ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೯ ಸರ್ಗ, ೧೪.] ಅಯೋಧ್ಯಾಕಾಂಡವು. ಯು ಕಟ್ಟಿಹಾಕಿದ ಸತ್ಯಪಾಶವನ್ನು ಬಿಡಿಸಿಕೊಳ್ಳಲಾರದೆ ಹೋದನು. ಆತ ನ ಮನಸ್ಸಿಗೆ ದಿಗ್ಯಮವು ಹಿಡಿದಂತಾಯಿತು. ಆತನ ಮುಖವು ಬಣ್ಣಗುಂದಿ ತು, ರಥದ ನೊಗಕ್ಕೂ, ಚಕ್ರಗಳಿಗೂ ನಡುವೆ ಸಿಕ್ಕಿಕೊಂಡು,ಅತ್ತಿತ್ತ ಅಲು ಗಲಾರದೆ ಕಟ್ಟುಬಿದ್ದಿರುವ ಎತ್ತಿನಂತೆ ಸ್ತಬ್ಬನಾಗಿದ್ದನು. ದುಃಖದಿಂದ ಕು ರುಡನಂತೆ ಕಣ್ಣು ಕಾಣದವನಾಗಿದ್ದು, ಆಮೇಲೆ ಬಹುಪ್ರಯಾಸದಿಂದ ಮೆಲ್ಲ ಗೆ ಮನಸ್ಸನ್ನು ಸಮಾಧಾನಪಡಿಸಿ, ಧೈತ್ಯವನ್ನು ತಂದುಕೊಂಡು, ಕೈಕೇಯಿ ಯನ್ನು ನೋಡಿ ಒಂದಾನೊಂದುಮಾತನ್ನು ಹೇಳುವನು. (ಎಲೆ ಪಾಪಿನಿ ! ಹಿಂದೆ ಅಗ್ನಿ ಸಾಕ್ಷಿಕವಾಗಿ, ಮಂತ್ರಪುರಸ್ಸರವಾಗಿ ನಾನು ನಿನ್ನ ಕೈಯ್ಯನ್ನು ಹಿಡಿದಿದ್ದರೂ ಈಗ ಅದನ್ನು ಬಿಟ್ಟುಬಿಟ್ಟೆನು. ನೀನು ನನಗೆ ಹೆಂಡತಿಯಲ್ಲ. ಮತ್ತು ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಭರತನೂ ನನ್ನ ಮಗನಲ್ಲ! ನಿನ್ನೊಡನೆ ಆತನನ್ನೂ ತೊರೆದುಬಿಟ್ಟೆನು. ಎಲೆ ಕೈಕೇಯಿ ! ರಾತ್ರಿಯು ಕಳೆಯು ಇಬಂದಿತು. ಸೂರೈನು ಉದಿಸುವ ಸಮಯವಾಯಿತು. ಇನ್ನು ಗುರುಜನ ಗಳು ಬಂದು ರಾಮನ ಅಭಿಷೇಕಕ್ಕಾಗಿ ನನ್ನನ್ನು ತೊರೆಪಡಿಸುವರು. ಆ ಯ್ಯೋ ! ಆತನ ಅಭಿಷೇಕಕ್ಕಾಗಿ ಈಗ ಸಿದ್ಧಪಡಿಸಿರುವ ಸಾಮಗ್ರಿಗ ಳಿಂದಲೇ, ಅವನು ನನಗೆ ಅಪರಕ್ರಿಯೆಗಳನ್ನು ಮಾಡಬೇಕಾಗಿ ಬಂದಿರುವು ದಲ್ಲಾ! ಎಲೆ ಸೀಚೆ! ನೀನೂ ನಿನ್ನ ಮಗನೂ ನನಗೆ ತಕ್ಷಣವನ್ನು ನಡೆಸಬೇ ಕಾದುದೇ ಇಲ್ಲ. ಈಗ ಮಾಡಿರುವ ಅಭಿಷೇಕಪ್ರಯತ್ನವನ್ನು ನಾನು ಮುರಿ ದರೆ, ಈ ಮಹೋತ್ಸವವು ನಡೆಯುವುದೆಂದು ಮೊದಲು ಸಂತೋಷ ಭರಿತವಾಗಿದ್ದ ಜನಮ್ಮೆಲ್ಲವೂ ಈಗ ಅದಕ್ಕೆ ವಿಘತವುಂಟಾದುದನ್ನೂ ಕೇಳಿ ಉತ್ಸಾಹಭಂಗದಿಂದ ತಲೆಯನ್ನು ತಗ್ಗಿಸಿ ದುಃಖಿತರಾದಾಗ ಅದ ನ್ನು ನೋಡಿ ನಾನು ಹೇಗೆ ಸಹಿಸಲಿ ? ” ಎಂದನು. ಮಹಾತ್ಮನಾದ ದಶರಥರಾಜನು ಹೀಗೆ ಹೇಳುತ್ತಿರುವಾಗಲೇ, ಚಂದ್ರನಿಂದಲೂ, ನಕ್ಷತ್ರ ಗಳಿಂದಲೂ ಪ್ರಕಾಶಿಸುತ್ತಿದ್ದ ಆ ರಾತ್ರಿಯು ಕಳೆದು ಬೆಳಗಾಯಿತು. ಆ ಮೇಲೆ ಪಾಪಬುದ್ದಿಯುಳ್ಳ ಕೈಕೇಯಿಯು ಪುನಃ ಮತ್ತಷ್ಟು ಕೋಪವನ್ನು ತೋರಿಸುತ್ತ, ಕರಕಠೋರವಾದ ವಾಕ್ಯಗಳಿಂದ ರಾಜನನ್ನು ಕುರಿತು ಎ ಲೆ ರಾಜನೆ! ವಿಷಸಂಬಂಧವಾದ ಮಹಾವ್ಯಾಧಿಯಂತೆ, ನಿನ್ನ ಮಾ