ಪುಟ:ಕವಿಸಮಯಂ ಪ್ರಥಮ ಭಾಗ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

'ಕವಿ ಸಮಯಂ.'


ಶ್ರೀಯುತನೊಳುದಾರತೆ ವಾ।
ಕ್ಛ್ರೀಯುತನೊಳಮರತ್ವವಾಗದುದಾರಂ ॥
ಶ್ರೀಯುತನಮತ್ಸರಂ ವಾ।
ಕ್ಛ್ರೀ ಯುತನಾದೊಡೆ ಕೃತಾರ್ಥರಾಗರೆ ಕವಿಗಳ್॥

(ಕವಿರತ್ನ೦)

ಪೀಠಿಕಾ ಪ್ರಕರಣಂ

ಕಾವ್ಯಜ್ಞಾನವು ಸುಖಸಾಧನಗಳಲ್ಲಿ ಪ್ರಬಲವಾದುದಾಗಿ, ಮನುಷ್ಯನ ಪ್ರವೃತ್ತಿಯೆಲ್ಲವೂ ಸುಖವನ್ನೇ ಉದ್ದೇಶಿಸಿ ಹುಟ್ಟುವುದರಿಂದಲೂ, ಸುಖವು ಪ್ರಾಯಶಃ ಇಂದ್ರಿಯದ್ವಾರಾ ಉಂಟಾಗಿ, ಆ ಇಂದ್ರಿಯ ಸುಖಗಳೆಲ್ಲವೂ ಕೇಶಿರಾ ಜನು “ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರುದೊಳುದ್ಭಾವಿಪ" ಎಂದೂ, ನೇಮಿಚಂದನು "ಕಿವಿಯಿ೦ದೀ೦ಟಿಸುವರ ಸಮಸ್ತರಸಮಂ” ಎಂದೂ ಹೇಳಿರುವಂತೆ ಕಾವ್ಯಮೂಲಕವಾಗಿ ಶೋತ್ರೇಂದ್ರಿಯದಲ್ಲಿಯೇ ಉಂಟಾಗುವುದ ರಿಂದಲೂ ತಿರುಮಲಾರ್ಯನು

"ಕಡುಪಿಂ ಕೂರಾನೆ ಕಾಳ್ಕಿರ್ಚಡವಿ ಬರಸಿಡಿಲೇ ಬಳ್ಳಿ ಮಿಂಚೆಂಬಿವೆಲ್ಲಂ ।
ಪಡೆಗುಂ ನೋಳ್ಪರ್ಗೆ ಮೇಣುಬ್ಬೆಗದೊದವನವೇ ಮತ್ತಮೊಳಬ್ಬದೊಳ್ ಬಂ ॥
ದೊಡನೆಳ್ಳಂ ಪೆತ್ತು ಮಾಳ್ಳುಂ ಸಹೃದಯಹೃದಯಾಹ್ಲಾದಮಂ ... "

ಎಂದು ಸೂಚಿಸಿರುವಂತೆ ಲೋಕ ಪರಿಚಯವನ್ನು ಸಾಕ್ಷಾತ್ಕಾಗಿ ಮಾಡುವುದಕ್ಕಿಂತ ಕಾವ್ಯಮೂಲಕ ಮಾಡುವುದರಲ್ಲಿ ಸೌಕರ್ಯವೂ ಆನಂದಾತಿಶಯವೂ ಇರುವುದರಿಂದಲೂ "ಕಾಂತಾಸಮ್ಮಿತತಯೋಪದೇಶಯುಜೇ” ಎಂಬಂತೆ ವಿಷಯಗಳನ್ನು ಸರಸವಾಗಿಯೂ ಮನೋಹರವಾಗಿಯೂ ಕಾವ್ಯಗಳಲ್ಲಿ ಮಾತ್ರವೇ ಹೇಳುವುದರಿಂದಲೂ; ಇವಲ್ಲದೆ ಕಾವ್ಯ ಪಠನದಲ್ಲಿ ಉಂಟಾಗುವಷ್ಟು ಸೌಖ್ಯವು ಶಾಸ್ತ್ರಾದಿಗಳ ಪಠನದಲ್ಲಿ ಉಂಟಾಗದಿರುವುದರಿಂದಲೂ ; ಈ ಸುಖವನ್ನು ಅಜ್ಞ ಪಾಜ್ಯ ಧನಿಕದರಿದ್ರಾದಿ ತಾರತಮ್ಯವಿಲ್ಲದೆ ಸಕಲರೂ ಅನುಭವಿಸಬಹುದಾದರಿಂದಲೂ; ಆ ಕಾವ್ಯ