ರಾನ್ಸ್ ದೇಶಗಳಿಂದ ಪಡೆದ ರಾಕೆಟ್ಟುಗಳನ್ನು ಇಲ್ಲಿಂದ ಹಾರಿಸಲಾಯಿತು. ನಂತರ ತುಂಬಾದಲ್ಲಿಯೇ ತಯಾರಿಸಲಾದ