ಪುಟ:Vimoochane.pdf/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೋಗುತ್ತಿತ್ತು. ಹೆಚ್ಚು ಚೆಚ್ಚಾಗಿ ಬರೆತೊಡಗಿದ್ದ ಕನ್ನಡ ಪುಸ್ತಕ ಗಳು, ಎಷ್ಟು ಓದಿದರೂ ಮುಗಿಯದಂತಹ ಇಂಗ್ಲಿಷ್ ಪುಸ್ತಕಗಳು....

ಒಂದು ದಿನ ಹಾಗೆ ಪುಸ್ತಕ ಹಿಡಿದು ಕುಳಿತಿದ್ದಾಗ ಆ ಮಹಾನು

ಭಾವ ನಮ್ಮ ಮನೆಯ ಮೆಟ್ಟಲೇರಿ ಬಂದ. ತೀರ ಅಪರಿಚಿತವಾಗಿದ್ದ ಮುಖ.

"ಯಾರು?ಏನು ಬೇಕಾಗಿತ್ತು?"

"ತಮ್ಮ ಸಹವಾಸ ಲಾಭ.ಬಹಳ ದಿನಗಳಿಂದ ನಿಮ್ಮನ್ನ ಭೇಟಿ

ಯಾಗ್ಬೇಕೊಂತಿದ್ದೆ."

"ನನ್ನ ಭೇಟಿ?"

"ತಾವು ಚಂದ್ರಶೇಖರ ಅಲ್ವೇ?"

"ಹೌದು."

"ತಮ್ಮ ಭೇಟಿಯೇ."

"ತಾವು ಯಾರೋ ಗೋತ್ತಾಗಲ್ಲಿಲ್ಲವೇ!"

ಅವನು ತನ್ನ ಪರಿಚಯ ಹೇಳಿದ. ಪೋಲೀಸು ಖಾತೆಯ

.

ಸ್ಪೆಷಲ್ ಬ್ರಾಂಚೈನಲ್ಲಿ ಅವನೊಬ್ಬ ಸಬ್ ಇನ್ಸ್ಪೆಕ್ಟರು. ಎಳೆ ವಯಸ್ಸಿನ ಹೊಸ ಉದ್ಯೋಗಿ.ಹಾಗೆ ಪರಿಚಯ ಮಾಡಿಕೊಡು ತಿದ್ದಾಗಲೇ,ಅವನ ಸ್ವರದೊಳಕ್ಕೆ ಅಧಿಕಾರದ ದರ್ಪ ನುಸುಳಿ ಕೊಂಡಿತು.ನನ್ನ ಬಳಿ ಅರೆತೆರೆದು ಬೋರಲಾಗಿ ಬಿದ್ದಿದ್ದ ಡಿಕ್‌ನ್ಸನ ಕಾದಂಬರಿಯೊಂದನ್ನು ಎತ್ತಿಕೊಂಡ.

"ಓ!The Great Expectations!!ನಾನು ಕೂಡ

ಇದನ್ನು ತುಂಬ ಮೆಚ್ಚುಕೊಂಡಿದೀನಿ......ಐ ಸೀ.......ನೀವು ತುಂಬ ಸಾಹಿತ್ಯ ಓದ್ತೀರಿ ಹಾಗಾದರೆ

ನಾನು ಎಚ್ಚರವಾಗಿದ್ದೆ.ಈ ಬೆಸ್ತರವನು ಬಲೆ ಬೀಸಲು ನೀರಿನ

ಅಳ ನೋಡುತಿದ್ದ ಹಾಗೆ ತೋರಿತು.

"ಚಂದ್ರಶೇಖರ್, ನಾನು ಹಳೇ ರೀತಿಯವನಲ್ಲ. ನೀವೇನೂ

ಯೋಚಿಸ್ಬೇಕಾದ್ದಿಲ್ಲ, ನನ್ನಿಂದ ನಿಮಗೆ ಯಾವ ತೊಂದರೇನೂ ಆಗದು."