ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೨] ಅಯೋಧ್ಯಾಕಾಂಡವು. ೩೩f ರಿಂದ, ನನ್ನ ಮನಸ್ಸಿನಲ್ಲಿರುವ ಅಭಿಪ್ರಾಯವನ್ನೆ, ನಾನು ಬಾಯಿಂದ ಹೇಳಿ ರುವೆನೆಂದು ತಿಳಿದುಕೊಳ್ಳುವನು. ನನ್ನ ಬಾಯಿಂದ ಹೊರಟುದನ್ನೇ ನಿಜ ವೆಂದು ಗ್ರಹಿಸಿ ಕಾಡಿಗೆ ಹೊರಡುವನು. ಅತ್ತಲಾಗಿ ರಾಮನು ಕಾಡಿಗೆ ಹೋದಕೂಡಲೇ, ಸಮಸ್ತಲೋಕವೂ ನನ್ನನ್ನು ಧಿಕ್ಕರಿಸದೆ ಬಿಡದು. ಈ ಲೋಕಾಪವಾದವೊಂದರಿಂದಲೇ, ವ್ಯವಸಾನವಾಗಲಾರದು. ಅಂತಹ ಮಹಾತ್ಮನಾದ ರಾಮನನ್ನು ಕಾಡಿಗೆ ಕಳುಹಿಸಿದರೆ, ಮೃತ್ಯುದೇವತೆಗೂ ಕೂಡ ನನ್ನಲ್ಲಿ ಕೋಪವುಂಟಾಗಿ, ನನ್ನನ್ನು ಒಡನೆಯೇ ಯಮಪುರಿಗೆ ಕರೆ ದುಯ್ಯದೆ ಬಿಡದು : ಎಲೆ ಪಾಪ ! ಪುರುಷಶ್ರೇಷ್ಠನಾದ ರಾಮನೂ ಕಾ ಡಿಗೆ ಹೊರಟು, ನಾನೂ ಮೃತಿಕೋಂದಿದಮೇಲೆ, ನನ್ನ ಕಡೆಯವರಾಗಿ ಉಳಿದ ಇಷ್ಟಬಂಧುಗಳವಿಷಯದಲ್ಲಿ ನೀವು ಯಾವ ಕೇಡನ್ನು ಮಾಡುವೆ ಯೋ ಕಾಣೆನು ! ಅಥವಾ ಕಸಿಯು ನನ್ನನ್ನೂ ರಾಮನನ್ನೂ, ಲಕ್ಷ ಶತ್ರುಘ್ನು ರೆಂಬ ಮಕ್ಕಳನ್ನೂ ಕಳೆದುಕೊಂಡಮೇಲೆ, ಆ ದುಃಖವನ್ನು ಸಹಿಸಲಾರದೆ ನನ್ನೊಡನೆಯೇ ಸಹಗಮನಮಾಡಿ ಪ್ರಾಣವನ್ನು ಬಿಟ್ಟುಬಿಡು ವಳು. ಸುಮಿತ್ರೆಯೂ ಆ ಮಾರ್ಗವನ್ನೇ ಅನುಸರಿಸುವಳು. ಹೀಗೆ ಕಸಿ ಯನ್ನೂ, ಸುಮಿತ್ರೆಯನ್ನೂ, ನನ್ನನ್ನೂ ರಾಮಲಕ್ಷಣಶತ್ರುಘ್ನು ರೆಂಬ ಮೂವರು ಮಕ್ಕಳನ್ನೂ ಏಕಕಾಲದಲ್ಲಿಯೇ ಕೆಡಿಸಿ, ನೀನೊಬ್ಬಳೇ ಸುಖಪಡಬೇಕೆಂದಿರುವೆಯಾ ? ಇದುವರೆಗೂ ಗುಣವಂತರಾದ ಅನೇಕರಾಜ ಶ್ರೇಷ್ಠರಿಂದ ಆದರಿಸಲ್ಪಟ್ಟು, ಯಾರ ಅಪವಾದಕ್ಕೂ ಸಿಕ್ಕದೆ, ಶಾಶ್ವತ ವಾಗಿದ್ದ ನಮ್ಮ ಇಕ್ಷಾಕುವಂಶದಿಂದ, ನನ್ನನ್ನೂ, ರಾಮನನ್ನೂ ಬಹಿಷ್ಕರಿ ಸಿದಮೇಲೆ, ಅಪವಾದಕ್ಕೆಡೆಯಾದ ಆ ವಂಶವನ್ನು ನೀನೊಬ್ಬಳೇ ನಿರಾತಂಕ ವಾಗಿ ಅಳಬೇಕೆಂದಿರುವೆಯಾ ? ಎಲೆ ಚಳೆ : ರಾಮನನ್ನು ಕಾಡಿಗೆ ಕಳು ಹಿಸುವುದು ಭರತನಿಗೆ ಸಮ್ಮತವಾಗುವಪಕ್ಷದಲ್ಲಿ, ನಾನು ಸತ್ತಮೇಲೆ, ಭರ ತನು ನನಗೆ ಪ್ರೇತಕೃತ್ಯವನ್ನೇ ಮಾಡಬೇಕಾದುದಿಲ್ಲ ! ಅಂತವನ ಕೈಯಿಂದ ಅಪರಕ್ರಿಯೆಗಳನ್ನು ಮಾಡಿಸಿಕೊಳ್ಳುವುದಕ್ಕೂ ನನಗೆ ಸಮ್ಮತವಿ ಲ್ಲ! ಎಲೆ ಅನಾರೈ ! ನೀನೇ ನನಗೆ ಶತ್ರುವಾಗಿ ಜನಿಸಿದೆಯಲ್ಲ ? ನಿನ್ನ ಕೋರಿಕೆಯು ಕೈಗೂಡಲಿ ! ನಾನೂ ಸತ್ತು, ಪುರುಷಶ್ರೇಷ್ಠನಾದ ರಾಮ 24