ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಣೆ, ೧೨] - ಆಯೋಧ್ಯಾಕಾಂಡವು. ನೋಡಿದೆ? ಎಲೆ ನೀಟೆ ! ಲೋಕದಲ್ಲಿ ತಂದೆತಾಯಿಗಳು ಬಹುಪ್ರೀತಿಯಿಂದ ಬಳೆಸಿದ ತಮ್ಮ ಮುದ್ದು ಮಕ್ಕಳನ್ನು ಬಿಟ್ಟುಬಿಡುವುದುಂಟು . ಹಾಗೆಯೇ ಒಂದುವೇಳೆ ಅನುರಕ್ತರಾದ ಗಂಡಹೆಂಡಿರೂ ಕಾರಣಾಂತರದಿಂದ ಒಬ್ಬರ ನ್ನೊಬ್ಬರು ತೊರೆದುಬಿಡುವುದುಂಟು. ಆ ವಿಷಯದಲ್ಲಿ ಇತರರಿಗೆ ಯಾವ ಹಾನಿಯೂ ಇರದು. ಅದಕ್ಕೆ ಯಾರೂ ಬಾಯಿಹಾಕಲಾರರು! ಈಗ ರಾಮ ಗೆ ಈ ವ್ಯಸನವು ಪ್ರಾಪ್ತವಾದುದನ್ನು ನೋಡಿದರೆ, ಈ ಸಮಸ್ತ ಪ್ರಹ ಚವೂ ಮರುಗದೆ ಇರಲಾರದು. ನಾನು ಈ ಅಕೃತ್ಯವನ್ನು ಮಾಡಿದುದೇ ಆದರೆ, ಈ ಲೋಕಕ್ಕೆ ವಿರೋಧಿಯಾಗುವೆನು. ಸತ್ಯಾಲಂಕಾರಭ ಷಿತನಾಗಿ, ದೇವಕುಮಾರನಂತೆ ಬರುತ್ತಿರುವ ರಾಮನನ್ನು ನೋಡಿ ಮಾತ್ರಕ್ಕೆ ನನ್ನ ಮೈಯೆಲ್ಲವೂ ಸಂತೋಷದಿಂದ ಉಬ್ಬುತ್ತಿರುವುದು. ಆಗ ನನ್ನು ನೋಡುತಿದ್ದ ಹಾಗೆಲ್ಲಾ ನನ್ನ ದೇಹದಲ್ಲಿ ಒಂದು ಹೊಸಯ್ರಸ ವುಂಟಾದಂತೆ ಕಾಣುವುದು. ಒಂದುವೇಳೆ ಸೂರನು ಉದಿಸದಿದ್ದರೂ, ಇಂದ್ರನು ಮಳೆಯನ್ನು ಸುರಿಸದಿದ್ದರೂ, ಈ ಪ್ರಪಂಚವು ಬದುಕಿರಬ ಹುದು ! ರಾಮನು ಈ ಸ್ಥಳವನ್ನು ಬಿಟ್ಟು ಹೊರಟರೆ, ಒಬ್ಬರಾದರೂ ಜೀವಿಸಿರಲಾರರೆಂದೇ ನನ್ನ ನಿಶ್ಚಯವು! ಎಲೆ ಕೇಡಾಳಿ ! ಯಾವಾಗಲೂ ಕೇಡನ್ನೇ ಕೋರುವವಳಾಗಿ, ನನಗೆ ಹಗೆಯಾಗಿ, ಮೃತ್ಯುಸ್ವರೂಪಳಾದ ನಿನ್ನನ್ನು ನಾನು ಬಹುಕಾಲದಿಂದ ಇದುವರೆಗೂ ತೊಡೆಯಮೇಲಿಟ್ಟು ಲಾಲಿಸುತಿದ್ದುದೆಲ್ಲವೂ, ಮಹಾವಿಷವುಳ್ಳ ಕಾಳಸಲ್ಪವನ್ನು ತೊಡೆಯಲ್ಲಿ ಟ್ಟುಕೊಂಡಂತಾಯಿತು ! ಈಗ ನೀನು ಅದಕ್ಕೆ ತಕ್ಕ ಫಲವನ್ನು ತೋರಿಸಿ ದೆ ! ನನ್ನ ಅಜ್ಞತೆಯಿಂದಲೇ ನಾನು ಕೆಟ್ಟೆನು ! ನನ್ನನ್ನೂ , ರಾಮನನ್ನೂ, ಲಕ್ಷಣವನ್ನೂ ತೊರೆದು ಭರತನು ನಿನ್ನೊಡಗೂಡಿ ನೆಮ್ಮದಿಯಿಂದ ಈರಾಷ್ಟ್ರವನ್ನೂ, ಪಟ್ಟಣಗಳನ್ನೂ ಅಳಲಿ! ನೀನೂ ನನ್ನ ಇಷ್ಟಬಂಧುಗಳೆ ಲ್ಲರನ್ನೂ ಕೊಂದು, ನನ್ನ ವೈರಿಗಳನ್ನು ಸಂತೋಷಪಡಿಸುತ್ತಿರು! ಎಲೆಷರು ಕಸ್ವಭಾವವುಳ್ಳವಳೆ! ಮೊದಲೇ ರಾಮನನ್ನು ಬಿಡಲಾರದ ಮಹಾವ್ಯಸನದಿಂ ದ ನೊಂದಿರುವ ನನ್ನನ್ನು, ಮೇಲೆಮೇಲೆ ಕೂರವಾಕ್ಯಗಳಿಂದಲೂ ಹೊರ ಯುತ್ತಿರುವೆಯಲ್ಲಾ!ಈ ಕ್ರೂರವಾಕ್ಯಗಳನ್ನಾಡುತ್ತಿರುವ ನಿನ್ನ ನಾಲಗೆಯು